ಬ್ಯಾಂಕುಗಳಿಂದ ಸಾಲ ಪಡೆಯುವಾಗ ವಹಿಸುವ ಆಸಕ್ತಿ ಮರಳಿಸುವಾಗಲು ಇರಬೇಕು- ಶ್ರೀ ಗುರು ಶಾಂತಲಿಂಗ ಶಿವಾಚಾರ್ಯ

ವಿಜಯಪುರ: ಬ್ಯಾಂಕುಗಳಿಂದ ಸಾಲ ಪಡೆಯುವಾಗ ತೋರಿಸುವ ಆಸಕ್ತಿಯನ್ನು ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬೊಮ್ಮನಹಳ್ಳಿಯ ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು ಹೇಳಿದ್ದಾರೆ.

ನಗರದ ಎಪಿಎಂಸಿಯಲ್ಲಿರುವ ಶ್ರೀ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸೌಹಾರ್ದ ಸಹಕಾರಿ ಸಂಘ 2022 -23ನೇ ಆರ್ಥಿಕ ವರ್ಷದ 4ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನೂರು ಜನರ ಹಣ ಕೂಡಿಸಿ ಒಬ್ಬರಿಗೆ ಸಾಲದ ರೂಪದಲ್ಲಿ ಕೊಡಬೇಕಾಗುತ್ತದೆ.  ಹಣ ತರುವುದು ಮತ್ತು ಕೊಡುವುದು ಸೌಹಾರ್ದಯುತವಾಗಿರಬೇಕು.  ಸೌಹಾರ್ದದ ಅಭಿವೃದ್ಧಿಗೆ ಜಾಗ್ರತೆಯಿಂದ ಕೆಲಸ ಮಾಡಬೇಕಾಗುತ್ತದೆ.  ಸಾದ ಹಣ ತೆಗೆದುಕೊಂಡು ಹೋಗುವಾಗ ಎಷ್ಟು ಖುಷಿಯಿಂದ ಒಯ್ಯುತ್ತೀರಿ ಅಷ್ಟೇ ಖುಷಿಯಿಂದ ಸಾಲ ಮರುಪಾವತಿಸಬೇಕು ಎಂದು ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಶ್ರೀ ಸೌಹಾರ್ದಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶಂಕರಗೌಡ ಪಾಟೀಲ ವರದಿ ವಚನ ಮಾಡಿ, ಸೌಹಾರ್ಧವು ಕೆಲವೇ ದಿನಗಳಲ್ಲಿ ಉತ್ತಮ ಸಾಧಿಸಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ವೈಯಕ್ತಿಕವಾಗಿ ಹೆಸರು ಮಾಡಲು ಸೌಹಾರ್ದ ಸಂಘ ಸ್ಥಾಪಿಸಿಲ್ಲ.  ನನ್ನ ಸುತ್ತಮುತ್ತಲಿರುವ ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕೃಷಿಕರಿಗೆ ಹಾಗೂ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಅನುಭವಿಗಳು ಸಹಕಾರಿಗಳು ಹಿರಿಯರಾದ ಶಂಕರಗೌಡ ಪಾಟೀಲ ಮತ್ತು ಸ್ನೇಹಿತರ ಸಹಕಾರದಿಂದ ಸೌಹಾರ್ಧ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸೌಹಾರ್ಧವು ಈಗ ರೂ. 39.48 ಲಕ್ಷ ಷೇರು ಬಂಡವಾಳ ಹೊಂದಿದ್ದು, ರೂ. 63.23 ಅ ವರ್ಗದ ಸದಸ್ಯರ ಷೇರು ಬಂಡವಾಳ ಇಟ್ಟಿದ್ದಾರೆ.  ಈಗ ಸಂಘವು ರೂ. 20.60 ಲಕ್ಷ ಲಾಭದಲ್ಲಿ ಹೊಂದಿದೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಡಿವಾಳಪ್ಪ ಸಜ್ಜನ, ರಮೇಶ ರೇಷ್ಮೆ, ವಿರುಪಾಕ್ಷಪ್ಪ ಹನಮಶೆಟ್ಟಿ, ಸಂತೋಷ ಜಾದವ, ಅಮರ ನಾಗಠಾಣ, ಶಿವಾನಂದ ಬಿರಾದಾರ, ಈರಣ್ಣ ಚಿಂಚಲಿ, ಬಾಬು ಜಾದವ, ಅಶ್ವತ್ಥಾಮ ರೇಬಿನಾಳ, ಸಿದ್ದರಾಮಯ್ಯ ಮಲ್ಲಿಕಾರ್ಜುನಮಠ, ವೈಜಿನಾಥ ಬೋಗಶೆಟ್ಟಿ ರಜನಿ ಸಂಬಣ್ಣಿ, ಸಂಯುಕ್ತ ಸಹಕಾರಿ ಜಿಲ್ಲಾ ಸಂಯೋಜಕ ಎಸ್. ಬಸವರಾಜ, ಲೆಕ್ಕಪರಿಶೋಧಕ ಅಶೋಕ ಜಿ. ವಾಲಿಪಾಟೀಲ, ಜಿ. ಎಲ್. ಕಸ್ತೂರಿ(ವಕೀಲರು), ವ್ಯಾಪರಸ್ಥರು ಹಾಗೂ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.

ಆಶಾರಾಣಿ ಪಾಟೀಲ ಸ್ವಾಗತಿಸಿದರು.  ಸುರೇಶ ಹಳಮನಿ ನಿರೂಪಿಸಿದರು.  ಮಹಾಂತೇಶ ಪವಾಡಿಗೌಡರ ವಂದಿಸಿದರು.

Leave a Reply

ಹೊಸ ಪೋಸ್ಟ್‌