ಆಲಮಟ್ಟಿ ನಾರಾಯಣಪುರ ಜಲಾಷಯ ವ್ಯಾಪ್ತಿಯ ರೈತರಿಗೆ ಚಾಲು ಬಂದ್ ಪದ್ಧತಿಯಲ್ಲಿ ನೀರು ಬಿಡುಗಡೆ- ಸಚಿವ ಆರ್ ಬಿ ತಿಮ್ಮಾಪುರ

ವಿಜಯಪುರ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಷಯ ವ್ಯಾಪ್ತಿಯ ಕಾಲುವೆಗಳಿಗೆ ಚಾಲು ಮತ್ತು ಬಂದ್ ಪದ್ಧತಿಯಲ್ಲಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮತ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ನೇತ್ವತ್ವದಲ್ಲಿ 2023-24ನೇ ವರ್ಷದ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಬಾರಿ ಮುಂಗಾರು ಹಂಗಾಮಿಗೆ 14 ದಿನ ಚಾಲು ಹಾಗೂ 10 ದಿನ ಬಂದ ಪದ್ಧತಿ ಅನುಸಾರವಾಗಿ ನೀರು ಹರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ಒಳಹರಿವು ಕ್ಷೀಣವಾಗಿದ್ದು ಹಾಗೂ ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಒಳಹರಿವು ಸಂಪೂರ್ಣ ಸ್ಥಗಿತವಾಗುವ ಮುನ್ಸೂಚನೆ ಇರುವುದರಿಂದ ಆ.23ರಿಂದ 10 ದಿನಗಳ ಬಂದ್ ಪದ್ಧತಿಯನ್ನು ಅನುಸರಿಸುವುದು. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವನ್ನು ಆಧರಿಸಿ ಪುನ: ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಆಲಮಟ್ಟಿಯಲ್ಲಿ ಸಚಿವ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು

27.07.2023ರಿಂದ ಇಲ್ಲಿಯವರೆಗೆ ಕಾಲುವೆ ಜಾಲಕ್ಕೆ ಸತತವಾಗಿ 14.48 ಟಿಎಂಸಿ ನೀರು ಹರಿಸಲಾಗಿದ್ದು, ಮುಂಗಾರು ಹಂಗಾಮಿಗೆ ನೀರು ಪೂರೈಸಬೇಕಾದಲ್ಲಿ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಿ ನೀರು ಬಿಡುಗಡೆ ಮಾಡುವುದು. ನೀರಾವರಿಗಾಗಿ 70 ದಿನಗಳು ನೀರು ಹರಿಸುವುದು ಹಾಗೂ 37 ದಿನಗಳು ಬಂದ ಮಾಡಲು ನಿರ್ಧರಿಸಲಾಯಿತು.

ಕಾಲುವೆಗೆ ನೀರು ಬಿಡುವ ದಿನಾಂಕಗಳು

ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ ಆಗಸ್ಟ್ 8 ರಿಂದ 22ರವರೆಗೆ 14 ದಿನ, ಆಗಸ್ಟ್ 30ರಿಂದ ಸೆಪ್ಟಂಬರ್ 12ರವರೆಗೆ 14, ಸೆಪ್ಟಂಬರ್ 23 ರಿಂದ ಅಕ್ಟೋಬರ್ 6 ರವರೆಗೆ 14, ಅಕ್ಟೋಬರ್ 17 ರಿಂದ ಅಕ್ಟೋಬರ್ 30ರ ವರೆಗೆ 14 ಹಾಗೂ ನವೆಂಬರ್ 10 ರಿಂದ ನವೆಂಬರ್ 23ರವರೆಗೆ 14 ದಿನಗಳು ಸೇರಿದಂತೆ ಒಟ್ಟು 70 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಅದರಂತೆ ಆಗಸ್ಟ್ 23 ರಿಂದ 29ರವರೆಗೆ 7 ದಿನ, ಸೆಪ್ಟಂಬರ್ 13 ರಿಂದ 22 ರವರೆಗೆ 10, ಅಕ್ಟೋಬರ್ 7 ರಿಂದ 16ರವರೆಗೆ 10 ಹಾಗೂ ಅಕ್ಟೋಬರ್ 31 ರಿಂದ ನವೆಂಬರ್ 9ರವರೆಗೆ 10 ದಿನಗಳು ಸೇರಿದಂತೆ 37 ದಿನಗಳು ಬಂದ್ ಪದ್ಧತಿ ಅನುಸರಿಸಲು ನಿರ್ಧರಿಸಲಾಯಿತು.

ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಒಳಹರಿವು

12.07.2023ರಂದು ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ನೀರಿನ ಒಳಹರಿವು ಪ್ರಾರಂಭವಾಗಿದ್ದು, ಮೇಲ್ಭಾಗದ ಒಳಹರಿವನ್ನು ಆಧರಿಸಿದ ಹೊರಹರಿವನ್ನು ನಿಯಂತ್ರಿ ಆಲಮಟ್ಟಿ ಜಲಾಶಯದಲ್ಲಿ ಇಂದಿನವರೆಗೆ ಜಲಾಶಯದ ಮಟ್ಟವನ್ನು ಪೂರ್ಣಮಟ್ಟ 519.60ಮೀ. ಗೆ ಕಾಯ್ದುಕೊಳ್ಳಲಾಗಿದೆ.  ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮಳೆ ಇತ್ತೀಚೆನ ವಾರದಿಂದ ಕ್ಷೀಣಿಸಿದೆ.  ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಈ ವರ್ಷದಲ್ಲಿ ಮುಂಗಾರು ಹಂಗಾಮಿಗೆ ಅವಶ್ಯವಿರುವ 67 ಟಿಎಂಸಿ ನೀರು ಸಂಗ್ರಹವಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಜುಲೈ ತಿಂಗಳಲಿನಲ್ಲಿ ವಾಡಿಕೆ ಮಳೆ ಬಾರದೇ ಇರುವುದರಿಂದ ಕುಂಠಿತವಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಒಟ್ಟು 6.67 ಲಕ್ಷ್ ಹೆಕ್ಟೇರ್ ಕ್ಷೇತ್ರ ನೀರಾವರಿ ಒಳಪಡಲು ಅಧಿಸೂಚಿಸಿದೆ. ಮುಂಗಾರು ಹಂಗಾಮು ಮಳೆ ಆಧಾರಿತವಾಗಿದ್ದು, ರೈತರು ತಮ್ಮ ಕ್ಷೇತ್ರದಲ್ಲಿ ದ್ವಿಋತು ಬೆಳೆಗಳನ್ನು ಮಾತ್ರ ಬೆಳೆಯಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದಾಗ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಆಲಮಟ್ಟಿ ಜಲಾಶಯಕ್ಕೆ ಪೂರ್ಣ ಮಟ್ಟ 519.60ಮೀ. ತಲುಪಿದ ನಂತರ ಒಳಹರಿಸು ಇರುವರೆಗೆ ಮುಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ಸತತವಾಗಿ ನೀರು ಪೂರೈಸಲಾಗುವುದು. ಒಳಹರಿವು ಸ್ಥಗಿತವಾದರೆ ಈ ಹಿಂದೆ ಅನುಸರಿಸಿ ಯಶಸ್ವಿಯಾದ 14 ಚಾಲೂ ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಲಾಗುವುದು. ಮುಂಗಾರು ಹಂಗಾಮಿಗೆ ಒಟ್ಟಾರೆ ಕ್ಷೇತ್ರದ ಪ್ರತಿಶತ 80 ರಷ್ಟು ಕ್ಷೇತ್ರಕ್ಕೆ ಅಂದರೆ 5.34 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವಿರ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೆÇೀಲಾಗದಂತೆ ಮಿತವಾಗಿ ಬಳಸುವುದರ ಮೂಲಕ ಕೃμÁ್ಣ ಭಾಗ್ಯ ಜಲನಿಗಮದೊಂದಿಗೆ ಸಹಕರಿಸಲು ಸಭೆಯಲ್ಲಿ ವಿನಂತಿ ಮಾಡಲಾಯಿತು.

ನವೆಂಬರ್-2023ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2023-24ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ನವೆಂಬರ್-2023ರ ಅಂತ್ಯದಲ್ಲಿ ಜರುಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಭೆಯಲ್ಲಿ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಾಸಕರುಗಳಾದ ಎಚ್. ವೈ. ಮೇಟಿ, ಸಿ. ಎಸ್. ನಾಡಗೌಡ, ಜೆ. ಟಿ. ಪಾಟೀಲ, ಪಿ.ಎಚ್.ಪೂಜಾರ, ಅಶೋಕ ಮನಗೂಳಿ, ವಿಠ್ಠಲ ಧೋಂಡಿಬಾ ಕಟಕದೊಂಡ, ರಾಜಾವೆಂಕಟಪ್ಪ ನಾಯಕ, ಕರೆಮ್ಮ ನಾಯಕ, ಬಸನಗೌಡ ದದ್ದಲ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಎಸ್. ಶಿವಕುಮಾರ, ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ. ಎಂ. ಆಲಮಟ್ಟಿ ಡ್ಯಾಂ ವಲಯದ ಮುಖ್ಯ ಎಂಜಿನಿಯರ್ ಎಚ್. ಎನ್. ಶ್ರೀನಿವಾಸ, ಎಕ್ಸಿಕ್ಯೂಟಿವ್ ಎಂಜಿನಿಯರ್ ಬಸವರಾಜ, ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಸಚಿವ ಆರ್. ಬಿ. ತಮ್ಮಾಪುರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಸಭೆಯ ಮಾಹಿತಿ ಹಂಚಿಕೊಂಡರು.

Leave a Reply

ಹೊಸ ಪೋಸ್ಟ್‌