ಕಾವೇರಿ ವಿವಾದ ಉಲ್ಬಣಿಸಲು ಡಿಸಿಎಂ ಕಾರಣ- ಚಿತ್ರ ನಟರು ಹೋರಾಟಕ್ಕೆ ಧುಮುಕಲಿ- ಜೆಡಿಎಸ್ ಜೊತೆ ಮೈತ್ರಿ ಸ್ವಾಗತಾರ್ಹ- ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಕಾವೇರಿ ವಿವಾದ ಉಲ್ಪಣಿಸಲು ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ನೇರ ಕಾರಣ.  ಸಿನೇಮಾ ನಟರು ಸ್ವಯಂ ಪ್ರೇರಿತರಾಗಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.  ಸಂಘಟನೆಗಳ ಹೋರಾಟಗಾರರು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಂದಾಗಿ ಹೋರಾಟ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ರಾಜ್ಯದ ಸರಕಾರ ಸರಿಯಾಗಿ ವಾದ ಮಂಡಿಸದ ಪರಿಣಾಮ ಇಂದು ಕಾವೇರಿ ವಿಷಯದಲ್ಲಿ ಕರ್ನಾಟಕದಲ್ಲಿ ಭಯಾನಕ ಸ್ಥಿತಿ ಉಂಟಾಗಿದೆ.  ರಾಜ್ಯದ ಜಲಸಂಪನ್ಮೂಲ ಸಚಿವರೇ ಇದಕ್ಕೆ ನೇರ ಕಾರಣ ಎಂದು ಅವರು ನೇರವಾಗಿ ಆರೋಪಿಸಿದರು.

ಸಿನೇಮಾ ನಟರು ಹೋರಾಟದಿಂದ ದೂರವಿರುವ ವಿಚಾರ

ಪ್ರಕಾಶ ರೈ ಹಂದಿ ಇದ್ದಂತೆ.  ಅವರ ಬಗ್ಗೆ ಮಾತನಾಡಬೇಡಿ.  ಕನ್ನಡ ಸಿನೇಮಾ ನಟರು ಈಗಲಾದರೂ ಹೊರಗೆ ಬರಲಿ.  ಜನರು ಸಿನೇಮಾ ನೋಡುವುದರಿಂದ ನಮ್ಮ ನಟರು ರೊಕ್ಕ ಮಾಡಿಕೊಂಡಿದ್ದಾರೆ.  ಈಗ ಆ ನಟರು ಸ್ವಲ್ಪ ಹೊರಗೆ ಬಂದು ಜನರ ಸಲುವಾಗಿ ಹೋರಾಟ ಮಾಡಲಿ.  ಇಲ್ಲದಿದ್ದರೆ, ಇವರ ಸಿನೇಮಾಗಳನ್ನು ಬಹಿಷ್ಕಾರ ಹಾರಕಬೇಕು ಎಂದು ಅವರು ಕರೆ ನೀಡಿದರು.

ಸಿನೇಮಾ ನಟರು ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೋಳ್ಳಬೇಕು.  ಅವರ ಮನೆಗೆ ಹೋಗಿ ಆರತಿ ಬೆಳಗಿ ಬನ್ನಿ ಸರ್ ಎಂದು ಹೇಳಬೇಕಾ? ಕನ್ನಡ ಜನರೇ ಇವರ ಸಿನೇಮಾ ನೋಡುತ್ತಾರೆ.  ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು.  ದರ್ಶನ, ಯಶ್ ಸೇರಿದಂತೆ ಎಲ್ಲ ನಟರೂ ಕಾವೇರಿ ಭಾಗದವರೇ ಆಗಿದ್ದಾರೆ.  ಉತ್ತರ ಕರ್ನಾಟಕದ ಯಾವ ನಟರಲ್ಲಿ ಯಾರೂ ಹೀರೋ ಆಗಿಲ್ಲ.  ಸಿನೇಮಾಗಳಲ್ಲಿ ನಮ್ಮ ಭಾಗದವರಿಗೆ ಕೇವಲ ಹಾಸ್ಯ ಪಾತ್ರಗಳನ್ನು ಮಾತ್ರ ನೀಡುತ್ತಾರೆ.  ನಮ್ಮ ಕಡೆಯೂ ಬಹಳ ಚೆಂದವಾಗಿರುವ ಹುಡುಗರಿದ್ದಾರೆ.  ಅವರೂ ಹೀರೋಗಳಾಗಬೇಕು.  ಈ ಹಿಂದೊಮ್ಮೆ ನಾನು ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ ಎಂದು ಯತ್ನಾಳ ಹೇಳಿದರು.

ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ

ಕಾವೇರಿ ಹೋರಾಟಕ್ಕೆ ನಮ್ಮ ಪಕ್ಷ ಈಗಾಗಲೇ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ.  ನಾವೂ ಸಹ ಇವತ್ತು ಕಾವೇರಿ ಅನ್ಯಾಯದ ಧ್ವನಿ ಎತ್ತುತ್ತೇವೆ.  ಕರ್ನಾಟಕ ಸರಕಾರ ಇಡೀ ರಾಜ್ಯದ ಹಿತವನ್ನು ಬಲಿಕೊಟ್ಟು ತನ್ನ ಐ.ಎನ್.ಡಿ.ಐಎ ಸಹಯೋಗಿಗಾಗಿ ನಮ್ಮಲ್ಲಿ ಕುಡಿಯಲೂ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.  ಇದು ಅತ್ಯಂತ ಖಂಡನೀಯ. ಈಗಲೂ ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.  ಸರಕಾರದಲ್ಲಿರುವವರ ತಮ್ಮ ಜವಾಬ್ದಾರಿಯನ್ನು ಮರೆತಿದ್ದರಿಂದಲೇ ಇಂದು ಕನ್ನಡ ಪರ ಹೋರಾಟಗಾರರು, ಕರ್ನಾಟಕದ ಜನತೆ ಮತ್ತು ಬಿಜೆಪಿ ಹೋರಾಟಕ್ಕೆ ಇಳಿದಿದೆ.  ಇದೇ ರೀತಿ ಸರಕಾರ ತನ್ನ ಉದ್ಧಟತನ ಮುಂದುವರೆಸಿದರೆ ಕರ್ನಾಟಕದಲ್ಲಿ ಜನ ದಂಗೆ ಏಳಲಿದ್ದಾರೆ.  ಆಗ ಸರಕಾರವೇ ಉಳಿಯುವುದಿಲ್ಲ.  ಇದು ನನ್ನ ಗಂಭೀರ ಎಚ್ಚರಿಕೆಯಾಗಿದೆ.  ಮಂಡ್ಯ ಭಾಗದ ಜನರಿಗೆ ಕುಡಿಯಲು ನೀರಿಲ್ಲ.  ನೀವು ಬೇಕಾಬಿಟ್ಟಿ ನೀರು ಬಿಡುವುದನ್ನು ನಾವು ಯಾವುದೇ ಕಾಲದಲ್ಲಿಯೂ ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಎರಡು ದಿನ ಹೋರಾಟ ವಿಚಾರ

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ನಾಯಕರು ಮತ್ತು ಸಂಘಟನೆಗಳು ಎರಡು ಪ್ರತ್ಯೇಕ ದಿನ ಬಂದ್ ಕರೆ ನೀಡಿರುವುದು ತಪ್ಪು.  ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಂದೇ ದಿನ ಹೋರಾಟ ಮಾಡಬೇಕು.  ಇದರಿಂದ ಜನರಿಗೂ ತೊಂದರೆಯಾಗುವುದಿಲ್ಲ.  ಅಲ್ಲದೇ, ಇವರು ಒಗ್ಗಟ್ಟಾದರೆ ಜನರೂ ಕೂಡ ಸ್ವಯಂ ಪ್ರೇರಣೆಯಿಂದ ಪಾಲ್ಗೋಂಡರೆ ನಮ್ಮ ಕರ್ನಾಟಕದ ಜನರ ಶಕ್ತಿ ಪ್ರದರ್ಶನ ಮಾಡಲು ಅನುಕೂಲವಾಗಲಿದೆ.  ಎಲ್ಲ ಹೋರಾಟಗಾರರು ಈ ವಿಷಯದಲ್ಲಿ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಂದಾಗಿ ಎಂದು ವಿನಂತಿ ಮಾಡುತ್ತೇನೆ.  ಇದಕ್ಕೆ ಜನರೂ ಕೂಡ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಾರೆ ಎಂದು ಅವರು ಹೇಳಿದರು.

