ಉದಯನಿಧಿ ಸ್ಟ್ಯಾಲಿನ್, ಡಾ. ಜಿ. ಪರಮೇಶ್ವರ, ಪ್ರಕಾಶ ರಾಜ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ತೀವ್ರ ವಾಗ್ದಾಳಿ- ಯಾಕೆ ಗೊತ್ತಾ?

ವಿಜಯಪುರ: ತಮಿಳುನಾಡು ಸಚಿವ ಉದಯನಿಧಿ ಸ್ಚಾಲಿನ್, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ್ದಾರೆ.  ಯಾವನ್ರೀ ಅವನು ಸ್ಟಾಲಿನ್? ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಉದಿಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಭಂದ? ಅವನೊಬ್ಬ ಅಯ್ಯೋಗ್ಯ, ಹುಚ್ಚ.  ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.  ಈ‌ ಧರ್ಮದ ಬಗ್ಗೆ ಯಾರಾರು ಮಾತನಾಡಿದ್ದಾರೋ, ಧರ್ಮವನ್ನು ಮುಟ್ಟಿದವನು ಯಾರಾದರೂ ಉದ್ದಾರ ಆಗಿದ್ದಾರಾ? ಎಂದು ಪ್ರಶ್ನಿಸಿದರು.

ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಉದಯನಿಧಿ ಸ್ಟಾಲಿನ್ ಹೇಳುತ್ತಾನೆ.  ಅವರಪ್ಪ, ಅವರ ತಾನನ ಕಡೆಯಿಂದಲೇ ಆಗಿಲ್ಲ. ಧರ್ಮವನ್ನು ನಾಶ ಮಾಡಲು ಹೋದವರು ಯಾರೂ ಉಳಿದಿಲ್ಲ, ಇವನ್ಯಾವನು ಬಚ್ಚಾ? ಅವನಿಗೆ ತಾಕತ್ ಇದ್ದರೆ ಮುಸ್ಲಿಂ ಬಗ್ಗೆ ಈ ರೀತಿ ಕಾಮೆಂಟ್ ಮಾಡಿ ಬದುಕಲಿ‌ ನೊಡೋಣ.  ಹಿಂದೂಗಳು ಶಾಂತಿಪ್ರಿಯರು.  ಸನಾತನ ಧರ್ಮದ ಬಗ್ಗೆಯೂ ಅನೇಕರು ಪಾಸಿಟಿವ್ ಕೊಟ್ಟಿದಾರೆ.  ಏಕೆಂದರೆ ಧರ್ಮದ ವಿಚಾರಕ್ಕೆ ಬಂದ್ರೆ ಭಸ್ಮ ಆಗುತ್ತೇವೆಂದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ವಾಗ್ದಾಳಿ

ಇದೇ ವೇಳೆ, ಹಿಂದೂ ಧರ್ಮದ ಬಗ್ಗೆ ಪರಮೇಶ್ವರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಿ. ಪರಮೇಶ್ವರ ಬಗ್ಗೆ ನಾನು ವಿಚಾರಿಸಿದೆ.  ಜಿ. ಅಂದ್ರೆ ಏನು ಅಂತ ಕೇಳಿದೆ.  ಗಂಗಾಧರಯ್ಯ ಅಂದರು.  ಅವರ ತಾತನ ಬಗ್ಗೆ ಕೇಳಿದಾಗ ಮರಿಯಪ್ಪ ಅಂದರು.  ಮುತ್ತಜ್ಜನ ಹೆಸರು ಕೇಳಿದಾಗ ಗೊತ್ತಿಲ್ಲ ಎಂದರು.  ಇನ್ನೂರು ವರ್ಷದ ನಿಮ್ಮ ಮುತ್ತಜ್ಜ ಗೊತ್ತಿಲ್ಲ.  ಸಾವಿರಾರು ವರ್ಷದ ಹಿಂದೂ ಧರ್ಮದ ಬಗ್ಗೆ ಕೇಳುತ್ತಾರಲ್ಲಾ.  ಇವರಿಗೆ ಏನು ಹೇಳಬೇಕು? ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ವಾಗ್ದಾಳಿ

