ನಾಟಕ ಮಾಡುವಾಗ ಕುಸಿದು ಬಿದ್ದ ಯುವ ಪೋಸ್ಟಮ್ಯಾನ್ ಸಾವು- ಕೊಟ್ಯಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ವಿಜಯಪುರ: ಊರಿನ‌ ಜನರೆಲ್ಲ ಲೋಕಲ್ ನಾಟಕ ನೋಡುತ್ತ ಮನರಂಜನೆಯಲ್ಲಿದ್ದರು.  ಮೇಲಾಗಿ ಗ್ರಾಮದ ಮುಕ್ತಾಂಕಾರ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ನಾಟಕವನ್ನು ಸ್ಥಳೀಯವಾಗಿಯೇ ರಚಿಸಲಾಗಿತ್ತು.  ಗ್ರಾಮದ ಯುವಕರೂ ನಾನಾ ಪಾತ್ರಗಳಲ್ಲಿ ನಟಿಸುತ್ತಿದ್ದರು.

ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಹೆಸರಿನ‌ ಈ ನಾಟಕದ ನಾನಾ ದೃಷ್ಯಗಳು ಬಿರುಸಿನಿಂದ ಸಾಗಿದ್ದವು.  ಮಧ್ಯರಾತ್ರಿ ಸುಮಾರು 12.30ರ ಹೊತ್ತಿಗೆ ಹಾಸ್ಯ ಕಲಾವಿದ ಬಂದು ಡ್ತಾನ್ಸ್ ಮಾಡುತ್ತಿದ್ದಾಗ ಎಲ್ಲರೂ ಕುತೂಹಲದಿಂದ ನಾಟಕ ವೀಕ್ಷಿಸುತ್ತಿದ್ದರು.  ಆಗ, ಹಾಸ್ಯ ಕಲಾವಿದನ ಪಾತ್ರದಾರಿ ಕೈ ಮೇಲೆತ್ತಿ ಹಿಂಬದಿಯಿಂದ ದಿಢೀರಾಗಿ ಮೈಕ್ ಗೆ ತಾಕೊ ಕುಸಿದು ಬಿದ್ದಿದ್ದಾನೆ.  ಆಗ ಅಲ್ಲಿ ನೆರೆದಿದ್ದವರು ಕಾಲು ಜಾರಿ ಅಥವಾ ಆಯ ತಪ್ಪಿ ಬಿದ್ದಿರಬಹುದು ಎಂದುಕೊಂಡಿದ್ದರು.

ಆದರೆ, ಆಗಿದ್ದೆ ಬೇರೆ.  ಯುವಕನನ್ಮು ಎಬ್ಬಿಸಲು ಪ್ರಯತ್ನಿಸಿದ್ದಾರೆ.  ಆದರೆ, ಆತ ಸ್ಪಂದಿಸಿಲ್ಲ.  ಕೂಡಲೇ ಆತನನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಆತನನ್ನು ಪರೀಕ್ಷಿಸಿದ ವೈದ್ಯರು ಯುವಕ ಬದುಕಿಲ್ಲ ಎಂದು ದೃಢಪಡಿಸಿದ್ದಾರೆ.

ಬೆಳಗ್ಗೆ 8 ಗಂಟೆಯ ಸುಮಾರಿಗೆ ಯುವಕನ ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿಕೊಂಡು ಅಗ್ನಿಸ್ಪರ್ಷ ಮಾಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಯುವಕನ‌ ಹಿನ್ನೆಲೆ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮುಕ್ತಾಂಕಾರ ಜಾತ್ರೆಯ ಅಂಗವಾಗಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಸಾಮಾಜಿಕ ನಾಟಕ ಆಯೋಜಿಸಲಾಗಿತ್ತು.  ಈ ನಾಟಕದಲ್ಲಿ ಯುವಕ ಶರಣು ಶಿವಾನಂದ ಬಾಗಲಕೋಟ(25) ಪಾಲ್ಗೊಂಡಿದ್ದ.  ಹಾಸ್ಯ ಕಲಾವಿದನಾಗಿ ನಟಿಸುವಾಗ ಏಕಾಏಕಿ ಕುಸಿದು ತೀವ್ರ  ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ.

ಈ ಯುವಕ ತಿಕೋಟಾ ಪಟ್ಟಣದಲ್ಲಿ ಪೋಸ್ಟ್ ಆಫೀಸಿನಲ್ಲಿ ಪೋಸ್ಟಮನ್ ಆಗಿದ್ದ.  ಶಿವಾನಂದ ಮತ್ತು ಶಿವಬಾಯಿ ಬಾಗಲಕೋಟ ದಂಪತಿಯ ಏಕೈಕ ಪುತ್ರನಾಗಿದ್ದ.  ಈಗಾಗಲೇ ಪತಿಯನ್ನು ಕಳೆದುಕೊಂಡಿರುವ ಶಿವಬಾಯಿ ಬಾಗಲಕೋಟ ಅವರಿಗೆ ಈಗ ಏಕೈಕ ಮಗನ‌ ಅಕಾಲಿಕ ಸಾವು ಆಕಾಸವೇ ಕಳಚಿ ಬಿದ್ದಂತಾಗಿದೆ.  ಯುವಕನ‌ ಸಾವಿನಿಂದಾಗಿ ಗ್ರಾಮದಲ್ಲಿ ಮೌನ ಆವರಿಸಿದೆ.

ತಿಕೋಟಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

ಹೊಸ ಪೋಸ್ಟ್‌