ಮೆದುಳು, ಬೆನ್ನುಹುರಿ ಚಿಕಿತ್ಸೆಗೆ ಈ ಆಸ್ಪತ್ರೆ ವರದಾನ- ಡಾ. ಮಲ್ಲಪ್ಪ ಹುಗ್ಗಿಯವರ ಕೈಗುಣಕ್ಕೆ ರೋಗಿಗಳು ಫುಲ್ ಖುಷ್

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ರೋಗಿಯೊಬ್ಬನ ಮೆದುಳಿನಲ್ಲಿ ಬೆಳೆದಿದ್ದ ಗಡ್ಡೆಯನ್ನು ತೆಗೆಯುವ ಮೂಲಕ ಅಪರೂಪದ ಶಸ್ತçಚಿಕಿತ್ಸೆಯನ್ನು ನಡೆಸಿದ್ದಾರೆ. 52 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೆಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಯನ್ನು ಪರೀಕ್ಷಿಸಿದ ನರರೋಗ ತಜ್ಞ ಡಾ. ಮಲ್ಲಪ್ಪ ವಿ. ಹುಗ್ಗಿ ಎಲ್ಲ ವ್ಯದ್ಯಕೀಯ ತಪಾಸಣೆ ನಡೆಸಿದಾಗ ರೋಗಿಯ ತಲೆಯಲ್ಲಿ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಆಗ ವೈದ್ಯರು ಸತತ ನಾಲ್ಕು […]

ವೃತ್ತಿಯಿಂದ ಗಳಿಸಿದ ರೂ. 2 ಕೋ. ಖರ್ಚು ಮಾಡಿ ಶ್ರೀಶೈಲದಲ್ಲಿ ವಸತಿ ನಿಲಯ ಕಟ್ಟಿದ ಮಲ್ಲಯ್ಯನ ಭಕ್ತ ಡಾ. ಸಾರ್ವಭೌಮ ಬಗಲಿ

ವಿಜಯಪುರ: ಪ್ರತಿ ವರ್ಷ ಲಕ್ಷಾಂತರ ಜನ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ತೆರಳುತ್ತಾರೆ.  ಯುಗಾದಿ ಸಂದರ್ಭದಲ್ಲಿ ಅಲ್ಲಿ ನಡೆಯುವ ಮಲ್ಲಯ್ಯನ ಜಾತ್ರೆಗೆ ಬಹುತೇಕ ಜನರು ಪಾದಯಾತ್ರೆ ಮೂಲಕ ತೆರಳಿದರೆ, ಲಕ್ಷಾಂತರ ಜನರು ಸರಕಾರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿಯೂ ಪ್ರಯಾಣ ಮಾಡುತ್ತಾರೆ. ಹೀಗೆ ಶ್ರೀಶೈಲಕ್ಕೆ ತೆರಳು ಭಕ್ತರಿಗೆ ಅಲ್ಲಿ ತಂಗಲು ಎಷ್ಟೇ ವಸತಿ ಗೃಹ ನಿರ್ಮಿಸಿದರೂ ಕಡಿಮೆಯೇ.  ಮಲ್ಲಯ್ಯನ ಭಕ್ತರ ಈ ಸಮಸ್ಯೆಯನ್ನು ಅರಿತ ಮಾಜಿ ಶಾಸಕ ಮತ್ತ ವೃತ್ತಿಯಿಂದ ವೈದ್ಯರಾಗಿರುವ ಹಾಗೂ […]

ಏಳೆಂಟು ಸಂಸದರು ಚುನಾವಣೆಗೆ ಸ್ಪರ್ಧಿಸಲ್ಲ- ರಾಜ್ಯ ರಾಜಕೀಯದಲ್ಲಿ ಏನೋ ಗಡಿಬಿಡಿ ನಡೆಯುತ್ತಿದೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸುಮಾರು ಏಳೆಂಟು ಜನ ಸಂಸದರು ಚುನಾವಣೆ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಸಿದ್ದಸಿರಿ ಸಂಸ್ಥೆಯ ಎಸ್ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಮಾದ್ಯಮದವರ ಜೊತೆ ಅವರು ಮಾತನಾಡಿದರು. ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಏನಾದರೂ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನನಗೆ ಮಾಹಿತಿ ಇಲ್ಲ.  ನನ್ನ ಮಾಹಿತಿಯ ಪ್ರಕಾರ ಏಳೆಂಟು ಜನ ಸಂಸದರು ತಾವಾಗಿಯೇ ಸ್ವಯಂ […]