ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಸಿಎಂ ಬಾಗೀನ ಅರ್ಪಣೆ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ

ವಿಜಯಪುರ: ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಎಸ್. ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಆಲಮಟ್ಟಿ ಆಗಮಿಸಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಆಲಮಟ್ಟಿ ಹೆಲಿಪ್ಯಾಡ್ ನಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಅನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಗೌರವ ಸಲ್ಲಿಸಿದರು.  ಗೌರವ ವಂದನೆ ಸ್ವೀಕರಿಸಿ ರಸ್ತೆ ಮಾರ್ಗವಾಗಿ ಡ್ಯಾಂ ಅವರಣಕ್ಕೆ ಆಗಮಿಸಿದ ಸಿಎಂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ […]

ನಂದಿ ಸಕ್ಕರೆ ಕಾರ್ಖಾನೆ ಚುನಾವಣೆ- ಕುಮಾರ ದೇಸಾಯಿ ಬಣದ 10, ಶಶಿಕಾಂತಗೌಡ ಪಾಟೀಲ ಬಣದ 7 ಜನರ ಆಯ್ಕೆ- ಯಾರಿಗೆ ಎಷ್ಟು ಮತ? ಇಲ್ಲಿದೆ ಮಾಹಿತಿ

ವಿಜಯಪುರ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 17 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರು ಮತ್ತು ಅವರು ಪಡೆದಿರುವ ಮತಗಳ ಮಾಹಿತಿ ಇಲ್ಲಿದೆ. ಆಡಳಿತ ಮಂಡಳಿಯ ಅ ವರ್ಗದ ವಿಜೇತರು ಮತ್ತು ಪಡೆದ ಮತಗಳು ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ)- 3893 ಶಶಿಕಾಂತಗೌಡ ಬಿಮನಗೌಡ ಪಾಟೀಲ(ಶಿರಬೂರ)- 3310 ಅಶೋಕ ಪಾಂಡಪ್ಪ ಲೆಂಕಣ್ಣನವರ- 3234 ಅದೃಶಪ್ಪ […]

ಕೇಂದ್ರ ಪುರಸ್ಕೃತ ಅನುದಾನ ಸಮರ್ಪಕವಾಗಿ ಬಳಸಿ- ಗುಣಮಟ್ಟದ ಕಾಮಗಾರಿ ಕೈಗೊಳ್ಳಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೃಷಿ, ಗ್ರಾಮೀಣಾಭಿವೃದ್ದಿ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಕೇಂದ್ರ ಪುರಸ್ಕøತ ಯೋಜನೆಯಡಿಯ  ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡುವ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚನೆ ನೀಡಿದ್ದಾರೆ.  ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ಕೇಂದ್ರ ಸರಕಾರದ ನಾನಾ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಪುರಸ್ಕøತ ಯೋಜನೆಗಳನ್ನು ನಿಗದಿತ  ಕಾಲಾವಧಿಯಲ್ಲಿ […]

ಸಕಾಲದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ತಲುಪಿಸಿ: ಸಿಇಓ ಸೂಚನೆ

ವಿಜಯಪುರ: ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು ಎೞದು ಜಿ. ಪಂ. ಸಿಇಓ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿ. ಪಂ. ಸಿಇಓ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಸಂಘದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ ಗುರುತಿಸಲ್ಪಟ್ಟ ಗ್ರಾ. ಪಂ. ಗಳಲ್ಲಿ, ಚುನಾಯಿತ ಪಂಚಾಯಿತಿ ಸದಸ್ಯರುಗಳಿಗೆ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು.  ಪಂಚಾಯಿತಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅಚ್ಚು-ಕಟ್ಟಾಗಿ ಆಯೋಜಿಸಬೇಕು.  […]

ಜಿಲ್ಲಾ ಪಂಚಾಯಿತಿಯಲ್ಲಿ ಮಿನಿ ಗ್ರಂಥಾಲಯ ನಿರ್ಮಾಣ- ಸಿಇಓ ಅವರ ನಡೆ ಇತರರಿಗೆ ಪ್ರೇರಣೆ- ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ

ವಿಜಯಪುರ: ಜಿ. ಪಂ. ಸಿಇಓ ಕಚೇರಿ ಮುಂದೆ ಹೊಸದಾಗಿ ನಿರ್ಮಿಸಲಾಗಿರುವ ಮಿನಿ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮತ್ತು ಅವರ ಸಮಯವನ್ನು ಹಾಳು ಮಾಡಬಾರದು ಎಂಬ ಸದುದ್ದೇಶದಿಂದ ಜಿ. ಪಂ. ಸಿಇಓ ರಾಹುಲ ಶಿಂಧೆ ಅವರು ತಮ್ಮ ಸ್ವ ಇಚ್ಚೆಯಿಂದ ಮಿನಿ ಗ್ರಂಥಾಲಯ ಸ್ಥಾಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇದು ಸಾರ್ವಜನಿಕರ ಮೇಲೆ ಅವರಿಗಿರುವ ಸೇವಾ ಮನೋಭಾವನೆಯನ್ನು ತೋರಿಸುತ್ತದೆ.  […]