ವಿಜಯಪುರ: ಏಳೆಂಟು ತಿಂಗಳಲ್ಲಿ ರಾಜ್ಯ ಸರಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ವಿಜಯಪುರ ನಗರದಲ್ಲಿಬ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಔತಣಕೂಟ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ಕಾರಣಗಳಿಂದ ಬಿಜೆಪಿಗೆ ಸೋಲಾಯಿತು. ಅನೇಕ ತಪ್ಪು ನಿರ್ಣಯಗಳು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ, ಬಿಜೆಪಿ ಸರಕಾರದಲ್ಲಿ ಕೆಲವು ಸಚಿವರು ಮಾಡಿದ ಭ್ರಷ್ಟಾಚಾರ, ಬಿಜೆಪಿ ಸರಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಮಾಡಲಾಯಿತು. ಈ ಎಲ್ಲ ವಿಚಾರಗಳಿಂದ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳುವಂತಾಯಿತು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಹಳಷ್ಟು ಕಡೆಗಳಲ್ಲಿ ಚುನಾವಣೆ ಪ್ರಚಾರ ಮಾಡಿದರು. ಅಂದು ಪ್ರಧಾನಿ ನರೇಂದ್ರ ಮೋದಿ ಅವರುಪ್ರಚಾರಕ್ಕೆ ಬರದಿದ್ದರೇ ಇನ್ನೂ ಚಿತಾಜನಕವಾಗಿ ಸೋಲುತ್ತಿದ್ದೇವು ಎಂದು ಅವರು ಹೇಳಿದರು.
ಈಗ ರಾಜ್ಯದಲ್ಲಿ ಬಿಜೆಪಿ 66 ಸ್ಥಾನ ಗೆಲ್ಲಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಕಾರಣ. ಮೋದಿಯವರ ಪರಿಶ್ರಮ, ಪ್ರವಾಸದಿಂದಾಗಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ ಎಂದು ಅವರು ಹೇಳಿದರು.
ನಾನು ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ಅತೀ ಹೆಚ್ಚು ಪ್ರವಾಸ ಮಾಡಿರುವ ನಂಬರ್ ಒನ್ ರಾಜಕಾರಣಿ. ನಾನು 44 ಕಡೆಗಳಲ್ಲಿ ಪ್ರಚಾರ ಸಭೆ ಮಾಡಿದ್ದೇನೆ. ಕೆಲವೊಂದು ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸಾಬರಿಗೂ ನಮಗೆ ಚೆನ್ನಾಗಿದೆ.
ನೀವು ಮುಸ್ಲಿಮರ ಬಗ್ಗೆ ಮಾತಾಡಬೇಡಿ ಎಂದು ಹೇಳಿದ್ದರು. ಏನು ನಾಲ್ಕೈದು ಸಾವಿರ ಸಾಬರ ವೋಟ್ ಬರ್ತಾವೋ ಇಲ್ಲವೋ, ಆದರೆ 50 ಸಾವಿರ ವೋಟ್ ಕಳೆದುಕೊಳ್ಳಬೇಕಾಗುತ್ತದೆ. ಒಂದಕ್ಕೆ ಗಟ್ಟಿಯಾಗಿರಬೇಕು. ನಾನು ಗಟ್ಟಿಯಾಗಿದ್ದೇನೆ ಎಂಬ ಕಾರಣಕ್ಕೆ ಗೆದ್ದಿದ್ದೇನೆ. ವಿಜಯಪುರದಲ್ಲಿ ನನ್ನನ್ನು ಸೋಲಿಸಲು ಎಷ್ಟು ಪ್ರಯತ್ನಗಳು ನಡೆದವು ಎಂಬುದು ತಮಗೆಲ್ಲರಿಗೂ ಗೊತ್ತಿದೆ ಎಂದು ಯತ್ನಾಳ ಹೇಳಿದರು.
