ಗ್ರಾಮೀಣ ಕೂಲಿ ಕಾರ್ಮಿಕರ ಶಿಶು ಪೋಷಣೆ ಸರಕಾರದ ಮಡಿಲಿಗೆ: ಜಿ. ಪಂ. ಸಿಇಓ ರಾಹುಲ್ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲು ರಾಜ್ಯ ಸರಕಾರ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ.  ಈ ಮೂಲಕ ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಜವಾಬ್ದಾರಿಯನ್ನು ಸರಕಾರ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ […]

ಸಿಂದಗಿ ತಾಲೂಕು ಕಚೇರಿಗಳಿಗೆ ಭೇಟಿ ಟಿ. ಭೂಬಾಲನ ಭೇಟಿ, ಪರಿಶೀಲನೆ- ತಾಲೂಕಾದ್ಯಂತ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸೂಚನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಾಲೂಕಿನಾದ್ಯಂತ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು. ಸಿಂದಗಿ ನೂತನ ತಾಲೂಕು ಆಡಳಿತ ಸೌಧ ಕಟ್ಟಡದ ಸ್ಥಳ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗೆ ವೇಗ ನೀಡಿ, ತೀವ್ರಗತಿಯಲ್ಲಿ […]

ವಿಜಯಪುರ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಮೇರಾ ದೇಶ ಮೇರಾ ಮಿಟ್ಟಿ ಕಾರ್ಯಕ್ರಮ- ಯುವಜನತೆ ದೇಶ ಸೇವೆ ಮಾಡಲು ಪಣತೋಡಿ- ಸಿ. ಕೆ. ಹೊಸಮನಿ

ವಿಜಯಪುರ: ಯುವಕರು ದೇಶ ಸೇವೆ ಮಾಡಲು ಪಣತೊಡಬೇಕು ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಕೆ. ಹೊಸಮನಿ ಹೇಳಿದ್ದಾರೆ. ನಗರದ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್. ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯದ ಭವ್ಯ ನಾಗರಿಕರು.  ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯಶೋಗಾಥೆಯ ಬಗ್ಗೆ ತಿಳಿದುಕೊಳ್ಳಬೇಕು.  ಅವರ ಹೋರಾಟದ ವಿಚಾರಗಳು ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು. […]

ನಿವೃತ್ತಿಯ ಬಳಿಕ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿರುವ ವಂದಾಲದ ರೈತನ ಯಶೋಗಾಥೆ

ವಿಜಯಪುರ: ನೌಕರಿಯಲ್ಲಿದ್ದಾಗ ಜಾನುವಾರುಗಳು ಸೇವೆ ಮಾಡಿದ ರೈತ ನಿವೃತ್ತಿಯ ನಂತರ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿದ್ದಾರೆ.  ಪಶುವೈದ್ಯಕೀಯ ಸಹಾಯಕರಾಗಿದ್ದ ಇವರು ಈಗ ಅಪ್ಪಟ ಮಣ್ಣಿನ ಮಗನಾಗಿ ದುಡಿಯುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.   ಇದು ಬರದ ನಾಡಿನ ವ್ಯಕ್ತಿಯೊಬ್ಬರು ನಿವೃತ್ತಿ ಜೀವನದಲ್ಲೂ ಆಸಕ್ತಿಯಿಂದ ಬೇಸಾಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಸ್ಟೋರಿ.  ಸೇವಾ ನಿವೃತ್ತಿಯಾದ ನಂತರ ಬಹುತೇಕರು ವಿಶ್ರಾಂತ ಜೀವನ ಸಾಗಿಸುತ್ತಾರೆ.  ಆದರೆ, ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಬಸಪ್ಪ ಸಿದ್ದಪ್ಪ ಕುಂಬಾರ ಇದಕ್ಕೆ ಅಪವಾದವಾಗಿದ್ದಾರೆ.  […]