ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವ ಎಂ. ಬಿ. ಪಾಟೀಲ- ಅರಕೇರಿ ಕೆರೆಗೆ ನೀರು ತುಂಬಿಸಲು ಸೂಚನೆ
ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ಗೃಹ ಕಚೇರಿಯಲ್ಲಿ ದಿನವಿಡೀ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಚಿವರ ಗೃಹ ಕಚೇರಿಗೆ ಆಗಮಿಸಿದ ಬಬಲೇಶ್ವರ ಮತಕ್ಷೇತ್ರ ಮತ್ತು ಜಿಲ್ಲೆಯ ನಾನಾ ಭಾಗಗಳ ಹಾಗೂ ಹೊರ ಜಿಲ್ಲೆಗಳ ಜನರು ನಾನಾ ಅಹವಾಲು ಸಲ್ಲಿಸಿದರು. ಕುಡಿಯುವ ನೀರು, ರಸ್ತೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವರು, ಇದೇ ಸಂದರ್ಭದಲ್ಲಿ ಸಂಬAಧಿಸಿದ ಅಧಿಕಾರಿಗಳಿಗೆ ಕರೆ […]
ಅರಕೇರಿಯಲ್ಲಿ ಆಪ್ಟೆ ಫೌಂಡೇಶನ್ ವತಿಯಿಂದ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ನಿಸರ್ಗದ ಜೊತೆಗೆ ಒಂದು ದಿನ ಕಾರ್ಯಕ್ರಮ
ವಿಜಯಪುರ: ಅರಕೇರಿಯಲ್ಲಿ ಆಷ್ಟೆ ಫೌಂಡೇಶನ್ ವತಿಯಿಂದ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ನಿಸರ್ಗದ ಜೊತೆ ಒಂದು ದಿನ ವಿನೂತನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಕೂಡ ಆಯೋಜಿಸಲಾಗಿತ್ತು. ಮಧುಮೇಹ ತಜ್ಞ ಮತ್ತುಸಮಾಜ ಸೇವಕ ಬಾಬುರಾಜೇಂದ್ರ ನಾಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು […]
ಕಾಖಂಡಕಿ ಶ್ರೀ ಮಹಿಪತಿದಾಸರು ಸಿನೇಮಾ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ
ವಿಜಯಪುರ: ನಾಡಿನ ಹೆಸರಾಂತ ದಾಸವರೇಣ್ಯರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿರಾಯರ ಕುರಿತು ತೆರೆಗೆ ಬರುತ್ತಿರುವ ಕಾಖಂಡಕಿ ಶ್ರೀ ಮಹಿಪತಿದಾಸರು ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರಿನ ಕೆ ಆರ್ ಪುರಂ ನಲ್ಲಿರುವ ಮೊವೀಸ್ ಫಿಲ್ಮ್ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ಡಾ. ಮಧಸೂಧನ ಹವಾಲ್ದಾರ, ಯುವ ಧುರೀಣ ಪ್ರಕಾಶ ಅಕ್ಕಲಕೋಟ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಬೆಂಗಳೂರಿನ ಬ್ರೆನ್ಸ್ ಫೌಂಡೇಶನ್ ಮುಖ್ಯ ನ್ಯೂರೋ ಸರ್ಜನ್ ಹಾಗೂ ಸಂಸ್ಥಾಪಕ ಡಾ. ವೆಂಕಟರಮಣ ಎನ್. ಕೆ. ಬೆಂಗಳೂರಿನ ಉನ್ನತಿ ಫೌಂಡೇಶನ್ನಿನ ರಮೇಶ್ […]