ಸಮಸ್ಯೆ ಮುಕ್ತ ಸಮಾಜ ನಿರ್ಮಾಣಕ್ಕೆ ಸರಕಾರ ಜನತಾ ದರ್ಶನ ಕಾರ್ಯಕ್ರಮದ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ- ವಿಠ್ಠಲ ಧೋಂಡಿಬಾ ಕಟಕದೊಂಡ

ವಿಜಯಪುರ: ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳ ಲಾಭ ದೊರಕಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮೂಲಕ ಸಮಸ್ಯೆಗಳ ಮುಕ್ತ ಸಮಾಜ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟು ಆರಂಭಿಸಿದ ಜನತಾ ದರ್ಶನ ಕಾರ್ಯಕ್ರಮದ ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಳ್ಳುವಂತೆ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ ಕರೆ ನೀಡಿದರು. ಜಿಲ್ಲಾಡಳಿತದ ವತಿಯಿಂದ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ ಜನತಾ ದರ್ಶನಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮಾಜದ ಕಟ್ಟ ಕಡೆಯ […]

ಕಾವೇರಿ ವಿವಾದ ಉಲ್ಬಣಿಸಲು ಡಿಸಿಎಂ ಕಾರಣ- ಚಿತ್ರ ನಟರು ಹೋರಾಟಕ್ಕೆ ಧುಮುಕಲಿ- ಜೆಡಿಎಸ್ ಜೊತೆ ಮೈತ್ರಿ ಸ್ವಾಗತಾರ್ಹ- ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಕಾವೇರಿ ವಿವಾದ ಉಲ್ಪಣಿಸಲು ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ನೇರ ಕಾರಣ.  ಸಿನೇಮಾ ನಟರು ಸ್ವಯಂ ಪ್ರೇರಿತರಾಗಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.  ಸಂಘಟನೆಗಳ ಹೋರಾಟಗಾರರು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಂದಾಗಿ ಹೋರಾಟ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.  ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ರಾಜ್ಯದ ಸರಕಾರ ಸರಿಯಾಗಿ ವಾದ ಮಂಡಿಸದ ಪರಿಣಾಮ ಇಂದು ಕಾವೇರಿ ವಿಷಯದಲ್ಲಿ ಕರ್ನಾಟಕದಲ್ಲಿ ಭಯಾನಕ ಸ್ಥಿತಿ ಉಂಟಾಗಿದೆ.  ರಾಜ್ಯದ ಜಲಸಂಪನ್ಮೂಲ […]

ಸೆ. 27 ರಂದು ಈದ್ ಮಿಲಾದ್- ಗುಮ್ಮಟ ನಗರಿಯ ಆಸಾರ ಮಹಲದಲ್ಲಿ ಮುಯ್ಯೆ ಮುಬಾರಕ ಸಂದಲ ಉರುಸು

ವಿಜಯಪುರ: ಪವಿತ್ರ ಈದ್- ಮೀಲಾದ್ ಅಂಗವಾಗಿ ನಗರದ ಆಸಾರ ಮಹಲದಲ್ಲಿರುವ ಶಿರಸ ಸಂದಲ ಹಾಗೂ ಮಯ್ಯ ಮುಕ್ತಾರಕದ ಪೈಗಂಬರ ರವರ ಮಹಮ್ಮದ ಕಾರ್ಯಕ್ರಮಗಳು ಸೆ. 27 ರಂದು ಬುಧವಾರ ಸಂ. 6 ರಿಂದ ಗುರುವಾರ ಬೆ. 5 ವರೆಗೆ  ಮುಯ್ಯೆ ಮುಬಾರಕ ಸಂದಲ ಉರುಸು ನಡೆಯಲಿವೆ. ಸೌದಿ ಅರಬ ಎಂಬುವವರು ಆಸಾರ ಮಹಲದಲ್ಲಿ ಸದ್ಯಯಿರುವ ಮುಯೆ ಮುಬಾರಕದ ಹಿಂದೆ ಒಂದು ಇತಿಹಾಸವೇ ಇದೆ.  ಆಸಾರ ಮಹಲದಲ್ಲಿರಿಸಿರುವ ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕವನ್ನು ರಾಷ್ಟ್ರದಿಂದ 1005 ನೇ […]

ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘಕ್ಕೆ ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ- ರಾಜಶೇಖರ ಮಗಿಮಠ

ವಿಜಯಪುರ: ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘ ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸಂಘದ 22ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕು ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. 1928 ಸಂಘದ ಸದಸ್ಯರು ಸಹ ಸದಸ್ಯರಿದ್ದು, ಸಂಘ ರೂ. 32.06 ಲಕ್ಷ ಷೇರು ಬಂಡವಾಳ ಹೊಂದಿದೆ.  […]

2ಎ ಮೀಸಲಾತಿ ಸಿಗುವವರೆಗೂ ವಿರಮಿಸುವುದಿಲ್ಲ- ಕೂಡಲ ಸಂಗಮ ಸ್ವಾಮೀಜಿ- ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ನಡೆಸಿ ಒತ್ತಾಯ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮುಂಬರುವ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕು.  ಇಲ್ಲದಿದ್ದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಅವರು, ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. […]