ವಿಜಯಪುರ: ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ ಅವರನ್ನು ಪ್ರೋತ್ಸಾಹಿಸುವುದು ಬಿಇಒ ಕಚೇರಿಯ ಎಲ್ಲ ಕಾರ್ಯ ನಿರ್ವಾಹಕರ ಕರ್ತವ್ಯ ಎಂದು ಧಾರವಾಡ ಶಹರ ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಸಂತೋಷಕುಮಾರ ಎಸ್. ವಿಜಾಪೂರ ಹೇಳಿದ್ದಾರೆ.
ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ಬಿಇಒ ಕಚೇರಿಯ ತಪಾಸಣೆ ಕಾರ್ಯ ನಿರ್ವಹಿಸಿದ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಧಿಕಾರಿಗಳ ಮತ್ತು ಸಿಬ್ಬಂದಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಸುಮಾರು 1100ಕ್ಕೂ ಹೆಚ್ಚಿನ ಶಿಕ್ಷಕರ ಸೇವಾ ಪುಸ್ತಕಗಳು ಹಾಗೂ ಕಚೇರಿಯ ಇತರೆ ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಿಇಒ ಕಚತೇರಿಯ ಸಿಬ್ಬಂದಿಗೆ ಹೆಚ್ಚಿನ ಮಾರ್ಗದರ್ಶನ ನೀಡಿ ಶಿಕ್ಷಕರಿಗೆ ಪಾಠ ಭೋದನೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಸಿಬ್ಬಂದಿಯಾದ ರಮೇಶ ಕಿಲ್ಲಾರಿ, ವಿರೇಶ ಹರಕುಣಿ, ಕಲಂದರ ಹಾರುಗೇರಿ, ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಎಸ್. ಬಿ. ಪಾಟೀಲ, ಅಧೀಕಕ ಪಿ. ಎಸ್. ಕಂಠಿ, ಎಸ್. ಸಿ. ಹಿರೇಮಠ, ಎಚ್. ರಘುವೀರ, ಎಸ್. ಆರ್. ಪಾಟೀಲ, ರೇಷ್ಮಾ ಅಣ್ಣಿಗೇರಿ, ಆನಂದಕುಮಾರ ಓಕಳಿ, ಎಸ್. ಜಿ. ಕಳ್ಳಿಗುಡ್ಡ ಮುಂತಾದವರು ಉಪಸ್ಥಿತರಿದ್ದರು.
ಎಚ್.ಎ. ಮೇಟಿ ಈ ಕಾರ್ಯಕ್ರಮ ನಿರೂಪಿಸಿದರು.