ಈಗ ವಿಜಯಪುರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಮಂತ್ರಿಯಾಗಿದ್ದಾರೆ. ಒಬ್ಬ ಮಂತ್ರಿ ವಿಜಯಪುರದಲ್ಲಿ ಮೆರವಣಿಗೆ ಮಾಡಿಕೊಳ್ಳಲಿಲ್ಲ. ಮತ್ತೊಬ್ಬ ಮಂತ್ರಿ ಮೆರವಣಿಗೆ ಮಾಡಿಕೊಂಡು ಸಿದ್ದೇಶ್ವರ ದೇವಸ್ಥಾನದ ಬಳಿ ಮುಸ್ಲಿಂ ಧ್ವಜ ಹಾರಿಸಿದರು. ಆಗ. ನಾಲ್ಕೈದು ಸಾವಿರ ಜನ ಸೇರಿದ್ದರು. ಇನ್ನೊಬ್ಬ ಮಂತ್ರಿ ಯಾಕೆ ಮೆರವಣಿಗೆ ಮಾಡಿಕೊಳ್ಳಲಿಲ್ಲ ಎಂದರೆ, ವಿಜಯಪುರ ನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಸೋತಿದ್ದಕ್ಕೆ ನಾನು ವಿಜಯಪುರದಲ್ಲಿ ಮೆರವಣಿಗೆ ಮಾಡಿಕೊಳ್ಳಲಿಲ್ಲ ಎಂದು ಹೇಳುತ್ತಾನೆ ಎಂದು ಅವರು ಪರೋಕ್ಷವಾಗಿ ಜವಳಿ, ಸಕ್ಕರೆ ಮತ್ತು ಎ. ಪಿ. ಎಂ. ಸಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ವೋಟ್ ಗಳಿಗೆ ಬೆಲೆ ಇಲ್ಲವೇನು? ಎಂದು ಪ್ರಶ್ನೆ ಮಾಡಿದ ಅವರು, ಇನ್ನೊಬ್ಬ ಮಂತ್ರಿ ಹೊಡೆದೇ ಹೊಡೆದರು. ಮೊನ್ನೆ ವಿಧಾನಸಭೆಯಲ್ಲಿ ಅವರಿಗೆ ನಮಗೆ ಆಯ್ತು ಎಂದು ಶಾಸಕರು ಹೇಳಿದರು.
ಕಾಂಗ್ರೆಸ್ ಸಚಿವರ ವಿರುದ್ದ ಕಿಡಿ, ಅಡ್ಜೆಸ್ಟಮೆಂಟ್ ರಾಜಕಾರಣದ ಬಗ್ಗೆ ಮತ್ತೆ ಯತ್ನಾಳ ಆರೋಪ
ವಿಧಾನಸಭೆ ಅಧಿವೇಶನದಲ್ಲಿ ಸಚಿವ ಕೆ. ಜೆ. ಜಾರ್ಜ್ ಹಾರಾಡಿದ. ನಿಮ್ಮ ಹತ್ತಿರ ದುಡ್ಡು ಐತಿ ಅಂತ ಹಾರಾಡಬೇಡ ಎಂದು ಹೇಳಿದೆ. ವಿಧಾನಸಭೆ ಅಧಿವೇಶನ ಈ ಸಲ ನಂದೇ ಇತ್ತು. ಡಿ. ಕೆ. ಶಿವಕುಮಾರ ಹಾರಾಡಿದ. ಈಗ ಗೂಂಡಾಗಿರಿ ನಡೆಯಲ್ಲ ಎಂದು ಹೇಳಿದೆ. ಏಕೆಂದರೆ ನಮ್ಮದು ಯಾರ ಜೊತೆ ಅಡ್ಜೆಸ್ಟಮೆಂಟ್ ಇಲ್ಲ ಎಂದು ಯತ್ಬಾಳ ಹೇಳಿದರು.
ನೀನೇ ವಿಪಕ್ಷ ನಾಯಕ ಆಗ್ತಿಯಾ ಎಂದು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಹೇಳಿದರು. ನೀವು ಬಿಡಬೇಕು ಅಲ್ಲವೇ ಎಂಎಲ್ಎ ಗಳು ಅಡ್ಜೆಸ್ಟ್ ಮೆಂಟ್ ಇದ್ದೀರಿ ಎಂದು ನಾನು ಹೇಳಿದೆ. ನೀವು ಹೇಗೆ ಆಯ್ಕೆ ಆಗಿದ್ದೀರಿ ಕೆಲವೊಂದು ಲೀಡರ್ ಗಳು ಅಡ್ಜೆಸ್ಟ್ ಮೆಂಟ್ ನಿಂದ ಆಯ್ಕೆ ಆಗಿದ್ದಾರೆ ಎಂದು ಅವರಿ ಹೇಳಿದರು.
