ವಿಜಯಪುರ: ಅರಕೇರಿಯಲ್ಲಿ ಆಷ್ಟೆ ಫೌಂಡೇಶನ್ ವತಿಯಿಂದ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ನಿಸರ್ಗದ ಜೊತೆ ಒಂದು ದಿನ ವಿನೂತನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಂಗವಾಗಿ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಕೂಡ ಆಯೋಜಿಸಲಾಗಿತ್ತು. ಮಧುಮೇಹ ತಜ್ಞ ಮತ್ತುಸಮಾಜ ಸೇವಕ ಬಾಬುರಾಜೇಂದ್ರ ನಾಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ. ಆಷ್ಟೆ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಪ್ರಕೃತಿ ಮಡಿಲಲ್ಲಿ ಒಂದು ದಿನ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಷ್ಟೆ ಫೌಂಡೇಶನ್ ಮುಖ್ಯಸ್ಥ ಮತ್ತು ಪತ್ರಕರ್ತ ವಿನಯ ಆಷ್ಟೆ, ರಾಮಸಿಂಗ ರಜಪೂತ, ರಾಹುಲ ಆಷ್ಟೆ, ರೋಹಿತ ಆಷ್ಟೆ, ದೇಶ ರಕ್ಷಕ ಪಡೆಯ ಸಂಸ್ಥಾಪಕ ರೋಹನ ಆಷ್ಟೆ, ಈಶ್ವರ ತೋಶ್ನಿವಾಲ, ಅನಿಲ ಚವ್ಹಾಣ, ನಂದಾ ಛತ್ರೆ ಮುಂತಾದವರು ಉಪಸ್ಥಿತರಿದ್ದರು.