ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷರಾಗಿ ಕುಮಾರ ಚಂದ್ರಕಾಂತ ದೇಸಾಯಿ, ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ ಆಯ್ಕೆ

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಕುಮಾರ ಚಂದ್ರಕಾಂತ ದೇಸಾಯಿ ಮತ್ತು ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ ಆಯ್ಕಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ) ಪರ 11  ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಎಚ್. ಎಸ್. ಕೋರಡ್ಡಿ ಪರ 8 ಮತಗಳು ಬಂದವು.  ಹೀಗಾಗಿ ಕುಮಾರ ಚಂದ್ರಾಕಾಂತ ದೇಸಾಯಿ ಮೂರು ಮತಗಳ ಅಂತರದಿಂದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಪಾಂಡಪ್ಪ ಲೆಂಕೆಣ್ಣವರ ಮಾತ್ರ ನಾಮಪತ್ರ ಸಲ್ಲಿಸಿದ್ದದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕ ಶಶಿಕಾಂತಗೌಡ ಭೀಮನಗೌಡ ಪಾಟೀಲ(ಶಿರಬೂರ), ನಿರ್ದೇಶಕರಾದ ಅದೃಷಪ್ಪ ವಾಸಣ್ಣ ದೇಸಾಯಿ, ಈರನಗೌಡ ಬಸನಗೌಡ ನ್ಯಾಮಗೌಡರ, ಗೌಡಪ್ಪ ಕೃಷ್ಣಪ್ಪ ಕೋಣಪ್ಪನವರ, ರಮೇಶ ಪಾಂಡಪ್ಪ ಜಕರಡ್ಡಿ, ಬಸನಗೌಡ ದುಂಡಪ್ಪಗೌಡ ಪಾಟೀಲ, ಮಲ್ಲಪ್ಪ ಭೀಮಪ್ಪ ಮಾದರ, ಸೋಮನಗೌಡ ರಾಮನಗೌಡ ಪಾಟೀಲ, ಹಣಮಂತ ಭೀಮಪ್ಪ ಕೊಣ್ಣೂರ, ಸಂಜಯಗೌಡ ಗೌಡಪ್ಪಗೌಡ ಪಾಟೀಲ, ರತ್ನವ್ವ ಪಾಂಡಪ್ಪ ಬಿರಾದಾರ, ಲಕ್ಷ್ಮಿಬಾಯಿ ಪಾಂಡು ಸಾಹುಕಾರ ದೊಡಮನಿ, ಶರಶ್ಚಂದ್ರ(ಕುಮಾರ) ತಿಮ್ಮನಗೌಡ ಪಾಟೀಲ, ಗುರಲಿಂಗಪ್ಪ ದುಂಡಪ್ಪ ಅಂಗಡಿ, ಸತ್ಯಜೀತ ಶಿವಾನಂದ ಪಾಟೀಲ, ಶ್ರೀನಿವಾಸ ಕೋಣಪ್ಪ ಉರ್ಫ ಹನುಮಪ್ಪ ನಿಡೋಣಿ ಪಾಲ್ಗೋಂಡರು.

ವಿಜಯಪುರ ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪುರ), ಅಶೋಕ ಪಾಂಡಪ್ಪ ಲೆಂಕೆಣ್ಣವರ ಆಯ್ಕೆಯಾದ ಬಳಿಕ ವಿಜಯೋತ್ಸವ ಆಚರಿಸಿದರು

ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶಟ್ಟಿ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಗೆಲುವಿನ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪುರ) ಹಿರಿಯರು, ರೈತರ ಹಾಗೂ ಷೇರುದಾರ ಸದಸ್ಯರ ಸಲಹೆ ಮತ್ತು ಸೂಚನೆಗಳನ್ನು ಪಡೆದು ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ನಂತರ ವಿಜೇತ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಪರಸ್ಪರ ಗುಲಾಲ ಬಣ್ಣವನ್ನು ಎರಚಿ ಸಂಭ್ರಮಾಚರಣೆ ನಡೆಸಿದರು.  ಅಲ್ಲದೇ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.  ಕಾರ್ಖಾನೆಯ ಸುತ್ತಮುತ್ತಲಿನ ನಾನಾ ಗ್ರಾಮಗಳ ಜನರು, ರೈತರು, ಷೇರುದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