ವಿಜಯಪುರ ತಾಲೂಕಿನ ನಾನಾ ಗ್ರಾ. ಪಂ. ಗಳಿಗೆ ಭೇಟಿ ನೀಡಿ, ನಾನಾ ಕಾಮಗಾರಿಗಳನ್ನು ಪರಿಶೀಲಿಸಿದ ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ಕನ್ನೂರ ಮತ್ತು ಮಖನಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನೂರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಅಮೃತ ಸರೋವರ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.  ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಪ್ರತಿ ದಿನ 300ಕ್ಕೂ ಹೆಚ್ಚಿನ ಜನರಿಗೆ ಈ ಕಾಮಗಾರಿಯಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು.  ನಿತ್ಯವೂ ಗ್ರಾಮದಲ್ಲಿ ಸ್ವಚ್ಛತಾ ವಾಹನ ಸಂಚರಿಸುವುದರ ಖಾತ್ರಿಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ವಿಜಯಪುರ ತಾಲೂಕಿನ ನಾನಾ ಗ್ರಾ. ಪಂ. ಗಳಿಗೆ ತೆರಳಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು

 

ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾ. ಪಂ. ಸದಸ್ಯರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು.  ಬೇರೆ ಬೇರೆ ಯೋಜನೆಗಳಡಿ ಗ್ರಾ. ಪಂ. ಗೆ ಸಾಕಷ್ಟು ಅನುದಾನ ಲಭ್ಯತೆ ಇದೆ.  ಅನುದಾನದ ಸರಿಯಾದ ಸದ್ಭಳಕೆ ಮಾಡಿಕೊಳ್ಳಬೇಕು.  ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳಲ್ಲಿ ಬೆಂಚ್ ಗಳಿರುವ ಕುರಿತು ಮಾಹಿತಿ ಪಡೆದು, ಬೆಂಚ್ ಕೊರತೆಯಿದ್ದಲ್ಲಿ ತುರ್ತಾಗಿ ಒದಗಿಸುವಂತೆಯೂ, ಗ್ರಾ. ಪಂ. ವ್ಯಾಪ್ತಿಯ ಎಲ್ಲ ಅಂಗನಾಡಿಗಳಿಗೆ ತುರ್ತಾಗಿ ಬೆಂಚ್, ಟೇಬಲ್ ಸೇರಿದಂತೆ ನಾನಾ ಆಟಿಕೆ ಸಾಮಗ್ರಿಗಳನ್ನು ವಿತರಣೆ ಮಾಡಲು ಸ್ಥಳದಲ್ಲಿದ್ದ ಪಿಡಿಒಗೆ  ಅವರಿಗೆ ಸೂಚಿಸಿದರು.

ಗ್ರಾಮ ಪಂಚಾಯತಿ ಸದಸ್ಯರು ಹೊಸದಾಗಿ ಕಟ್ಟಡ ಸ್ಥಳಕ್ಕಾಗಿ ಮನವಿ ಆಲಿಸಿದ ಅವರು, ಸ್ಥಳದ ಲಭ್ಯತೆಯಿದ್ದಲ್ಲಿ ಮಾಹಿತಿ ಪಡೆದುಕೊಂಡು ಪ್ರಸ್ತಾವನೆ ಸಲ್ಲಿಸಲು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಸೂಚಿಸಿದರು.

ನಂತರ ಗ್ರಾಮದಲ್ಲಿನ ಇತ್ತಿಚಿಗೆ ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನೇಮಕಾತಿ ಕುರಿತು ತಾಲೂಕಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.ನಂತರ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ನಿಯಮಾನುಸಾರ ಸಮವಸ್ತ್ರ ಒದಗಿಸುವ ಕ್ರಮಕ್ಕಾಗಿ ಟಿಎಚ್ಒ ಗೆ ಸೂಚಿಸಿದರು.

ಪ್ರಗತಿಯಲ್ಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳ ಸ್ನೇಹಿಯಾಗಿ ನಿರ್ಮಿಸುವಂತೆಯೂ, ಪಿಠೋಪಕರಣ ಮತ್ತು ಉದ್ಯಾನವನ ನಿರ್ಮಿಸುವಂತೆ ಪಿ. ಆರ್. ಇ. ಡಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಖಣಾಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು.  ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಮವಸ್ತ್ರ ಒದಗಿಸುವಂತೆ ಪಿಡಿಒ ಅವರಿಗೆ ಸೂಚಿಸಿದರು. ಕಟ್ಟಡದಲ್ಲಿರುವ ಗ್ರಂಥಾಲಯದ ಓದುಗರಿಗೆ ಇಲ್ಲಿನ ಗಣಕ ಯಂತ್ರ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಗಯ್ಯ, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ತಾಪಂ ಸಹಾಯಕ ನಿರ್ದೇಶಕ ಖಾಸಿಂಸಾಬ ಮಸಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಸಿ. ಮ್ಯಾಗೇರಿ, ಜಿಲ್ಲಾ ಪಂಚಾಯಿತಿ ಪೃಥ್ವಿರಾಜ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಪಿ. ಎ. ಹಿಟ್ನಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಮದೇವ ಶಿಂಧೆ, ಅರವಿಂದ ಲೋನಾರಮಠ, ತಾಂತ್ರಿಕ ಸಂಯೋಜಕ ಪರಶುರಾಮ ಶಹಾಪುರ, ತಾಂತ್ರಿಕ ಸಹಾಯಕ ಅಭಿಯಂತರ, ನರೇಗಾ ಯೋಜನೆಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