ಬಾಗಲಕೋಟೆಯಲ್ಲಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ

ಬಾಗಲಕೋಟೆ:  ನಗರದ ಬಸವೇಶ್ವರ ವಿದ್ಯಾವರ್ದಕ ಸಂಘದ ಸಂಸ್ಥಾಪಕ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಶ್ರಾವಣ ಮಾಸದ ಉತ್ಸವದ ಅಂಗವಾಗಿ ಬಿ. ವಿ. ವಿ. ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಅಜ್ಜನವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ ನಡೆಯಿತು.

ಸಂಘದ ಕಾಯಾ೯ಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮತ್ತು ಗುಣದಾಳದ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ದೇವರು ಪೂಜೆ ಸಲ್ಲಿಸಿ ಈ ಪ್ರದರ್ಶನ ಉದ್ಫಾಟಿಸಿದರು.

ನೂರಾರು ವಿದ್ಯಾಥಿ೯ಗಳು ಹಾಗೂ ಸಾವ೯ಜನಿಕರು ಅಜ್ಜನವರ ಜೀವನ ಚರಿತ್ರೆ ಚಿತ್ರಪಟಗಳ ಪ್ರದಶ೯ನವನ್ನು ಶ್ರದ್ದಾ – ಭಕ್ತಿಯಿಂದ ವೀಕ್ಷಿಸಿದರು.  ವೈದ್ಯ ವಿದ್ಯಾಥಿ೯ಗಳು ಬೀಳೂರು ಅಜ್ಜನವರ ಸಮಗ್ರ ಜೀವನ ಚರಿತ್ರೆಯನ್ನು ಜನನದಿಂದ ಲಿಂಗೈಕ್ಯ ಆಗುವವರೆಗಿನ ಎಲ್ಲ ಘಟನೆಗಳನ್ನು- ಪವಾಡಗಳನ್ನು ಮಾಮಿ೯ಕವಾಗಿ ವಿವರಿಸಿದ್ದು ಜನಮೆಚ್ಚುಗೆಗೆ ಪಾತ್ರವಾಯಿತು.

ಬಾಗಲಕೋಟೆಯಲ್ಲಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಗಳ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು

 

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಸಾಸನೂರ, ಎಸ್. ಎನ್. ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸಂಘದ ಸದಸ್ಯರಾದ ಕುಮಾರ ಹಿರೇಮಠ.ರುದ್ರೇಶ ಅಕ್ಕಿಮರಡಿ, ಆರ್. ಎಚ್. ಕಾಯಿ, ಸಂಗಣ್ಣಾ ಕಲಾದಗಿ ಪ್ರಾಚಾಯ೯ ಡಾ. ಅರುಣ ಹೂಲಿ. ಉತ್ಸವ ಕಮೀಟಿ ಅಧ್ಯಕ್ಷ ಬಸವರಾಜ ಬೋಳಿಶಟ್ಟಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ. ಎಸ್. ಪಾವಟೆ, ಪ್ರಾಧ್ಯಾಪಕರಾದ ಡಾ. ರವಿ ಕೋಟೆಣ್ಣವರ, ಡಾ. ಮಿಲಿಂದ ಬೆಳಗಾಂವಕರ, ಡಾ. ವಿಜಯಲಕ್ಷ್ಮಿ ಪಾಟೀಲ. ಡಾ.ಸುಧೀರ ಬೆಟಗೇರಿ. ಡಾ.ಪ್ರದೀಪ .ಕೆ.ಎಸ್. ಡಾ ಜಯಲಕ್ಷ್ಮಿ ಪಾಟೀಲ. ಡಾ.ದೀಪಕ ನಾಯಕ. ಡಾ.ಸುನೀಲ ಭೋಸಲೆ.ರಾಜೇಶ ಬಾಗಲಕೋಟಕರ, ಪ್ರದೀಪ ಜಿಗಳೂರ ಉಪಸ್ಥಿತರಿದ್ದರು.

ವಿದ್ಯಾಥಿ೯ ಪ್ರತಿನಿಧಿಗಳಾದ ಆನಂದ ಒಡೆಯರ, ಕಾತಿ೯ಕ ವಸ್ತ್ರದ, ಸದಾಶಿವ, ಗಿರೀಶ, ಅಜು೯ನ, ಪೈಜಾನ, ಸೋಹಮ್, ಸಮಥ೯, ರಕ್ಷಿತಾ, ಸಾಹಿಲಿ, ಭಾಗ್ಯಾ, ಪ್ರೇರಣಾ, ವೈಶಾಲಿ, ಬಸಮ್ಮಾ. ಅನ್ನಪೂಣ೯, ಪ್ರಜ್ಞಾ, ಶ್ವೇತಾ,, ಸ್ಪೂತಿ೯, ಪಲ್ಲವಿ, ಶಿವಪ್ರಿಯಾ ಪ್ರದಶ೯ನದ ನಿರ್ವಣಣೆ ಮಾಡಿದರು.

Leave a Reply

ಹೊಸ ಪೋಸ್ಟ್‌