ಗಣೇಶ ಚತುರ್ಥಿಗೆ ಅನುಮತಿ ಬೇಕಿಲ್ಲ- ಸನಾತನ ಧರ್ಮದ ಬಗ್ಗೆ ಸ್ವಾಮೀಜಿಗಳೂ ಧ್ವನಿ ಎತ್ತಲಿ- ಶಾಸಕ ಯತ್ನಾಳ

ವಿಜಯಪುರ: ಗಣೇಶ ಚತುರ್ಥಿಗೆ ಪೊಲೀಸರಿಂದ ಯಾವುದೇ ಅನುಮತಿ ಬೇಕಿಲ್ಲ. ಪೊಲೀಸರು ಒತ್ತಾಯ ಮಾಡಿದರೆ ಹೋರಾಟ ಮಾಡ್ತುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಶಾಂತಿ ಸಭೆಗೆ ಯಾರೂ ಹೋಗುವ ಅಗತ್ಯವಿಲ್ಲ. ಬೇರೆ ಧರ್ಮದ ಹಬ್ಬ ಇದ್ದಾಗ ಯಾವಾಗ ಶಾಂತಿ ಸಭೆ ಮಾಡುತ್ತಾರೆ. ನಗರದಲ್ಲಿ ಯಾರು ಗಣೇಶ ಪ್ರತಿಷ್ಠಾನಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಪೊಲೀಸರೇ ನಿಮ್ಮ ಮಂಡಳಿ ಬಳಿ ಆಗಮಿಸಿ ಮಾಹಿತಿ ಕಲೆ ಹಾಕುತ್ತಾರೆ. ಅನುಮತಿ ಪಡೆಯಬೇಕು. ಹಣ ಪಡೆಯಬೇಕು ಎಂದರೆ ನಾವೂ ಹೋರಾಟ ಮಾಡುತ್ತೇವೆ. ವಿಜಯಪುರಲ್ಲಿ ಜೈಲ್ ಭರೋ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸನಾತನ ಧರ್ಮದ ಬಗ್ಗೆ ಸ್ವಾಮೀಜಿಗಳೂ ಧ್ವನಿ ಎತ್ತಲಿ

ಸನಾತನದ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ. ಸನಾತನ ಧರ್ಮ ನಾಶ ಮಾಡಬೇಕು ಎನ್ನುವವರು ಬಗ್ಗೆ ಮಾತನಾಡುವರು ಕ್ಯಾನ್ಸರ್, ಏಡ್ಸ್ ಇದ್ದ ಹಾಗೆ. ಸನಾತನ ಧರ್ಮದ ಪರವಾಗಿ ಆದಿಚುಂಚನಗಿರಿ ಸ್ವಾಮೀಜಿಗಳು ಮಾತನಾಡಿದ್ದಾರೆ. ಉಳಿದ ಸ್ವಾಮೀಜಿಗಳು ಮಾತನಾಡಿಲ್ಲ, ಉಳಿದವರು ಕೂಡಾ ಧ್ವನಿ ಎತ್ತಬೇಕು. ಖಾವಿ ಬಟ್ಟೆ ಹಾಕಿದವರು ಅನೇಕರು ಇದನ್ನು ಖಂಡನೆ ಮಾಡಿಲ್ಲ. ಇಂಥ ಸ್ವಾಮಿಜಗಳು ನಮಗೇಕೆ ಬೇಕು? ಸ್ವಾಮಿಜಿಗಳಲ್ಲಿ ಕೆಲವರು ಕಪಟರು ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಅವರು ಮಾತನಾಡಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಜೀವಂತವಾಗಿ ಬಂದರೂ ಸಿದ್ಧರಾಮಯ್ಯ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಕ

ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಜೀವಂತವಾಗಿ ಬಂದರೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನನ್ನ ಹೆಣವು ಹೋಗಲ್ಲ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಜೀವಂತವಾಗಿ ಬಂದರು ಬಿಜೆಪಿಗೆ ಸೇರಿಸಿಕೊಳ್ಳಲ್ಲ. ಬಿಜೆಪಿಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಅಂಗಲಾಚಿದರು ನಾವು ತಯಾರಿಲ್ಲ. ನಮಗೆ ಸಿದ್ದರಾಮಯ್ಯ ಅವಶ್ಯಕತೆ ಇಲ್ಲ. ಅವರ ಹೆಣ ತೆಗೆದುಕೊಳ್ಳುವುದು ದೂರದ ಮಾತು ಎಂದು ಹೇಳಿದರು.