ಕೇಂದ್ರ ಮಧ್ಯಸ್ಥಿಕೆ ವಿಚಾರ

ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿರುವ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ, ರಾಜ್ಯ ಸರಕಾರ ಕೇಂದ್ರವನ್ನು ಕೇಳಿ ನೀರು ಬಿಟ್ಟಿದ್ದಾರಾ? ತಮಿಳುನಾಡು ಮುಖ್ಯಮಂತ್ರಿಯನ್ನು ಖುಷಿ ಪಡಿಸಲು ರಾತ್ರೋ ರಾತ್ರಿ ನೀರು ಬಿಟ್ಟಿದ್ದಾರೆ.  ಇದರಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಲು ಹೇಗೆ ಸಾಧ್ಯ? ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಂಸದರ ಒಂದೂ ಸಭೆಯನ್ನು ಕರೆದಿಲ್ಲ.  ಮೊನ್ನೆ ಮೊನ್ನೆ ಕಾವೇರಿಯ ಬೆಂಕಿ ಹತ್ತಿದ ಮೇಲೆ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಯಾವುದೇ ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತು ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಮೇಲೆ ದೆಹಲಿಗೆ ಹೋಗಿ ಪ್ರಥಾನಿ ಮತ್ತು ಸಂಬಂಧಿತ ಇಲಾಖೆಗಳ ಸಚಿವರನ್ನು ಭೇಟಿ ಮಾಡುತ್ತಾರೆ.  ಅಲ್ಲದೇ, ಕರ್ನಾಟಕದ ಎಲ್ಲ ಸಂಸದರ ಸಭೆ ಕರೆದು ಚರ್ಚಿಸುತ್ತಾರೆ.  ಯಾವೆಲ್ಲ ಯೋಜನೆಗಳು ಪೆಂಡಿಂಗ್ ಇವೆ ಎಂಬುದನ್ನು ವಿವರಿಸಿ ನೀವು ನಮಗೆ ಸರಕಾರ ಕೊಡಿ ಎಂದು ಸಂಸದರನ್ನು ಕೇಳಿಕೊಳ್ಳುತ್ತಾರೆ.  ಆದರೆ, ಈ ಭಾವನೆಯೇ ರಾಜ್ಯ ಸರಕಾರಕ್ಕಿಲ್ಲ.  ಮೊನ್ನೆ ಮಧ್ಯರಾತ್ರಿ 1 ಗಂಟೆ ದೆಹಲಿಗೆ ತೆರಳಿ ಕಾಟಾಚಾರಕ್ಕೆ ಸಂಸದರ ಸಭೆ ನಡೆಸಿದ್ದಾರೆ ನಂತರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದಾರೆ.  ಸುಪ್ರೀಂ ಕೋರ್ಟಿನಲ್ಲಿ ರಾಜ್ಯದ ಸರಕಾರ ಸರಿಯಾಗಿ ವಾದ ಮಂಡಿಸದ ಪರಿಣಾಮ ಇಂದು ಕಾವೇರಿಯಲ್ಲಿ ಕರ್ನಾಟಕದಲ್ಲಿ ಭಯಾನಕ ಸ್ಥಿತಿ ಉಂಟಾಗಲು ರಾಜ್ಯದ ಜಲಸಂಪನ್ಮೂಲ ಸಚಿವರೇ ನೇರ ಕಾರಣ ಎಂದು ಅವರು ಆರೋಪಿಸಿದರು.

