ಪ್ರತಿಷ್ಠಿತ ಶ್ರೀ‌ ಸಿದ್ಧೇಶ್ವರ ಸಹಕಾರಿ ಬ್ಯಾಂಕಿಗೆ ಈ ವರ್ಷ ರೂ. 1.22 ಕೋ. ನಿವ್ವಳ ಲಾಭ- ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ 1.22 ಕೋ. ನಿವ್ವಳ ಲಾಭ- ಅಧ್ಯಕ್ಷ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 1. 22 ಕೋ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ ತಿಳಿಸಿದ್ದಾರೆ.

ನಗರದ ಆಶ್ರಮ ರಸ್ತೆಯಲ್ಲಿರುವ ಶ್ರೀ ಪರಮಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ನಡೆದ ಬ್ಯಾಂಕಿನ‌ 111ನೇ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು‌ ಮಾತನಾಡಿದರು.

ರಾಜ್ಯದ ಸಹಕಾರಿ ರಂಗದಲ್ಲಿ ಬೆಳೆದ ಕೆಲವೇ ಬ್ಯಾಂಕುಗಳಲ್ಲಿ ನಮ್ಮ ಬ್ಯಾಂಕಿನ ಮೇಲೆ ಠೇವಣಿದಾರರು ನಂಬಿಕೆ ಹೊಂದಿದ್ದು, ರೂ. 577.61 ಕೋ. ಠೇವಣಿ ಇಟ್ಟಿದ್ದಾರೆ. ರೂ. 665.61 ಕೋ. ದುಡಿಯುವ ಬಂಡವಾಳವಿದ್ದು, ಸದಸ್ಯರು, ಗ್ರಾಹಕರ ಹಾಗೂ ನಾಗರಿಕರು ಸಹಕಾರದಿಂದ ಬ್ಯಾಂಕಿನ ಎಟಿಎಂ ಪಾಯಿಂಟ್ ಗಳು ಕಾರ್ಯ‌ ನಿರ್ವಹಿಸುತ್ತಿವೆ. ಇನ್ನೂ ಕೆಲವು ಶಾಖೆಗಳಲ್ಲಿ ಎಟಿಎಂ ಪ್ರಾರಂಭ ಮಾಡಬೇಕಾಗಿದೆ. ಕಳೆದ ವರ್ಷ ರೂ. 54.37 ಕೋ. ಆದಾಯ ಗಳಿಸಿದ್ದು, ಈ ವರ್ಷ ರೂ. 52.54 ಕೋ. ಆದಾಯ ಗಳಿಸಿದೆ. ಬ್ಯಾಂಕಿನ ಸರ್ವ ಆಡಳಿತ ಮಂಡಳಿ ಸದಸ್ಯರುಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಬ್ಯಾಂಕು ಒಟ್ಟು ರೂ. 3.03 ಕೋ. ಲಾಭ ಹೊಂದಿದ್ದು, ಇದರಲ್ಲಿ ಆದಾಯಕರ ರೂ. 88. 32 ಲಕ್ಷ ಅನುತ್ಪಾದಕ ಆಸ್ತಿ ಇದೆ. ರೂ.92.87 ಅನುವು ಕಲ್ಪಿಸಿ ರೂ.1. 22 ಕೋ. ನಿವ್ವಳ ಲಾಭ ಗಳಿಸಿದೆ ಎಂದು ಅವರು ವಿಜಯಕುಮಾರ ಡಿ. ಇಜೇರಿ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕ‌ ರಮೇಶ ಬಿದನೂರ, ಲೆಕ್ಕ ಪರಿಶೋಧಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ. ವಿ. ತಾಳಿಕೋಟಿ‌ ಉತ್ತರ ನೀಡಿದರು.

ಇದೇ ವೇಳೆ ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಬೊಗಶೆಟ್ಟಿ, ನಿರ್ದೇಶಕರಾದ ಹರ್ಷಗೌಡ ಎಸ್. ಪಾಟೀಲ, ಗುರು(ಗುರುಪಾದಯ್ಯ) ಎಸ್. ಗಚ್ಚಿನಮಠ, ವಿಜಯಕುಮಾರ ಆರ್. ಅವರಂಗಬಾದ, ಸುರೇಶ ಜಿ. ಗಚ್ಚಿನಕಟ್ಟಿ, ವಿಶ್ವನಾಥ ಎಸ್. ಪಾಟೀಲ(ಮಸಿಬಿನಾಳ), ಈರಣ್ಣ ಪಟ್ಟಣಶೆಟ್ಟಿ, ರಾಜೇಂದ್ರ ಎಂ ಪಾಟೀಲ(ಉಪ್ಪಲದಿನ್ನಿ), ಡಾ. ಸಂಜೀವ ಪಾಟೀಲ(ಮುಳವಾಡ), ರಮೇಶ ಬಿದನೂರ, ರವೀಂದ್ರ ಎಸ್. ಬಿಜ್ಜರಗಿ, ವೈಜನಾಥ್ ಡಿ. ಕರ್ಪೂರಮಠ, ಶಾಂತಪ್ಪ ಎಸ್. ಜತ್ತಿ, ಬೋರಮ್ಮ ಗೊಬ್ಬೂರ, ಪ್ರಕಾಶ ಬಗಲಿ, ಸಾಯಬಣ್ಣಾ ಎಸ್. ಭೋವಿ, ಅಮೋಘಸಿದ್ಧ ಎಂ. ನಾಯ್ಕೋಡಿ, ಸಂಗನಗೌಡ ಎಸ್. ಪಾಟೀಲ, ಮಂಜುನಾಥ ಗುಂದಗಿ, ಬ್ಯಾಂಕಿನ ಸಲಹೆಗಾರ ಎಸ್. ಕೆ.‌ ಲೋಣಿ ಹಾಗೂ ಬ್ಯಾಂಕಿನ ಗ್ರಾಹಕರು, ಸದಸ್ಯರು ಸಾಹಿತಿಗಳು ನಾನಾ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬಿ. ಕೆ. ಪಾಟೀಲ ನಿರೂಪಿಸಿದರು. ಅಶೋಕ ಶಿವಪ್ಪ ತಿಮಶೆಟ್ಟಿ ವಂದಿಸಿದರು.

Leave a Reply

ಹೊಸ ಪೋಸ್ಟ್‌