ವಿಜಯಪುರ: ಪವಿತ್ರ ಈದ್- ಮೀಲಾದ್ ಅಂಗವಾಗಿ ನಗರದ ಆಸಾರ ಮಹಲದಲ್ಲಿರುವ ಶಿರಸ ಸಂದಲ ಹಾಗೂ ಮಯ್ಯ ಮುಕ್ತಾರಕದ ಪೈಗಂಬರ ರವರ ಮಹಮ್ಮದ ಕಾರ್ಯಕ್ರಮಗಳು ಸೆ. 27 ರಂದು ಬುಧವಾರ ಸಂ. 6 ರಿಂದ ಗುರುವಾರ ಬೆ. 5 ವರೆಗೆ ಮುಯ್ಯೆ ಮುಬಾರಕ ಸಂದಲ ಉರುಸು ನಡೆಯಲಿವೆ.
ಸೌದಿ ಅರಬ ಎಂಬುವವರು ಆಸಾರ ಮಹಲದಲ್ಲಿ ಸದ್ಯಯಿರುವ ಮುಯೆ ಮುಬಾರಕದ ಹಿಂದೆ ಒಂದು ಇತಿಹಾಸವೇ ಇದೆ. ಆಸಾರ ಮಹಲದಲ್ಲಿರಿಸಿರುವ ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕವನ್ನು ರಾಷ್ಟ್ರದಿಂದ 1005 ನೇ ಹಿಜರಿಯಲ್ಲಿ ಹಜರತ ಮೀರಸ್ವಾಲೆ ಹಮ್‌ದಾನಿ ವಿಜಯಪುರ ನಗರಕ್ಕೆ ತಂದಿದ್ದರು. ಆಗ ವಿಜಯಪುರದಲ್ಲಿ ಇಬ್ರಾಹಿಂ. 2 ನೇ ಆದಿಲಶಾಹರವರ ಆಳ್ವಕೆ ಜಾರಿಯಲ್ಲಿತ್ತು. ಸೌದಿ ಅರೇಬಿಯಾ ದೇಶದಿಂದ ಪ್ರವಾದಿಯವರ ಮುಯೇ ಮುಬಾರಕ ತಂದ ಸುದ್ದಿಯನ್ನು ಅರಿತ ಅಂದಿನ ಬಾದಷಹ 2ನೇ ಆದಿಲ್ ಷಾಹಿಯವರು, ಹಜರತ ಮೀರಸ್ವಾಲೆ ಹಮದಾನಿ ಎಂಬುವವರನ್ನು ತಮ್ಮ ಆಸ್ಥಾನಕ್ಕೆ ಕರೆಯಿಸಿ ಸಕಲ ರಾಜಗೌರವಗಳನ್ನು ನೀಡಿ ಆದರಾತಿಥ್ಯ ನೀಡಿದ್ದ.
ಅಷ್ಟೇ ಅಲ್ಲ, ಅವರಿಂದ ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕವನ್ನು ಆದಿಲಶಾಹಿ ಸಾಮ್ರಾಜ್ಯದ ವಿಜಯಪುರದ ಶಾಂತಿ ಸಲುವಾಗಿ ಪಡೆದುಕೊಂಡರು. 2ನೇ ಆದಿಲ್ ಷಾಹಿಯವರ ಆಳ್ವಿಕೆಯ ನಂತರ 1130 ನೇ ಹಿಜರಿಯಲ್ಲಿ ಪತ ಜಂಗ್ ಸಿಪಾಯಿ ಸಾಲಾರ ಆಸೀಪ ಜಂಹಾ ನಿಜಾಮುಲ್ಕ ಬಹಾದ್ದೂರ ಫಿದವಿಯಾ ಸುಲೇಮಾನ ಇಲಾತಿದಾರ ಇವರು ಮತ್ತು ಮಹಮ್ಮದ ಷಾಹ ಬಾದಶಾಹ ರವರ ಮತ್ತು ವೀರ ಮಹಮ್ಮದ ಹುಸೇನಖಾನ ಫಿದಮಿಯಾ ಅಹಮ್ಮದ ಶಹಾ ಬಾದಶಹಾ ಗಾಜಿ ಇವರ ಅಳ್ವಿಕೆಯಲ್ಲಿ ಮುಶರಫ್ ವಂಶಜ ನೂರ ಮಹ್ಮದರವರಿಗೆ ಪ್ರವಾದಿ ಮಮ್ಮದ ಪೈಗಂಬರವರ ರವರ ಮುಖ ಮುಬಾರಕದ ದೇಖರೇಖಿ ಮತ್ತು ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು.
