ಹೆಚ್ಚಿನ ಸಂಖ್ಯೆಯಲ್ಲಿ ಅತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಸಚಿವ ಶರಣಬಸಪ್ಪ ದರ್ಶನಾಪುರ ಕರೆ

ವಿಜಯಪುರ: ಅತೀ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಿದರೆ, ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ನಗರದ ಸುಕೂನ ಕಾಲನಿ ಬಳಿಯ ಸ್ಪೂರ್ತಿ ರೆಸಾರ್ಟ ಮತ್ತು ಕ್ಲಬ್ ಹೌಸನಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಸಿಡ್ಬಿ ಕಾಶಿಯಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು […]

ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು- ಸಾಯಿರಾಬಾನು

ವಿಜಯಪುರ: ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಡಯಟ್ ಪ್ರಿನ್ಸಿಪಲ್ ಸಾಯಿರಾಬಾನು ಖಾನ್ ಹೇಳಿದ್ದಾರೆ. ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ ಹಾಗೂ ಡಯಟ್ ಸಹಯೋಗದಲ್ಲಿ ಜಿಲ್ಲೆಯ ನಾನಾ ಶಾಲೆಗಳ ಆಯ್ದ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಅಟಲ್ ಟಿಂಕರಿAಗ್ ಲ್ಯಾಬ್‌ಗಳ ಸದ್ಬಳಕೆಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯಾವ ಪ್ರಯೋಗಾಲಯದಿಂದ ಚಂದ್ರಯಾನದAಥಹ ಇತಿಹಾಸವನ್ನು ಸೃಷ್ಠಿಸುವ ವಿಜ್ಞಾನಿಗಳು ಹುಟ್ಟುತ್ತಾರೋ ಗೊತ್ತಿಲ್ಲ. ಆದ್ದರಿಂದ ಎಲ್ಲರೂ ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡು […]

ಉದಯನಿಧಿ ಸ್ಟ್ಯಾಲಿನ್, ಡಾ. ಜಿ. ಪರಮೇಶ್ವರ, ಪ್ರಕಾಶ ರಾಜ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ತೀವ್ರ ವಾಗ್ದಾಳಿ- ಯಾಕೆ ಗೊತ್ತಾ?

ವಿಜಯಪುರ: ತಮಿಳುನಾಡು ಸಚಿವ ಉದಯನಿಧಿ ಸ್ಚಾಲಿನ್, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ್ದಾರೆ.  ಯಾವನ್ರೀ ಅವನು ಸ್ಟಾಲಿನ್? ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಉದಿಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಭಂದ? ಅವನೊಬ್ಬ ಅಯ್ಯೋಗ್ಯ, ಹುಚ್ಚ.  ಸನಾತನ ಧರ್ಮ ಸಾವಿರಾರು ವರ್ಷಗಳಿಂದ […]

ಮೀರಜ್, ಸೋಲಾಪುರ ವೈದ್ಯರು ನಿರಾಕರಿಸಿದ ರೋಗಿಗೆ ಬಸವ ನಾಡಿನ ಡಾಕ್ಟರ್ ರಿಂದ ಸ್ಪಂದನೆ- 9 ತಿಂಗಳಿಂದ ಹಾಸಿಗೆಯಲ್ಲಿದ್ದ 85 ವರ್ಷದ ಅಜ್ಜ ನಡೆದಾಡುವಂತೆ ಮಾಡಿದ ವೈದ್ಯರು

ವಿಜಯಪುರ: ಮಹಾರಾಷ್ಟ್ರದ ಮೀರಜ್ ಮತ್ತು ಸೋಲಾಪುರಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಮತ್ತು ಕಳೆದ ಒಂಬತ್ತು ತಿಂಗಳಿಂದ ನಡೆಯಲಾಗದೇ ಹಾಸಿಗೆ ಹಿಡಿದಿದ್ದ ರೋಗಿಗೆ ಶಸ್ತ್ರಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಗಮನ ಸೆಳೆದಿದ್ದಾರೆ. ಇಂಡಿ ತಾಲೂಕಿನ 85 ವರ್ಷದ ವೃದ್ದರೊಬ್ಬರು ಬಿದ್ದು ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು.  ಎಡ ಚಪ್ಪೆ ಮುರಿದ ಕಾರಣ ನಡೆಯಲೂ ಅವರಿಗೆ ಆಗುತ್ತಿರಲಿಲ್ಲ.  ಅಲ್ಲದೇ, ಹಾಸಿಗೆಯಲ್ಲಿಯೇ ಇದ್ದ ಕಾರಣ ಬಲಗಾಲಿನ ಚರ್ಮಕ್ಕೂ ಗಂಭೀರ ಗಾಯವಾಗಿತ್ತು.  ಮೇಲಾಗಿ ಈ ರೋಗಿ ಹೃದಯ […]

ಶಿಕ್ಷಕರ ದಿನಾಚರಣೆ ಅಂಗವಾಗಿ 9 ಜನ ವೈದ್ಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 5 ಜನ ನಿವೃತ್ತ ವೈದ್ಯರಿಗೆ ಗೌರವ ಸಲ್ಲಿಕೆ

ವಿಜಯಪುರ: ವೈದ್ಯರು ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ದಾವಣಗೆರೆಯ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಮತ್ತು ಮುಖ್ಯಸ್ಥ ಡಾ. ಬಿ. ಎಸ್. ಪ್ರಸಾದ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿ ಪವಿತ್ರವಾಗಿದೆ. ಇದರ ಜೊತೆಗೆ ವೈದ್ಯರು ಮೆಡಿಕಲ್ ಕಾಲೇಜುಗಳಲ್ಲಿ ಪಾಠ ಮಾಡಲು ಹೆಚ್ಚಿನ ಅಧ್ಯಯನದ ಅಗತ್ಯ ಇರುತ್ತದೆ. ಬದಲಾಗುತ್ತಿರುವ […]