ನಾನು ಹಿಂದೂ ಅಲ್ಲ.  ತಂದೆ-ತಾಯಿಗೆ ಹುಟ್ಟಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ ರಾಜ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಕಾಶ ರಾಜ್ ಅಯ್ಯೋಗ್ಯ.  ಅಪ್ಪ-ಅಮ್ಮಂಗೆ ಹುಟ್ಟಿದಿನಿ ಅಂತಾನೆ.  ಅಪ್ಪ-ಅಮ್ಮಂಗೆ ಹುಟ್ಟಿದಿನ ಅನ್ನೋಕೆ ಗ್ಯಾರೆಂಟಿ‌ ಏನು? ನನಗೆ ಅವರ ಅಮ್ಮನ ಬಗ್ಗೆ ಗೌರವ ಇದೆ.  ಆದರೆ ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಅಪ್ಪ ಅನ್ನೋದು ಗೊತ್ತಾಗಿದೆ ತಾನೆ ಎಂದು ಈಶ್ವರಪ್ಪ ಟೀಕಿಸಿದರು.

ದೇಶದ ಹೆಸರು ಭಾರತ ಎಂದು ಬದಲಾವಣೆ ವಿಚಾರ

ಪ್ರಪಂಚಕ್ಕೆ ಶಾಂತಿ, ಧರ್ಮವನ್ನು ಹೇಳಿದ್ದು ಭಾರತ.  ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ.  ಆದರೆ, ಮಾಡುತ್ತಿರುವುದೆಲ್ಲ, ಇರುವುದೆಲ್ಲ ಹಲಕಟ್ ಗಿರಿ.  ಶಾಂತಿ ಕಡಿಸೋದೆ ಅವರ ಕೆಲಸವಾಗಿದೆ.  ಮುಸಲ್ಮಾಮಾನರಿಗೆ ನೋವು ಮಾಡಿ ಅಂತ ಹೇಳಲ್ಲ.  ಕುರಾನ್ ಬಗ್ಗೆ, ಮುಸ್ಲಂಮಾನರು ಎಲ್ಲಿ ಯಾವಾಗ ಹುಟ್ಟಿದ್ದು ಪ್ರಶ್ನೆ ಕೇಳಿ ನೋಡೋಣ.  ಇವರು ಅವರನ್ನ ಕೆಣಕಿ ನೋಡಲಿ.  ಮಾತನಾಡಬೇಕಾದರೆ ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಅವರು ಹೇಳಿದರು.

ಸಚಿವರು ಬರದ ಕಡೆ ಗಮನ ನೀಡಬೇಕು

ರಾಜ್ಯದ ಹಲವೆಡೆ ಬರ ಆವರಿಸಿದೆ.  ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ರೈತರ ಬಗ್ಗೆ ಗಮನ ಕೊಡಬೇಕಿದೆ.  ಅವರು ಗಮನ ಕೊಡದಿರುವ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.  ಬರದಿಂದಾಗಿ ರಾಜ್ಯದಲ್ಲಿ 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆದರೆ, ಕೆಲ ಸಚಿವರುಗಳು ಬೇರೆ ಬೇರೆ ಕಾರಣದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.  ಹೀಗೆ ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದ್ದಾರೆ.  ಪರಿಹಾರ ಕೊಡುವುದರಲ್ಲೂ ಅನ್ಯಾಯ ಮಾಡಿದ್ದಾರೆ.  ರೈತನ ಪ್ರಾಣಿಕತೆ ಬಗ್ಗೆ ಅಪಮಾನ ಮಾಡಿದ್ದೀರಿ.  ಈ ರೀತಿ ಹೇಳಿಕೆ ಕೊಡೋದು ತಪ್ಪಾಗುತ್ತದೆ.  ತಕ್ಷಣ ರೈತರಿಗೆ ಪರಿಹಾರ ಕೊಡುವ ಕೆಲಸ ಆಗಬೇಕಿದೆ.  ಎಲ್ಲರೂ ಇನ್ನೂ ಹನಿಮೂನ ಪಿರಿಯಡ್ ನಲ್ಲಿದ್ದಾರೆ ಎಂದು ಮಾಜಿ ಸಚಿವರು ಗಂಭೀರ ಆರೋಪ ಮಾಡಿದರು.

