ರೋಗಿಗಳ ಆರೋಗ್ಯ ಸುಧಾರಣೆ, ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು ಸದಾ ಕಾರ್ಯೋನ್ಮುಖರಾಗಿರುತ್ತಾರೆ- ಡಾ. ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ: ರೋಗಿಗಳ ಆರೋಗ್ಯ ಸುಧಾರಣೆಗೆ ಮತ್ತು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು ಸದಾ ಕಾರ್ಯೋನ್ಮುಖರಾಗಿರುತ್ತಾರೆ ಎಂದು ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಹೇಳಿದ್ದಾರೆ. ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ರೋಗಿಗಳ ಸುರಕ್ಷತಾ ದಿನ ಕಾರ್ಯಕ್ರಮಕ್ಕೆ ಚಾಲನೆ […]
ಕಲ್ಪವೃಕ್ಷ ರಕ್ಷಣೆಗಾಗಿ ಆಸ್ಪತ್ರೆ ವಿನ್ಯಾಸ ಬದಲಿಸಿದ ಚಿಕ್ಕಮಕ್ಕಳ ತಜ್ಞ- ಇವರ ಪರಿಸರ ಪ್ರೇಮ ಇತರರಿಗೆ ಮಾದರಿ
ಮಹೇಶ ವಿ. ಶಟಗಾರ ವಿಜಯಪುರ- ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ, ರೈಲು ಮಾರ್ಗ ನಿರ್ಮಾಣದಂಥ ಸಂದರ್ಭಗಳಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸಲಾಗುತ್ತದೆ. ಕಡಿಮೆಯಾಗುತ್ತಿರುವ ಗಿಡ ಮರಗಳನ್ನು ಬೆಳೆಸಲು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯತ್ತಲೇ ಇರುತ್ತವೆ. ಒಂದು ವೃಕ್ಷ ಕಡಿದರೆ 10 ವೃಕ್ಷಗಳನ್ನು ನೆಡಬೇಕು. ಕಡಿಮೆಯಾಗುತ್ತಿರುವ ಅರಣ್ಯವನ್ನು ವೃದ್ಧಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಹಾಗೂ ಆ ಬೇಡಿಕೆಗಳಿಗೆ ಪೂರಕವಾಗಿ ಕೋಟಿ ವೃಕ್ಷ […]