ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕ್ವಿಟ್ ಇಂಡಿಯಾ ಚಳವಳಿ ಪ್ರಮುಖ ಕಾರಣ- ಅಶೋಕ ದಳವಾಯಿ

ವಿಜಯಪುರ: ದೇಶದಲ್ಲಿ ನಡೆದ 1942ರ ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯ ಹೋರಾಟದ ಅಂತಿಮ ಘಟ್ಟವಾಗಿತ್ತು.  ಬ್ರಿಟಿಷರಿಗೆ ಅಂತಿಮ ಎಚ್ಚರಿಕೆ ಆಗಿತ್ತು. ಅದುವೇ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕಾರಣವಾಯಿತು ಎಂದು ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ತಿಕೋಟಾ ತಾಲೂಕಿನ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿಡಿದ್ದ ಆಗಸ್ಟ್ ಕಾಂತ್ರಿ ನೆನಪು ಮತ್ತು ಶಾಂತವೇರಿ ಗೋಪಾಲಗೌಡ ಅವರ ಜೀವನ ಮತ್ತು ಸಮಕಾಲೀನತೆಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಲಕ್ಷಾಂತರ ಜನರನ್ನು ತೊಡಗಿಸಿಕೊಂಡರು.  ಆಗ ದೇಶದ ಜನರಲ್ಲಿ ಭಾರತೀಯ ಭಾವ ಮೂಡಿಸಿದರು.  ಇದು ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಶಕ್ತಿ ತುಂಬಿತು ಎಂದು ಅವರು ಹೇಳಿದರು.

ತೊರವಿ ಮಹಿಳಾ ವಿವಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಮಾತನಾಡಿದರು

ಸ್ವಾತಂತ್ರ್ಯ ನಮಗೆ ಹಗುರವಾಗಿ ಬಂದಿಲ್ಲ.  ನಮ್ಮ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಬಂದಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ.  ಶಾಂತವೇರಿ ಗೋಪಾಲಗೌಡರು ಶಾಲೆ-ಮನೆ ಬಿಟ್ಟು ಸ್ವಾತಂತ್ರö್ಯ ಹೋರಾಟಕ್ಕೆ ಧುಮಿಕಿದರು. ಇಂಥ ಲಕ್ಷಾಂತರ ಜನರು ಸ್ವಾತಂತ್ರö್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಶಾಂತವೇರಿ ಗೋಪಾಲಗೌಡರು ತಮ್ಮ ಕುಟುಂಬಕ್ಕಾಗಿ ಮಾತ್ರ ಶ್ರಮಿಸಲಿಲ್ಲ ಇಡೀ ಸಮುದಾಯದ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದರು.

ಬೆಂಗಳೂರಿನ ಶಾಂತಾವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಮಮನೋಹರ ಶಾಂತವೇರಿ ಮಾತನಾಡಿ, ನಮ್ಮಪ್ಪ ನಿಸ್ವಾರ್ಥದಿಂದ ಬದುಕಿದಂತಹ ವ್ಯಕ್ತಿ. ಅವರು ಸತತ ಮೂರು ಬಾರಿ ಶಾಸಕರಾದರೂ ಸಹ ಒಂದೇ ಒಂದು ಮನೆಯನ್ನು ಸ್ವಂತವಾಗಿ ಕಟ್ಟಿಸಿಕೊಳ್ಳಲಿಲ್ಲ. ಅತ್ಯಂತ ಸರಳ, ಸಾಧಾರಣವಾಗಿ ಬದುಕುವ ಮೂಲಕ ಎಲ್ಲರಿಗೂ ಮಾದರಿಯಾದಂತಹವರು ಎಂದು ಹೇಳಿದರು.

ಮಾಜಿ ಸಚಿವ ಎಸ್. ಕೆ. ಕಾಂತಾ ಮಾತನಾಡಿ, ಮೊದಲನೆ ಕಾಗೋಡು ಚಳುವಳಿ ಪ್ರಾರಂಭವಾಗಿದ್ದು ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರಿಂದ. ಅಂತಹ ಮಹಾನ್‌ವ್ಯಕ್ತಿ ಗೋಪಾಲಗೌಡರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷೆ ಸುಮನ್ ಎಸ್ ಕೋಲ್ಹಾರ ಮಾತನಾಡಿ, ಮಹಿಳೆಯರಿಗೆ ಸಮಾನತೆ ಎಂಬುವುದು ಒಂದು ದೊಡ್ಡ ಹೋರಾಟವಾಗಿದೆ. ನಾನು ಸಹ ರಾಜಕೀಯ ಜೀವನದಲ್ಲಿ ಅಂತಹ ನೂರಾರು ಸಮಸ್ಯೆಗಳನ್ನು ಎದುರಿಸಿದ್ದೇನೆ. ಒಬ್ಬ ಹೆಣ್ಣುಮಗಳು ಎಲ್ಲ ಹಕ್ಕುಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ ಎಂದು ತಮ್ಮ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.

