ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ, ನಿರಂತರ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಬಹುದು- ಜಾವೀದ ಜಮಾದಾರ

ವಿಜಯಪುರ: ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ ಹಾಗೂ  ನಿರಂತರ  ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ ಎಂದು ರಾಷ್ಚ್ರ ಯುವ ಪ್ರಶಸ್ತಿ ಪುರಸ್ಕೃತರ ಪೆಡರೇಶನ್ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದ್ದಾರೆ.

ನಗರದ ಡಾ. ಬಿ. ಆರ್  ಅಂಬೇಡ್ಕರ  ಜಿಲ್ಲಾ  ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ,  ಜಿಲ್ಲಾ ಪಂಚಾಯಿತಿ,  ಹಾಗೂ  ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆ, ಕರ್ನಾಟಕ  ಕ್ರೀಡಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜಯಪುರ ತಾಲೂಕು  ಮಟ್ಟದ ದಸರಾ ಕ್ರೀಡಾಕೂಟ -ಉದ್ಗಾಟಿಸಿ ಅವರು ಮಾತನಾಡಿದರು.

ಕ್ರೀಡೆಯು ಮನುಷ್ಯನಿಗೆ ಮನೊಚೈತನ್ಯ, ಉಲ್ಲಾಸ, ನೀಡುತ್ತದೆ.  ಅಲ್ಲದೇ, ಸದೃಡ ಆರೋಗ್ಯ ಮಾನಸಿಕ ಸಮತೋಲನ ಕಾಪಾಡಲು ಸಹಕಾರಿಯಾಗಿದೆ.  ವಿದ್ಯಾರ್ಥಿಗಳು ಕ್ರೀಡೆಯನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು.  ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಆಸಕ್ತ ಕ್ರೀಡೆಯಲ್ಲಿ ತಾಂತ್ರಿಕತೆ, ನೈಪುಣ್ಯತೆ ಕ್ರೂಡಿಸಿಕೊಳ್ಳ್ಳಬೇಕು.  ಈ ಮೂಲಕ ದೇಶವನ್ನು ಯುವ ಕ್ರೀಡಾ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನಾಗರಾಜ ಪಿ. ಲಂಬು ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವರು  ಸೊಲು, ಗೆಲವು ಎನ್ನದೆ ಛಲಬಿಡದೆ  ಮುಂದೆ ಸಾಗಬೇಕು.  ನಿರಂತರ ಪರಿಶ್ರಮದಿಂದ ಮಾತ್ರ ಒಳ್ಳೆಯ ಸಾದನೆ ಮಾಡಬಹುದು.  ಜಿಲ್ಲೆಯ ಯುವಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂತೋಷಕುಮಾರ ಎಸ್. ನಿಗಡಿ ಮಾತನಾಡಿ, ಕ್ರೀಡಾ  ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯತ್ತಿತ್ವ ವಿಕಸನ ಜೊತೆಗೆ ಸಹೊದರತೆ ಬಾವನೆ  ಮೂಡುತ್ತದೆ.  ಆರೋಗ್ಯವಂತ ಜೀವನ ನಡೆಸಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇವಾದಳದ ಮುಖಂಡ ನಾಗರಾಜ ಡೊಣೂರ, ಮಲ್ಲಪ್ಪ ಚಿಂಚಲಿ, ತರಬೇತಿದಾರಾರ ಎಂ. ಬಿ. ಪಾಟೀಲ, ರಾಜು ಚವ್ಹಾಣ ಉಪಸ್ಥಿತರಿದ್ದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿ. ಆರ್. ಕುಲಕರ್ಣಿ ವಂದಿಸಿದರು.

Leave a Reply

ಹೊಸ ಪೋಸ್ಟ್‌