ಕರುಣಾನಿಧಿ ಕುಟುಂಬದ ವಿರುದ್ಧ ವಾಗ್ದಾಳಿ

ಬಿಜೆಪಿ ವಿಷದ ಹಾವು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರುಣಾನಿಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಕರುಣಾನಿಧಿ ತಳಿಯೆ ವಿಷದ ಹಾವು. ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ. ಧರ್ಮಕ್ಕೆ ನಿಷ್ಠೆ ಇಲ್ಲ. ಒಂದು ಕಾಲದಲ್ಲಿ ಎಲ್.ಟಿ.ಟಿ.ಇಗೆ ಇವರು ಸಪೋರ್ಟ್ ಮಾಡಿದ್ದಾರೆ. ದೇಶವಿರೋಧಿ ಚಟುವಟಿಕೆಗೆ ಸಪೋರ್ಟ್ ಮಾಡಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಹುಭಾಷಾ ನಟ ಪ್ರಕಾಶ ರೈ ವಿರುದ್ಧವೂ ವಾಗ್ದಾಳಿ

ಇದೇ ವೇಳೆ, ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ, ಪ್ರಕಾಶ ರೈ ಅವರನ್ನು ಹಂದಿಗೆ ಹೋಲಿಸಿದರು. ಸನಾತನ ಧರ್ಮ ಕಾಗೆ ಎಂದ ಪ್ರಕಾಶ್ ರಾಜ್ ವಿರುದ್ಧ ಹರಿಹಾಯ್ದ ಅವರು, ಪ್ರಕಾಶ ರೈ ಹಂದಿ ಇದ್ದ ಹಾಗೇ. ಪ್ರಕಾಶ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ಸ್ವಚ್ಛ ಮಾಡಲು ಹಂದಿ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಪ್ರಕಾಶ ರೈ ಎನ್ನುವ ಹಂದಿ ಇದೆ ಎಂದು ಹೇಳಿದರು.

ಸಚಿವ ಡಿ. ಸುಧಾಕರ ವಜಾಕ್ಕೆ ಆಗ್ರಹ

ಸಚಿವ ಡಿ. ಸುಧಾಕರ ವಿರುದ್ಧ ಎಫ್.ಐಆರ್ ದಾಖಲಾಗಿರುವ ವಿಚಾರದ ಕುರಿತು ಪ್ರತಿಕ್ರಿಯ ನೀಡಿದ ಯತ್ನಾಳ, ದಲಿತರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸಚಿವ ಡಿ. ಸುಧಾಕರ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಇದರಿಂದ ಕಾಂಗ್ರೆಸ್ ಸರಕಾರದಲ್ಲಿ ದಲಿತರಿಗೆ ಎಷ್ಟು ಗೌರವ ಮತ್ತು ಕಾಳಜಿ ಇದೆ ಎನ್ನುವುದು ಗೊತ್ತಾಗುತ್ತದೆ. ಸಿಎಂ ತಕ್ಷಣವೇ ಸಚಿವ ಡಿ. ಸುಧಾಕರ ಅವರ ರಾಜೀನಾಮೆ ಪಡೆಯಬೇಕು. ಇಲ್ಲವೇ ವಜಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಿಎಂ ವಿರುದ್ಧ ಬಿ. ಕೆ. ಹರಿಪ್ರಸಾದ ಗುಡುಗು ವಿಚಾರ

ಬಿ. ಕೆ. ಹರಿಪ್ರಸಾದ ಕಾಂಗ್ರೆಸ್ಸಿನ ಹಿರಿಯ ನಾಯಕರು. ಅವರನ್ನು ಧಮ್ ಇದ್ರೆ, ತಾಕತ್ ಇದ್ರೆ ಗಂಡಸತನ ಇದ್ರೆ ಡಿಕೆಶಿ ಉಚ್ಚಾಟನೆ ಮಾಡಲಿ. ನನಗೆ ಡಿಕೆಶಿ ಮಾತನಾಡಿದ್ದ, ಈಗ ಕ್ರಮ ಕೈಗೊಳ್ಳಲಿ ನೋಡೋಣ ಎಂದು ಸವಾಲು ಹಾಕಿದ ಬಸನಗೌಡ ಪಾಟೀಲ ಯತ್ನಾಳ, ಅದು ಸಾಧ್ಯ ಆಗಲ್ಲ ಎಂದು ಹೇಳಿದರು.