1130 ನೇ ಹಿಜರಿಯಿಂದ ಇಲ್ಲಿಯವರೆಗೆ ಸುಮಾರು 315 ವರ್ಷಗಳ ವರೆಗೆ ಮುಷರಫ್ ವಂಶಸ್ಥರು ಪ್ರತಿ ವರ್ಷವು ಪ್ರವಾದಿ ಮಹಮ್ಮದ ಪೈಗಂಬರವರ ಜಯಂತಿ ಹಾಗೂ ಮುಯ ಮುಬಾರಕದ ಸಂದಲ ಹಾಗೂ ಊರುಸು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವರಿಸಿಕೊಂಡು ಬಂದಿರುತ್ತಾರೆ.
ಪ್ರವಾದಿಯವರ ಮುಯೆಲುಬಾರಕದ ಸಂದಲ ಹಾಗೂ ಉರುಸು ಕಾರ್ಯಕ್ರಮ ಅಂಗವಾಗಿ ಸೆ. 27ರ ಸಂಜೆಯಿಂದ ಸೆ. 28ರ ಬೆಳಿಗ್ಗೆ ವರೆಗೆ ಮುಯೆ ಮುಬಾರಕ ಇರಿಸಿರುವ ಜಗತ್ಪಸಿದ್ದ ಐತಿಹಾಸಿಕ ಸ್ಮಾರಕ ಆಸಾರ ಮಹಲದಲ್ಲಿರುವ ಎರಡು ಕೋಣೆಗಳ ಬೀಗಗಳನ್ನು ಮುಶ್ರೀಫ ಕುಟುಂಬದವರು ತೆರೆಯುತ್ತಾರೆ. ಅಲ್ಲದೇ, ಆ ಕೋಣೆಯಲ್ಲಿ ಇರಿಸಿರುವ ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕ ಇಟ್ಟಿರುವ ಪೆಟ್ಟಿಗೆಯನ್ನು ಸಾರ್ವಜನಿಕರಿಗೆ ದರ್ಶನ ಮಾಡಿಸುತ್ತಾರೆ. ಇವರ ಜೊತೆಯಲ್ಲಿ ಮುಶರಿಫ್ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸುತ್ತಾರೆ.
ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕ ಭಾರತದ ಇತಿಹಾಸದಲ್ಲಿ ವಿಜಯಪುರದ ಜಗತ್ಪಸಿದ್ದ ಆಸಾರ ಮಹಲ ಸೇರಿದಂತೆ ಎರಡು ಕಡೆ ಮಾತ್ರ ಇದೆ. ಇಸಾಖಾದ್ರಿ ಮುಶ್ರಿಫ್ ಮುತುವಲ್ಲಿ ಮತ್ತು ಕೋ- ಮುತುವಲ್ಲಿ ಆಸಾರ ಶರೀಫ್, ವಿಜಯಪುರ, ಮುಸಾ ಖಾದ್ರಿ ಮುಶ್ರೀಫ್, ಸಜ್ಜಾದೆಪೀರಾ, ಮೊದೀನ್‌ಪಾಶಾ, ಅಯಾಜ್ ಮುಶ್ರಿಫ್, ಅಬ್ದುಲ್ ಹಮೀದ್ ಮುಶ್ರೀಫ, ಅಬ್ದುಲ ರಹೀಮ, ಇಮ್ತಿಯಾಜ ಮುಶ್ರೀಫ್, ಮುತುವಲ್ಲಿ ಮತ್ತು ತಾವಿಲ್ದಾರ ಕುಟುಂಬದವರ ಸಮ್ಮುಖದಲ್ಲಿ ಮತ್ತು ಸಹಯೋಗದಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಸ್ವಲ್ಲಲಾಹುಅಲೆವ ಸಲ್ಲಂ ರವರ ಜಯಂತಿ ಹಾಗೂ ಮುಯೆ ಮುಬಾರಕ ಸಂದಲ ಹಾಗೂ ಉರಿಸು ನಡೆಯಿಲಿವೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಕ್ರಿಯವಾಗಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕು ಎಂದು ಇಸಾಖಾದ್ರಿ ಮುಶ್ರಿಫ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.