ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಗ್ರಂಥಪಾಲಕರ ದಿನಾಚರಣೆ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಕ್ಲಬ್ ತರಬೇತಿ ಶಿಬಿರ ನಡೆಯಿತು.
ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಾಲೇಜಿನಲ್ಲಿ ಸಾಕಷ್ಟು ಪುಸ್ಸತಕಗಳ ಜೊತೆಗೆ ಡಿಜಿಟಲ್ ಮಾಹಿತಿ ಮತ್ತು ಇ- ರಿಸರ್ಚ್ ಸೌಲಭ್ಯಗಳು ಲಭ್ಯವಿವೆ. ಇದರ ಸದುಪಯೋಗ ಪಡೆಯಬೇಕು. ಇಲ್ಲಿನ ಗ್ರಂಥಾಲಯದಲ್ಲಿ ಉತ್ಕ್ರಷ್ಠ ಮಟ್ಟದ ಸೌಲಭ್ಯಗಳು ಸಿಗಲು ಗ್ರಂಥಾಲಯದ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ವಿಭಾಗದಿಂದ ಪ್ರಕಟಿಸಲಾದ ಗ್ರಂಥಾಲಯ ನ್ಯೂಸ್ ಲೆಟರ್ ಮತ್ತು ಸಂಶೋಧನಾ ಪ್ರಗತಿಯ ರಿರ‍್ಚವಾಲ್ ಅನಾವರಣ ಮಾಡಲಾಯಿತು.
ಗ್ರಂಥಾಲಯ ಸೌಲಭ್ಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿದ, ಹೆಚ್ಚು ಬಾರಿ ಗ್ರಂಥಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ, ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಂಸಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಂಥಪಾಲಕ ಡಾ. ಎಂ. ಎಂ. ಬಾಚಲಾಪುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿ. ವಿ. ಪಾಟೀಲ, ಡಾ. ಪ್ರದೀಪ ಮಾಳಜಿ, ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾ ಬೂದಿಹಾಳ ವಂದಿಸಿದರು. ಪ್ರಾದ್ಯಾಪಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.