ಮತ್ತೆ ಪಂಚಮಸಾಲಿ ಹೋರಾಟ ಆರಂಭ ವಿಚಾರ

ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸುವ ಕುರಿತು ಪ್ರತಿಕ್ರಿಯೆ ನೀಡಿದ ್;ರು, ನಾವು ಈಗಾಗಲೇ ಪಂಚಮಸಾಲಿ ಸಮುದಾಯಕ್ಕೆ ರಿಸರ್ವೇಷನ್ ಕೊಟ್ಟಿದ್ದೇವೆ. ಮುಂದೆ ಏನಾದರೂ ಆಗಬೇಕಾದರೇ ಗುರುಗಳು ಮತ್ತು ಅವರ ಶಿಷ್ಯಂದಿರು ಇದ್ದಾರೆ. ಶಾಸಕರಾದ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಇದ್ದಾರೆ. ಅವರದೇ ಸರಕಾರವಿದೆ. ಏನು ಮಾಡುತ್ತಾರೆ ನೋಡೋಣ ಎಂದು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ನಾವು ಈಗಾಗಲೇ ಮೀಸಲಾಯಿ ನೀಡಿದ್ದೇವೆ. ಸುಮ್ಮನೇ ಪದೇ ಪದೇ ಹೋರಾಟದಲ್ಲಿ ಭಾಗವಹಿಸಲು ನಮಗೆ ಕೆಲಸ ಇಲ್ಲವಾ? ಹಗಲೆಲ್ಲ ಏನು ಭಾಗವಹಿಸುವುದು? ನಮ್ಮ ಸರಕಾರ ಇದ್ದಾಗ ನೋಟಿಫಿಕೇಷನ್ ಮಾಡಿದ್ದೇವೆ. ರಾಜ್ಯಪಾಲರರಿಂದ ಸುಗ್ರೀವಾಜ್ಞೆ ಮಾಡಿಸಿದ್ದೇವೆ. ಈಗ ಅದನ್ನು ಇಂಪ್ಲಿಮೆಂಟ್ ಮಾಡುವುದು ಕಾಂಗ್ರೆಸ್ ಸರಕಾರದ ಕೈಯಲ್ಲಿದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಜನ ಪಂಚಮಸಾಲಿ ಸಮುದಾಯದ ನಾಯಕರು, ಶಾಸಕರು, ಮಂತ್ರಿಗಳಿದ್ದಾರೆ. ಅವರೆಲ್ಲ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಾರೆ ಎಂದು ಹೇಳಿದ ಅವರು, ಆಗ ಇದ್ದ ಹೋರಾಟದ ತೀವ್ರತೆ ಈಗಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವೆಲ್ಲ ಗಟ್ಟಿ ಇದ್ದೆವು ಎಂದು ಇಷ್ಟೆಲ್ಲಾ ಅಗಿದೆ. ಈಗ ಕಾಶಪ್ಪನವರು ಅವರೆಲ್ಲ ಇದ್ದಾರಲ್ಲ ಅವರು ಮಾಡಿ ತೋರಸಲಿ ಎಂದು ಸವಾಲು ಹಾಕಿದರು.

ಅಧಿಕಾರಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡಿದೆ. ಈಗ ಅವರು ಕೊಡಿಸಲಿ. ಜಾರಿ ಮಾಡುವುದು ಮಾತ್ರ ಬಾಕಿ ಇದೆ. ನಾವು ರಿಸರ್ವೇಷನ್ ಮಾಡಿದ್ದೇವೆ. ಈಗ ಅದನ್ನು ಜಾರಿ ಮಾಡಲಿ. ಒಂದೇ ಸಮಾಜಕ್ಕೆ ಅಲ್ಲ, ಎಲ್ಲಾ ಸಮಾಜಗಳಿಗೂ ನಾವು ನ್ಯಾಯ ಒದಗಿಸಿದ್ದೇವೆ ಎಂದು ಅವರು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