ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಅವರು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ.
ಫಾರ್ಮಾಸ್ಯೂಟಿಕಲ್ ಕಂಪೊಸಿಷನ್ ಕಾಂಪ್ರೈಸಿಂಗ್ ಫಂಕ್ಷನಲಿ ಮಾಡಿಫೈಡ್ ಪಿಎಚ್- ರಿಸ್ಪಾನ್ಸಿವ್ ಜೆಲ್ಲೆನ್ ಗಮ್ ಗ್ರಾಫ್ಟ್ ಕೊಪಾಲಿಮರ್ ಮೈಕ್ರೊಸ್ಪೀಯರ್ಸ್ ಫಾರ್ ಕೊಲೊನ್ ಕ್ಯಾನ್ಸರ್(PHARMACEUTICAL COMPOSITION COMPRISING FUNCTIONALLY MODIFIED PH-RESPONSIVE GELLEN GRAFT COPOLYMER MICROSPHERES FOR COLON CANCER) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ ಲಭ್ಯವಾಗಿದೆ.
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಡಾ. ರಾಘವೇಂದ್ರ ಕುಲಕರ್ಣಿ ಅವರ ತಂಡಕ್ಕೆ ಅವರಿಗೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಅವರ ಸಂಶೋಧನೆ ಹಾಗೂ ಆವಿಷ್ಕಾರಗಳು ನಿರಂತರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.