ವಿಜಯಪುರ: ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಡಯಟ್ ಪ್ರಿನ್ಸಿಪಲ್ ಸಾಯಿರಾಬಾನು ಖಾನ್ ಹೇಳಿದ್ದಾರೆ.
ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ ಹಾಗೂ ಡಯಟ್ ಸಹಯೋಗದಲ್ಲಿ ಜಿಲ್ಲೆಯ ನಾನಾ ಶಾಲೆಗಳ ಆಯ್ದ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಅಟಲ್ ಟಿಂಕರಿAಗ್ ಲ್ಯಾಬ್‌ಗಳ ಸದ್ಬಳಕೆಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಪ್ರಯೋಗಾಲಯದಿಂದ ಚಂದ್ರಯಾನದAಥಹ ಇತಿಹಾಸವನ್ನು ಸೃಷ್ಠಿಸುವ ವಿಜ್ಞಾನಿಗಳು ಹುಟ್ಟುತ್ತಾರೋ ಗೊತ್ತಿಲ್ಲ. ಆದ್ದರಿಂದ ಎಲ್ಲರೂ ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡು ತಂತಮ್ಮ ಶಾಲೆಗಳಲ್ಲೂ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಹೇಳಿದರು.
ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಬಂದನಾ ಬ್ಯಾನರ್ಜಿ ಮಾತನಾಡಿ, ಈಗಾಗಲೇ ತಮ್ಮ ಶಾಲೆಯಲ್ಲಿ ಮಕ್ಕಳಿಂದ ಡ್ರೋಣ್ ಉಡಾವಣೆ ಮಾಡಿರುವದರ ಕುರಿತು ಮಾಹಿತಿ ನೀಡಿದರು.
ಆಡಳಿತಾಧಿಕಾರಿ ಕೌಶಿಕ ಬ್ಯಾನರ್ಜಿ ಮಾತನಾಡಿ, ನಮ್ಮ ಶಾಲೆಯಲ್ಲಿ ಎ. ಟಿ. ಎಲ್ ಲ್ಯಾಬ್ ಅತ್ಯಂತ ಕ್ರೀಯಾಶೀಲವಾಗಿದ್ದು, ಶಾಲೆಯ ನಿರ್ದೇಶಕ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಎಲ್ಲ ರೀತಿಯಿಂದ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಎ. ಟಿ. ಎಲ್ ನೋಡಲ್ ಆಧಿಕಾರಿ ಜಯಪ್ರಕಾಶ ಸೊಡ್ಡಗಿ, ಸಂಪನ್ಮೂಲ ವ್ಯಕ್ತಿಗಳಾದ ಆರೀಪ ಮಕಾಂದಾರ, ಪ್ರಸನ್ನ ಹೆಗಡೆ, ಶೋಭಾ ಬೆಳ್ಳುಂಡಗಿ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ್ದ ಶಾಲಾ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.