ಆಯುಷ್ಮಾನ ಭಾರತ ಅಭಿಯಾನ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷಿ ಅಭಿಯಾನಕ್ಕೆಸಂಸದ ರಮೇಶ ಜಿಗಜಿಣಗಿ ಚಾಲನೆ

ವಿಜಯಪುರ: ಆಯುಷ್ಮಾನ ಭಾರತ ಅಭಿಯಾನ ಕೇಂದ್ರ ಸರಕಾರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.  ದೇಶಾದ್ಯಂತ ಈ ಅಭಿಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ ಅಂಗವಾಗಿ, ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರದ ಆಶಯದಂತೆ ಅಕ್ಟೋಬರ್- 2ರ […]

ಗಣೇಶ ಚತುರ್ಥಿಗೆ ಅನುಮತಿ ಬೇಕಿಲ್ಲ- ಸನಾತನ ಧರ್ಮದ ಬಗ್ಗೆ ಸ್ವಾಮೀಜಿಗಳೂ ಧ್ವನಿ ಎತ್ತಲಿ- ಶಾಸಕ ಯತ್ನಾಳ

ವಿಜಯಪುರ: ಗಣೇಶ ಚತುರ್ಥಿಗೆ ಪೊಲೀಸರಿಂದ ಯಾವುದೇ ಅನುಮತಿ ಬೇಕಿಲ್ಲ. ಪೊಲೀಸರು ಒತ್ತಾಯ ಮಾಡಿದರೆ ಹೋರಾಟ ಮಾಡ್ತುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಶಾಂತಿ ಸಭೆಗೆ ಯಾರೂ ಹೋಗುವ ಅಗತ್ಯವಿಲ್ಲ. ಬೇರೆ ಧರ್ಮದ ಹಬ್ಬ ಇದ್ದಾಗ ಯಾವಾಗ ಶಾಂತಿ ಸಭೆ ಮಾಡುತ್ತಾರೆ. ನಗರದಲ್ಲಿ ಯಾರು ಗಣೇಶ ಪ್ರತಿಷ್ಠಾನಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಪೊಲೀಸರೇ ನಿಮ್ಮ ಮಂಡಳಿ ಬಳಿ ಆಗಮಿಸಿ ಮಾಹಿತಿ ಕಲೆ ಹಾಕುತ್ತಾರೆ. ಅನುಮತಿ […]