ರೈತರ ಕಷ್ಟಗಳನ್ನು ಕೇಳುವ ಸ್ಥಿತಿಯಲ್ಲಿಲ್ಲ.  ಅತಿವೃಷ್ಠಿ, ಅನಾವೃಷ್ಠಿ ಸ್ಥಳಗಳಿಗೆ ಉಸ್ತುವರಿ ಸಚಿವರುಗಳು ಹೋಗಿ ರೈತರನ್ನ ಭೇಟಿ ಆಗುತ್ತಿಲ್ಲ.  ಮಂತ್ರಿಗಳು ಅವರ ಕ್ಷೇತ್ರದಲ್ಲಿ ಓಡಾಟ ಮಾಡಿ, ರೈತರ ಸಂಕಷ್ಟ, ಬೆಳೆ‌ನಷ್ಟದ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ ಮಾಜಿ ಡಿಸಿಎಂ, ಎರಡು ತಿಂಗಳಿಂದ ಬರ ತಾಲೂಕುಗಳನ್ನು ಘೋಷಣೆ ಮಾಡುತ್ತೇವೆಂದು ಹೇಳುತ್ತಿದ್ದೀರಿ.  ಬರದ ತಾಲೂಕುಗಳ ಅಂಕಿ- ಅಂಶ ನಿಮ್ಮ ಬಳಿ ಇದೆ ಅಂತ ಗೊತ್ತಿದೆ.  ಪಟ್ಟಿ ಬಿಡುಗಡೆ ಮಾಡಿ.  ಈ ಸರಕಾರ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ.  ರಸ್ತೆ, ಶಾಲೆ, ಅಂಗನವಾಡಿ ರಿಪೇರಿ ಆಗಿಲ್ಲ, ಬಡವರ ಆಶ್ರಯ ಮನೆಗೆ ಹಣ ಕೊಟ್ಟಿಲ್ಲ.  ಶಾಸಕರ ನಿಧಿ ವರ್ಷಕ್ಕೆ ರೂ. 2.50 ಕೋ. ಕೊಡಬೇಕಿದೆ.  ಆದರೆ, ಅದರಲ್ಲಿ ಕೇವಲ ರೂ. 50 ಲಕ್ಷ ಬಿಡುಗಡೆ ಮಾಡಿದ್ದಾರಷ್ಟೇ.  ರಾಜ್ಯದಲ್ಲಿ ಸರಕಾರವೇ ಇಲ್ಲ ಎಂಬಂತಾಗಿದೆ.  ಈ ಸಮಯದಲ್ಲಿ ನಾನು ಯಾಕಾದರೂ ಎಂ ಎಲ್ ಎ ಆಗಿದ್ದೇನೆ ಎಂದು ಕಾಂಗ್ರೆಸ್ ಶಾಸಕರು ಯೋಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಿಮ್ಮ ಗ್ಯಾರೆಂಟಿಗಳು ಸರಿಯಾಗಿ ನಡೆದರೆ ಒಂದೂವರೆ ಕೋಟಿ ಜನರಿಗೆ ಮಾತ್ರ ಕೊಡಲು ಸಾಧ್ಯ.  ಹಾಗಾದರೆ ಇನ್ನುಳಿದ ಐದೂವರೆ ಕೋಟಿ ಜನರ ಗತಿ ಏನು? ಮನೆ ಮನೆಗೆ ಹೋಗಿ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದೀರಿ.  ಅದರ‌ ಮೇಲೆ ಕೆಲವರು ಕೋರ್ಟ್ ಗೆ ಹೋಗಿದ್ದಾರೆ.  ಗ್ಯಾರೆಂಟಿ ಕಾರ್ಡ್ ಜೊತೆಗೆ ಈ ಸರಕಾರವನ್ನೇ ಕೋರ್ಟ್ ವಜಾ ಮಾಡುತ್ತದೆ ಎಂಬ ವಿಶ್ವಾಸ ನನಗೆ ಇದೆ ಎಂದು ಕೆ. ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬಸವರಾಜ ರಾಯರೆಡ್ಡಿಯಿಂದ ಸಿಎಂಗೆ ಪತ್ರ ಬರೆದ ವಿಚಾರ

ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂ ಎಸ್. ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲೆಕ್ಟ್ರಿಕ್ ಡಿಪಾರ್ಟಮೆಂಟ್ ಅಧಿಕಾರಿ ನನ್ನ ಫೋನ್ ರಿಸೀವ್ ಮಾಡಲ್ಲ.  ನನ್ನ ಕೆಲಸಗಳನ್ನು ಮಾಡಿಲ್ಲ ಎಂದು ರಾಯರೆಡ್ಡಿ ಬರಹಿಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.  ಆಗ ಸಭೆ ಕರೆದು ಅವರನ್ನು ತೃಪ್ತಿಪಡಿಸಿದ್ದಾರೆ.  ಹರಿಪ್ರಸಾದ ಹೇಳಿಕೆ ನೋಡಿ ಮಂತ್ರಿ ತರೋದು ಗೊತ್ತು.  ಕಳಿಸೋದು ಗೊತ್ತು ಎಂದಿದ್ದರು.  ಕಾಂಗ್ರೆಸ್ ಸರಕಾರ ಸ್ಥಿರತೆ ಇಲ್ಲ.  ಅಸ್ಥಿರತೆ ಕಾಡುತ್ತಿದೆ.  ನಾಳೆಯೂ ಈ ದಿಸೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಅವರು ತಿಳಿಸಿದರು.

ಧಮ್ಕಿ ಹಾಕಿದವರಿಗೆ ಭರವಸೆಗಳನ್ನು ಕೊಡುತ್ತಾರೆ.  ರಾಜ್ಯದ ಜನ ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ.  ಸಿಎಂ, ಡಿಸಿಎಂ ಹೆಲಿಕಾಪ್ಟರ್ ತಗೊಂಡು ಅತೀವೃಷ್ಠಿ, ಅನಾವೃಷ್ಠಿ ಆದ ಜಾಗಕ್ಕೆ ತೆರಳಿ ನೋಡಬೇಕಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರತಿಪಕ್ಷ ನಾಯಕನ ನೇಮಕ ವಿಚಾರ

ರಾಜ್ಯ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ನೇಮಕ ವಿಳಂಬ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಕೇಂದ್ರದ ನಾಯಕರು ಬಂದು ಯಾರನ್ನ ಮಾಡಬೇಕು ಎಂದು ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ.  ಶೀಘ್ರದಲ್ಲೇ ಹೈಕಮಾಂಡ್ ನೇಮಕ ಮಾಡುತ್ತಾರೆ.  ನಮ್ಮಲ್ಲಿ 66 ಜನ ಶಾಸಕರೂ ವಿರೋಧ ಪಕ್ಷದ ನಾಯಕರಿದ್ದಾರೆ.  ಎಲ್ಲರೂ ಸಮರ್ಥವಾಗಿ ಉತ್ತರ ಕೊಡುತ್ತಾರೆ.  ಕೇಂದ್ರ, ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

ಬರ ಘೋಷಣೆಗೆ ಕೇಂದ್ರದ ಎನ್ ಡಿ ಆರ್ ಎಫ್ ನಿಯಮಗಳು ಅಡ್ಡಿ ವಿಚಾರ

ಬರ ಘೋಷಣೆಗೆ ಕೇಂದ್ರದ ಎನ್ ಡಿ ಆರ್ ಎಫ್ ನಿಯಮಗಳು ಅಡ್ಡಿಯಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರಕ್ಕೆ ಬರ ಪರಿಹಾರ ಕೊಡುವಂತೆ ಸಿಎಂ ಪತ್ರ ಬರೆದಿದ್ದಾರೆ.  10 ವರ್ಷ ಮುಖ್ಯಮಂತ್ರಿ ಆಗಿದ್ದ ವ್ಯಕ್ತಿ ಅವರು.  ನಮ್ಮನ್ನೆಲ್ಲ ಕರ್ಕೊಂಡು ಕೇಂದ್ರಕ್ಕೆ ಹೋಗಲಿ.  ಕೇಂದ್ರದಿಂದ ಏನೇನು ಸೌಲಭ್ಯ ಕೊಡಿಸಬೇಕು ಅದನ್ನು ಕೊಡಿಸುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ ಲಿಂಗಾಯಿತ ನಾಯಕರನ್ನು ತುಳಿಯಲಾಗುತ್ತಿದೆ ಎಂಬ ಆರೋಪ ವಿಚಾರ

