ಮಕ್ಕಳ ಉಚಿತ ಲಸಿಕಾ ಅಭಿಯಾನ: ಜಿಲ್ಲಾದ್ಯಂತ ಪರಿಣಾಮಕಾರಿ ಅನುಷ್ಠಾನಕ್ಕೆ ಡಿಸಿ ಟಿ. ಭೂಬಾಲನ ಸೂಚನೆ

ವಿಜಯಪುರ:  ಲಸಿಕೆಯಿಂದ ವಂಚಿತರಾಗಿರುವ ಹಾಗೂ ಲಸಿಕೆ ಪಡೆಯದೇ ಇರುವ ಹಾಗೂ ನಿರ್ಲಕ್ಷತನದಿಂದ ಕೈಬಿಟ್ಟು ಹೋಗಿರುವ ನಗರ ಹಾಗೂ ಗ್ರಾಮೀಣ ಭಾಗದ ಗರ್ಭಿಣಿಯರು ಹಾಗೂ ಮಕ್ಕಳನ್ನು ಗುರತಿಸಿ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಉಚಿತ ಲಸಿಕಾ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಅಧಿಕಾರಿಗಳು ಹಾಗೂ ಅಂಗನವಾಡಿ ಕೇಂದ್ರಗಳ ಆಶಾ ಕಾರ್ಯಕರ್ತೆಯರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಿಷನ್ ಇಂದ್ರ ಧನುಷ (IMI-5.0) ಎರಡನೇ ಸುತ್ತಿನ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಾನಾ ಇಲಾಖೆಗಳನ್ನು ಒಳಗೊಂಡ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹುಟ್ಟಿದ ಶಿಶುವಿನಿಂದ 5 ವರ್ಷದೊಳಗಿನ ಮಕ್ಕಳಿಗೆ ದೇಹದಲ್ಲಿ ಉಂಟಾಗುವ ನಾನಾ ಕಾಯಿಲೆಗಳಿಂದ ರಕ್ಷಣೆ ಒದಗಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ.ಈ ನಿಟ್ಟಿನಲ್ಲಿ ಒಟ್ಟು 11 ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ, ಆದರೆ ನಿಗದಿತ ಅಂತರದಲ್ಲಿ ನೀಡುವ 11 ಲಸಿಕೆಗಳ ಪೈಕಿ ಹಲವು ಮಕ್ಕಳು ಒಂದಿಷ್ಟು ಲಸಿಕೆ ಪಡೆದುಕೊಂಡಿರುವುದಿಲ್ಲ. ಹಾಗಾಗಿ ಅಂತಹ ಮಕ್ಕಳನ್ನು ಜಿಲ್ಲೆಯ ಮತ್ತು ತಾಲ್ಲೂಕಗಳಲ್ಲಿ ನಡೆಯುವ ಮಿಷನ್ ಇಂದ್ರಧನುಷ ಅಭಿಯಾನವು ಒಟ್ಟು 3 ಸುತ್ತಿನಲ್ಲಿ ನಡೆಯಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

ಮೊದಲನೇ ಸುತ್ತು ಆ.7 ರಿಂದ 12ರ ವರೆಗೆ, ಎರಡನೇ ಸುತ್ತು ಸೆ.11 ರಿಂದ 16 ಹಾಗೂ ಮೂರನೇ ಸುತ್ತು ಅ.9 ರಿಂದ 14ರವರೆಗೆ ಆಯೋಜಿಸಲಾಗಿದೆ.  ಮಕ್ಕಳ ಉಚಿತ ಲಸಿಕಾ ಅಭಿಯಾನ ಕಾರ್ಯ ಚಟುವಟಿಕೆಗಳು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಸಿಕಾ ಮಾಹಿತಿ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ಸೂಕ್ತ ರೀತಿಯ ಅಗತ್ಯ ಮಾಹಿತಿಯೊಂದಿಗೆ ಆರೋಗ್ಯ ಮತ್ತು ಕುಡುಂಬ ಕಲ್ಯಾಣ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡು ಅಭಿಯಾನ ಕಾರ್ಯಕ್ರಮವು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಅನುಷ್ಠಾನಗೊಳ್ಳಬೇಕು ಎಂದು‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ವಿರುದ್ಧ ಮಕ್ಕಳ- ರಕ್ಷಿಸಲು ಸಾರ್ವತ್ರಿಕ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ ಎಲ್ಲ ಮಕ್ಕಳನ್ನು ಪೋಷಕರು, ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ,ಲಸಿಕೆ ಪಡೆಯಬಹುದು. ಗ್ರಾಮದ ವಾರ್ಡಿನ ಆಶಾ ಕಾರ್ಯಕರ್ತೆಯರನ್ನು  ಸಂರ್ಪಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 643 ಲಸಿಕಾ ಕೇಂದ್ರಗಳಿದ್ದು, ಅದರಲ್ಲಿ 0-2 ವರ್ಷದ ಮಕ್ಕಳು-10210, 25 ವರ್ಷದ ಮಕ್ಕಳು-2456 ಹಾಗೂ ಗರ್ಭಿಣಿಯರು-283 ಎಲ್ಲ ಫಲಾನುಭವಿಗಳಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರತರಲಾದ “ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ” ದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಬಿಡುಗಡೆಗೊಳಿಸಿದರು.

ಈ ಸಭೆಯಲ್ಲಿ ಜಿಲ್ಲಾ ಆರ್. ಸಿ. ಎಚ್. ಅಧಿಕಾರಿಗಳಾದ ಡಾ. ಕೆ. ಡಿ. ಗುಂಡಬಾವಡಿ, ಡಿ.ಎಚ್.ಓ. ಡಾ. ರಾಜಕುಮಾರ ಯರಗಲ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಎಂ.ಬಿ. ಬೋರಣ್ಣನವರ, ಸಿಂದಗಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಆರ್.ಎಸ್.ಇಂಗಳೆ, ಜಿಲ್ಲಾ ಅರೋಗ್ಯಾಭಿವೃದ್ಧಿ ಹಿರಿಯ ಆರೋಗ್ಯ ನಿರೀಕ್ಷಕರು ನಜೀರ್ ಮುಲ್ಲಾ, ಮುದ್ದೇಬಿಹಾಳ ತಾಲೂಕು ಅರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಎನ್.ವ್ಹಿ.ಡಿ.ಸಿ. ಅಧಿಕಾರಿಗಳು ಡಾ. ಜೈಬುನ್ನಿಸಾ ಬೀಳಗಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ,ಡಾ. ರಾಜೇಶ್ವರಿ ಗೋಲಗೇರಿ, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಎಂ.ಬಿ. ಬಿರಾದಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸಂಪತ್ ಗುಣಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಲೂರ, ಕುಮಾರ ರಾಠೋಡ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