ಭೀಮಾ ಹೋರಾಟಗಾರ ಪಂಚಪ್ಪ ಕಲಬುರ್ಗಿ ಮಾತನಾಡಿ, ಒಂದು ಬತ್ತಿ ತನ್ನನ್ನು ಸುಟ್ಟುಕೊಂಡು ಜಗತ್ತಿಗೆ ಬೆಳಕನ್ನು ನೀಡುತ್ತದೆ.  ಅದೇ ರೀತಿ ಶಾಂತವೇರಿ ಗೋಪಾಲಗೌಡರು ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದಂತಹ ಮಹಾನ್ ಚೇತನ ಎಂದು ಬಣ್ಣಿಸಿದರು.

ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಯಾವುದಕ್ಕೂ ಹಿಂಜರಿಯದೆ ಸ್ವಾಭಿಮಾನದಿಂದ ನಡೆದ ವ್ಯಕ್ತಿ. ಹುಟ್ಟು ಹೋರಾಟಗಾರ, ಸಂಘಟನಕಾರ ಎಂದೇ ಗುರುತಿಸಿಕೊಂಡವರು. ಯಾರೆ ಕಷ್ಟ ಎಂದು ಬಂದರೆ ಅವರ ಕಣ್ಣೀರು ಒರೆಸುವಂತಹ ಕೆಲಸ ಮಾಡಿದವರು. ರೈತರಿಗಾಗಿ ಹೋರಾಡುವ ಮೂಲಕ ಅವರ ಹಕ್ಕುಗಳನ್ನು ತಂದುಕೊಡುವಲ್ಲಿ ಶ್ರಮಿಸಿದವರು. ಎಂದಿಗೂ ತಮಗಾಗಿ ಬದುಕದೆ ಸಮಾಜಕ್ಕಾಗಿ, ಬೇರೆಯವರಿಗಾಗಿ ಬದುಕಿದವರು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತೊರವಿ ಗ್ರಾ. ಪಂ. ಅಧ್ಯಕ್ಷೆ ಪದ್ಮಾಬಾಯಿ ರೇವಣಸಿದ್ದ ನಡಗಡ್ಡಿ, ಸಮಾಜವಾದಿ ಮುಖಂಡ ಅಪ್ಪಾರಾವ ಯರನಾಳ, ಧಾರವಾಡ ಕೃಷಿ ವಿವಿಯ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಪೋದ್ದಾರ, ರೈತ ಮುಖಂಡ ಶಿವಾನಂದ ಕುಗ್ವೆ, ಎಸ್.ಬಿ. ಪಾಟೀಲ, ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಸಮಿತಿಯ ಸದಸ್ಯರು, ರೈತ ಮಹಿಳೆಯರು, ರೈತ ಮುಖಂಡರ ಮತ್ತು ಸಿಂಡಿಕೇಟ್, ಅಕಾಡೆಮಿಕ್ ಸದಸ್ಯರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರಿಂದ ನಾಡಗೀತೆೆ, ಮಹಿಳಾ ಗೀತೆ ಹಾಡಿದರು.  ಸಾಗರದ ಶಿವಾನಂದ ಕುಗ್ವೆ ಹಾಗೂ ತಂಡ ಜೀವಪರ ಹೋರಾಟ ಗೀತೆ ಹಾಡಿದರು.  ಗಣ್ಯರು ಶಾಂತವೇರಿ ಗೋಪಾಲಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  ವಿವಿಯ ಹಿಂದುಳಿದ ವರ್ಗಗಳ ಕೋಶದ ಸಂಯೋಜಕ ಪ್ರೊ. ವಿಷ್ಣು ಎಂ. ಶಿಂಧೆ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಸ್ವಾಗತಿಸಿದರು.  ಉಪಕುಲಸಚಿವ ಪ್ರೊ. ಯು. ಕೆ. ಕುಲಕರ್ಣಿ ವಂದಿಸಿದರು.  ಕ್ರೀಡಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಹಣಮಂತಯ್ಯ ಪೂಜಾರಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