ಗಾಯಯೋಗಿ ಸಂಘದ ಪದಾಧಿಕಾರಿಗಳ ಜನಪರ ಸೇವೆ ಮುಂದುವರಿಕೆ- ಬಸ್ ನಿಲ್ದಾಣದ ಶೌಚಾಲಯಕ್ಕೆ ಸುಣ್ಣಬಣ್ಣ- ಜಾಗೃತಿ ಸಂದೇಶ

ವಿಜಯಪುರ: ಸ್ವಚ್ಛತ, ಸುಣ್ಣಬಣ್ಣ ಬಳಿಯುವುದು ಮತ್ತು ಜನಜಾಗೃತಿ ಸಂದೇಶಗಳನ್ನು ಸಾರುವ ಮೂಲಕ ಅನೇಕ ಜನಪರ ಕಲಸಗಳನ್ನು ಮಾಡುತ್ತಿರುವ ನಗರದ ಗಾಯನೋಗಿ ಸಂಘ ಈಗ ಮತ್ತೋಂದು ಸಮಾಜಮುಖೆ ಕೆಲಸ ಮಾಡಿದೆ.

ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ದುಶ್ಚಟಕ್ಕೆ ಬಲಿಯಾಗದಿರಿ.  ತಂದೆ-ತಾಯಿಯನ್ನು ಅನಾಥರನ್ನಾಗಿ ಮಾಡಿಸಬೇಡಿ ಎಂಬುಸದಿರಿ ಎನ್ನುವ ಸಂದೇಶವನ್ನು ಸಾರುವ ಮೂಲಕ ನಗರ ಬಸ್ ಸಾರಿಗೆ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಯುವಕರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಸುಣ್ಣ ಬಣ್ಣಗಳನ್ನು ಬಳೆಯುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದರು.

ವಿಜಯಪುರ ಗಾಯನೋಗಿ ಸಂಘದ ಯುವಕರು ಬಣ್ಣ ಹಚ್ಚಿರುವ ಸಾರ್ವಜನಿಕ ಶೌಚಾಲಯದ ಪಕ್ಕದ ಗೋಡೆ

ಈ ಸಂದರ್ಭದಲ್ಲಿ ಪ್ರಕಾಶ ಆರ್. ಕೆ. ಮಾತನಾಡಿ, ಇಂದಿನ ಯುಕವರು ಗಾಂಜಾ, ಗುಟ್ಕಾ, ಡ್ರಗ್ಸ್, ಅಪೀಮು ಸೇರಿದಂತೆ ಇನ್ನಿತರ ದುಶ್ಟಟಗಳಿಗೆ ದಾಸರಾಗುತ್ತಿರುವುದು ಶೋಚನೀಯ ಸಂಗತಿ. ಕಾಲೇಜು ಕಲಿಯುವ ಸಣ್ಣ ವಯಸ್ಸಿನಲ್ಲಿ ಶೋಕಿಗಾಗಿ ಕುಡಿತದ ಚಟಕ್ಕೆ ಬಿದ್ದು ಅದನ್ನೇ ಬದುಕಿನಲ್ಲಿ ರೂಢಿಯಾಗಿಸಿಕೊಂಡು ಮದ್ಯ ಅಪೀಮು, ಅಮಲೀನ ದಾಸರಾಗಿ ತಮ್ಮ ಬದುಕನ್ನೆ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರು ಹೊರ ಬರಬೇಕು. ಮಹಾಮಾರಿ ದುಶ್ಟಗಳನ್ನು ಹಿಮ್ಮೆಟ್ಟಿಸಲು ಯುವಕರು ಮುಂದೆ ಬರಬೇಕು.  ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು.  ಇದು ಕೇವಲ ಒಬ್ಬರಿಂದ ತಡೆಯಲು ಸಾಧ್ಯವಾಗದು ಪ್ರತಿಯೊಬ್ಬರು ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣನವರ, ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಸಚಿನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಸಚಿನ ಚವ್ಹಾಣ, ಬಾಬು, ರೇವಣಸಿದ್ಧಯ್ಯ, ತನುಜ, ಸಂದೀಪ, ಆಕಾಶ, ಶ್ರೀನಾಥ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