ಡಿಸಿಎಂ ಡಿ. ಕೆ. ಶಿವಕುಮಾರ ವಿರುದ್ದ ಯತ್ನಾಳ ವಾಗ್ದಾಳಿ
ಡಿಸಿಎಂ ಡಿ. ಕೆ. ಶಿವಕುಮಾರ ಹೇಗೆ ಹಾರಾಡ್ತಿದ್ದ? ಏಯ್ ಹೋಗೋ ನಿನ್ನಂಥ ಸಾಕಷ್ಟು ಮಂದಿ ನೋಡಿನಿ ಹೋಗೋ ಎಂದು ಹೇಳಿದ್ದೆ ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆ ಟೀಕಿಸಿದ ಯತ್ನಾಳ
ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಟೀಕಿದ ಅವರು, ಈ ಯೋಜನೆಗಳಿಂದಾಗಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ದುಡ್ಡು ಮಾಡಿಕೊಳ್ಳಲು ಪೈಪೋಟಿ ನಡೆಸಿದ್ದಾರೆ. ನನ್ನದು ಇದು ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಡಿ. ಕೆ. ಶಿವಕುಮಾರ ಮುಂದೆ ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಸಿಎಂ ಆಗಬೇಕು ಎಂದು ಹೊರಟಿದ್ದಾರೆ. ಇವರಿಬ್ಬರ ಮಧ್ಯೆ ಶಾಸಕರು ನಮಗೇನು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ
ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಈಗ ಕೇಳಿಬೇಡಿ ಎಂದು ಹೇಳಿದ್ದಾರೆ. ಇನ್ನು ಪ್ರತಿಪಕ್ಷದ ಶಾಸಕರಿಗೆ ಅನುದಾನ ಕೊಡೋದು ದೂರದ ಮಾತು ಎಂದು ಅವರು ಹೇಳಿದರು.
ಇನ್ನೂ ಏಳೆಂಟು ತಿಂಗಳ ಕಾಯಿರಿ, ನಮ್ಮದೇ ಸರಕಾರ ಬರುತ್ತದೆ
ಏಳೆಂಟು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಬೀಳುತ್ತದೆ. ಯಾರೇ ಏನೇ ಭವಿಷ್ಯ ನುಡಿದರೂ ಮತ್ತೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗುತ್ತಾರೆ. ಮೋದಿ ನೋಡಿ ಲೋಕಸಭೆ ಚುನಾವಣೆಯಲ್ಲಿ ವೋಟ್ ಹಾಕೋಣ. ವಿಜಯಪುರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಹೊಸ ಸರಕಾರ ಬಂದಾಗ ಮೂರು ತಿಂಗಳ ಸಮಯ ಕೊಡಬೇಕಾಗುತ್ತದೆ. ಇನ್ಮು ಮುಂದೆ ನಮ್ಮ ಹೋರಾಟ ಆರಂಭವಾಗಲಿದೆ. ಇತ್ತೀಚೆಗೆ ಒಬ್ಬರು ಬಂದು ನನ್ನ ವಿರುದ್ಧ ಆರೋಪ ಮಾಡಿದ್ದರು. ಏನೇ ಕೊಡುವುದಿದ್ದರೇ ಗೋಶಾಲೆಗೆ ಕೊಡಿ ಅಂತ ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾನು ಯಾವುದೇ ವರ್ಗಾವಣೆ ದಂಧೆ ಮಾಡಿಲ್ಲ. ನಾನು ಯಾವತ್ತೂ ವರ್ಗಾವಣೆ ದಂಧೆ ಮಾಡಿಲ್ಲ
ನನಗೆ ಬೇಕಾದ ಅಧಿಕಾರಿಗಳನ್ನು ಸರಕಾರ ನನ್ನ ಕ್ಷೇತ್ರಕ್ಕೆ ಹಾಕಿಕೊಟ್ಟಾಗ ಅವರು ಬಂದು ಭೇಟಿಯಾಗಿ ಹೂಗುಚ್ಛ ಕೊಡುತ್ತಿದ್ದರು. ಆಗ ಅಧಿಕಾರಿಗಳು ನಿಮ್ಮದು ಏನಾದರೂ ಇದೆಯೇನು ಅಂತ ಕೇಳುತ್ತಿದ್ದರು. ಆಗ ನಾನು ಯಾವುದೇ ಹಣ ತೆಗೆದುಕೊಳ್ಳಲ್ಲ. ಗೋಶಾಲೆಗೆ ನಿಮ್ಮಿಂದ ಏನಾದರೂ ಸಹಾಯ ಮಾಡಿ ಎಂದು ಹೇಳುತ್ತಿದ್ದೆ. ಗೋಶಾಲೆ ಹೆಸರಲ್ಲಿ ದುಡ್ಡು ತಿನ್ನುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.