ಬೆಂಗಳೂರು: ಭಾರತದ ಮುಂಚೂಣಿಯ ಆನ್ಲೈನ್ ಟ್ರಾವೆಲ್ ಕಂಪನಿ ಮೇಕ್ ಮೈ ಟ್ರಿಪ್ ಕರ್ನಾಟಕದ ಬೆಂಗಳೂರಿನಲ್ಲಿ ಎರಡು ಹೊಸ ಫ್ರಾಂಚೈಸಿ ಮಳಿಗೆಗಳನ್ನು ತೆರೆದಿದೆ. ಈ ಮಳಿಗೆಗಳು ಕಮ್ಮನಹಳ್ಳಿ ಮತ್ತು ಇನ್ಫೆಂಟ್ರಿ ರಸ್ತೆಯ ಪ್ರದೇಶದಲ್ಲಿದ್ದು ನಗರದಲ್ಲಿ ಕ್ರಮವಾಗಿ ಮೇಕ್ ಮೈಟ್ರಿಪ್ ನ 16 ಮತ್ತು 17ನೇ ಮಳಿಗೆಗಳಾಗಿವೆ ಹಾಗೂ ಕರ್ನಾಟಕದಲ್ಲಿ ಹದಿನಾಲ್ಕನೆಯದಾಗಿವೆ. ಈ ಫ್ರಾಂಚೈಸಿ ಜಾಲದ ವಿಸ್ತರಣೆಯು ಭಾರತದಲ್ಲಿ ಮುಂಚೂಣಿಯ 100+ ನಗರಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವ ವಿಸ್ತಾರ ಕಾರ್ಯತಂತ್ರದ ಭಾಗವಾಗಿದ್ದು ಜನರು ಅವರು ವಿಶ್ವಾಸವಿರಿಸುವವರೊಂದಿಗೆ ಹೆಚ್ಚು ಅನುಕೂಲಕರವಾಗಿ ಸಂವಹನ ನಡೆಸಲು ಅವಕಾಶ ಕಲ್ಪಿಸಿದೆ.
ಈ ಬೆಳವಣಿಗೆ ಕುರಿತು ಮೇಕ್ ಮೈಟ್ರಿಪ್ ನ ಹಾಲಿಡೇಸ್ ಅಂಡ್ ಎಕ್ಸ್ ಪೀರಿಯೆನ್ಸಸ್ ನ ಬಿಸಿನೆಸ್ ಹೆಡ್ ಜಸ್ಮೀತ್ ಸಿಂಗ್, ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳ ಪ್ರಾರಂಭದ ಮೂಲಕ ನಮ್ಮ ಭೌತಿಕ ಸಂಪರ್ಕ ವಿಸ್ತರಿಸಲು ಬಹಳ ಸಂತೋಷ ಹೊಂದಿದ್ದೇವೆ. ನಾವು ನಮ್ಮ ಪಾಲುದಾರರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಪ್ರವಾಸಿ ಸಮುದಾಯಗಳನ್ನು ನಿರ್ಮಿಸುವ ಮೂಲಕ ಹೈಪರ್-ಲೋಕಲ್ ಮಾರ್ಕೆಟಿಂಗ್ ಸಂಪರ್ಕ ಒದಗಿಸುವ ಗುರಿ ಹೊಂದಿದ್ದೇವೆ. ಈ ಉಪಕ್ರಮಕ್ಕೆ ಪ್ರಾರಂಭಿಕ ಪ್ರತಿಕ್ರಿಯೆಯು ಸಕಾರಾತ್ಮಕವಾಗಿದೆ. ನಾವು ಎಲ್ಲ ಫ್ರಾಂಚೈಸಿಗಳಲ್ಲೂ ಸೇವೆಯು ಸ್ಥಿರವಾಗಿರುವಂತೆ ತಂತ್ರಜ್ಞಾನ ಮತ್ತು ತರಬೇತಿಗೆ ಹೂಡಿಕೆ ಮಾಡಿದ್ದೇವೆ ಎಂದು ಹೇಳಿದರು.
ಕರ್ನಾಟಕವು ಮೇಕ್ ಮೈ್ರಿಪ್ ಹಾಲಿಡೇ ಪ್ಯಾಕೇಜ್ ಗಳಿಗೆ ವಿಸ್ತರಿಸುತ್ತಿರುವ ಮಾರುಕಟ್ಟೆಯಾಗಿದ್ದು ಪ್ರಸ್ತುತ ಶೇ.10 ಬುಕಿಂಗ್ ಗಳನ್ನು ನೀಡುತ್ತಿದೆ. ಯೂರೋಪ್, ಥಾಯ್ಲೆಂಡ್ ಮತ್ತು ದುಬೈಗಳು ಕರ್ನಾಟಕದಿಂದ ಬುಕ್ ಆಗುವ ಪ್ರಮುಖ ವಿದೇಶಿ ತಾಣಗಳಾಗಿದ್ದರೆ ಹಿಮಾಚಲ, ಕೇರಳ ಮತ್ತು ರಾಜಸ್ಥಾನಗಳು ಆದ್ಯತೆಯ ಸ್ಥಳೀಯ ತಾಣಗಳಾಗಿವೆ.