ರಾಜ್ಯ ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಯಾವುದೇ ಜಾತಿಯನ್ನು ತುಳಿಯಲೂ ಹೋಗಿಲ್ಲ.  ಈ ಕುರಿತು ಕಾಂಗ್ರೆಸ್ ಮುಖಂಡರ ಆರೋಪ ಸುಳ್ಳು.  ಸಿದ್ದರಾಮಯ್ಯ ಕುರುಬರ ಸಮಾವೇಶ ಮಾಡಿದರು.  ಡಿ. ಕೆ.  ಶಿವಕುಮಾರ ಒಕ್ಕಲಿಗರ ಸಮಾವೇಶ ಮಾಡಿದರು.  ಈ ಮೂಲಕ ಸಿಎಂ ಆಗಲು ಶಕ್ತಿ ಪ್ರದರ್ಶನ ಮಾಡಿದರು.  ಆದರೆ ಬಿಜೆಪಿಯಲ್ಲಿ ಯಾವುದೇ ಜಾತಿ ವ್ಯವಸ್ಥೆ ಇಲ್ಲ.  ಎಲ್ಲರೂ ಹಿಂದು ಧರ್ಮದವರೇ ಎಂದು ಅವರು ಹೇಳಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪ ವಿಚಾರ

ಮಾಜಿ ಸಿಎಂ ಜಗದೀಶ ಶೆಟ್ಟರ್ ಲಿಂಗಾಯತ ವಿಚಾರದಲ್ಲಿ ಆರೋಪ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಬಿಜೆಪಿ ಮೇಲೆ ಮಾಡಿರೋ ಆರೋಪ ಸಹ ಸುಳ್ಳು.  ಜಗದೀಶ ಶೆಟ್ಟರ್ ಬಿಜೆಪಿಯಲ್ಲಿಯೇ ಸಿಎಂ ಆದವರು.  ವಿಧಾನಸಭೆ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಸೇರಿ ಜಗದೀಶ್ ಶೆಟ್ಟರ್ ಆರೋಪ ಮಾಡುತ್ತಿದ್ದಾರೆ.  ಅತೀ ಹೆಚ್ಚು ಲಿಂಗಾಯತರನ್ನು ಸಿಎಂ ಮಾಡಿದ್ದು ಬಿಜೆಪಿ.  ಜಗದೀಶ ಶೆಟ್ಟರ ಬಿಜೆಪಿ ತಮ್ಮ ತಾಯಿ ಎನ್ನುತ್ತಿದ್ದರು.  ಈಗ ಜಗದೀಶ ಶೆಟ್ಟರ್ ಅಂಥವರು ತಾಯಿಯನ್ನು ಒದ್ದು ಹೊರಗೆ ಹೋಗಿದ್ದಾರೆ.  ಇದೇ ವಿಚಾರವಾಗಿ ಪ್ರದೀಪ ಶೆಟ್ಟರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರದೀಪ್ ಶೆಟ್ಟರ್ ಮಾತನಾಡಬೇಕಿತ್ತು.  ಈಗೇಕೆ ಮಾತನಾಡುತ್ತಿದ್ದಾರೆ? ಪ್ರದೀಪ ಶೆಟ್ಟರ್ ಬಿಜೆಪಿಯಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ.  ಅದಕ್ಕಾಗಿಯೇ ಹಾಗೆ ಹೇಳುತ್ತಿದ್ದಾರೆ.  ಹೋಗುವವರು ಹೋಗಲಿ ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