ಪ್ರಧಾನಿ ಮೋದಿ ಒಂಬತ್ತು ವರ್ಷ ದೇಶ ಹಾಳು ಮಾಡಿದ್ದರೆ ಎಂದು ಸಚಿವ ಸಂತೋಷ ಲಾಡ್ ಆರೋಪ ವಿಚಾರ

ಪ್ರಧಾನಿ ನರೇಂದ್ರ ಮೋದಿ ಒಂಬ್ತತು ವರ್ಷ ದೇಶವನ್ನು ಹಾಳು ಮಾಡಿದ್ದಾರೆ ಎಂದು ಸಚಿವ ಸಂತೋಷ ಲಾಡ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಬಳ್ಳಾರಿ ದಿವಾಳಿ ಮಾಡಿದವರೇ ಸಂತೋಷ ಲಾಡ್.  ಎಲ್ಲ ಗಣಿಗಾರಿಕೆ ಮಾಡಿ ಬಳ್ಳಾರಿ ಸತ್ಯಾನಾಶ ಮಾಡಿದವರೇ ಅವರು.  ನಮ್ಮ ಪ್ರಧಾನ ಮಂತ್ರಿಗಳು ಒಂಬತ್ತು ವರ್ಷ ಇಡೀ ಜಗತ್ತು ಮೆಚ್ಚುವ ಕೆಲಸ ಮಾಡಿದ್ದಾರೆ.  ಮೋದಿ ಮಾಡೆಲ್ ವಿಶ್ವದಲ್ಲಿ ಚರ್ಚೆಯಾಗುತ್ತಿದೆ.  ಅನೇಕ ರಾಷ್ಟ್ರಗಳ ಪ್ರಧಾನ ಮಂತ್ರಿಗಳು, ಅಧ್ಯಕ್ಷರು ಮೋದಯವರನ್ನು ಆದರ್ಶ ನಾಯಕ ಎಂದು ಒಪ್ಪಿಕೊಂಡಿದ್ದಾರೆ.

ಸಂತೋಷ ಲಾಡ್ ಅವರಿಗೆ ಏನು ಗೊತ್ತಿದೆ? ಜಿ-10ಯಲ್ಲಿ ಭಾರತದ ನೇತೃತ್ವದಲ್ಲಿ ವಸುದೇವ ಕುಟುಂಬಕಂ ಭಾರತದ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದಾರೆ.  ಸಂತೋಷ ಲಾಡ್ ಬಳ್ಳಾರಿಗೆ ಸೀಮಿತವಾಗಿದ್ದಾರೆ.  ಮೋದಿಯವರು ಬಗ್ಗೆ ಮಾತನಾಡಲು ಅವರಿಗೆ ಹಕ್ಕಿಲ್ಲ ಎಂದು ಅವರು ಹೇಳಿದರು.

ಬಿಜೆಪಿ- ಜೆಡಿಎಸ್ ಮೈತ್ರಿಕೆ ಮುಸ್ಲಿಮ ಮುಖಂಡರ ವಿರೋಧ ವಿಚಾರ

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಮುಸ್ಲಿಂ ಮುಖಂಡರು ವಿರೋಧಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರು ಜೆಡಿಎಸ್ ಗೆ ಎಲ್ಲಿ ಮತ ಹಾಕಿದ್ದಾರೆ? ನಿಖೀಲ ಕುಮಾರಸ್ವಾ,ಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಮತ ಹಾಕಿಲ್ಲ.  ಅವರು ಹೋದರೆ ಸ್ವಚ್ಛ;ಾಗಿ ಯಾರು ಇರಬೇಕು ಅವರು ಉಳಿತಾರೆ.  ಬಿಜೆಪಿ ಜೊತೆ ಜೆಡಿಎಸ್ ಕರ್ನಾಟಕದಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದನ್ನು ನಾನು ಸ್ವಾಗತ ಬಯಸುತ್ತೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಎಚ್. ಡಿ. ಕುಮಾರಸ್ವಾಮಿ ನಾಯಕತ್ವ ವಹಿಸುತ್ತಾರೆ.  ಈ ಭಾಗದಲ್ಲಿ ನಮ್ಮ ಪಕ್ಷ ಸದೃಢವಾಗಿದೆ.  ನಾವಿಬ್ಬರೂ ಹೊಂದಾಣಿಕೆಯಾದರೆ ಇಂಥ ಮುಸ್ಲಿಂ ಲೀಡರ್ ಓಟುಗಳು ನಮಗೆ ಬೇಕಿಲ್ಲ.  ಇವರಿಂದ ಏನೂ ಆಗುವುದಿಲ್ಲ.  ಇವರು ಕಾಂಗ್ರೆಸ್ಸಿಗೆ ಮತ ಹಾಕುತ್ತ ಕುಳಿತುಕೊಳ್ಳಲಿ.  ವಿಜಯ ದಶಮಿಯ ನಂತರ ಒಂದು ಒಳ್ಳೆಯ ಶುಭ ಮುಹೂರ್ತದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಹೊಂದಾಣಿಕೆ ಎಂಬುದು ನಿರ್ಧಾರವಾಗಲಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