ವಿಜಯಪುರ: ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘ ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸಂಘದ 22ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕು ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
1928 ಸಂಘದ ಸದಸ್ಯರು ಸಹ ಸದಸ್ಯರಿದ್ದು, ಸಂಘ ರೂ. 32.06 ಲಕ್ಷ ಷೇರು ಬಂಡವಾಳ ಹೊಂದಿದೆ. ಸಂಘದಲ್ಲಿ ರೂ. 6.73 ಕೋ. ಠೇವಣಿ ಹೊಂದಿದ್ದು, ರೂ. 7.83 ಕೋ. ದುಡಿಯುವ ಬಂಡವಾಳ ಹೊಂದಿದೆ. ಸಂಘದ ಮುಂದಿನ ಕಾರ್ಯ ಯೋಜನೆಯಂತೆ ನಗರಾಭಿವೃದ್ದಿ ಇಲಾಖೆಯಿಂದ 5000 ಚದು ಅಡಿ ನಿವೇಶನ ಖರೀದಿಸಲಾಗಿದ್ದು, ಈ ನಿವೇಶನದಲ್ಲಿ ಸಂಘದ 25ನೇ ವರ್ಷಾಚರಣೆ ಅಂಗವಾಗಿ ಕಟ್ಟಡ ನಿರ್ಮಿಸಲಾಗುವದು ಎಂದು ರಾಜಶೇಖರ ಮಗಿಮಠ ತಿಳಿಸಿದರು.
ಈ ಸಭೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಜೆ. ಎಸ್. ಹಿರೇಮಠ, ಉಪಾಧ್ಯಕ್ಷ ಪಿ. ಜಿ. ಮೋತಿಮಠ, ನಿರ್ದೇಶಕರಾದ ಸಿದ್ದಯ್ಯ ಹಿರೇಮಠ, ಎಸ್. ಬಿ. ಹಿರೇಮಠ, ಎಸ್. ಎಸ್. ಉಕುಮನಾಳ, ಮಲ್ಲಿಕಾರ್ಜುನ ಪೂಜಾರಿ, ಶಿವಾನಂದ ಮುಗಡ್ಲಿಮಠ, ಅಜಯ ಹಿರೇಮಠ, ರೂಪಾ ಎಸ್. ಹಿರೇಮಠ, ಪುಷ್ಪಾ ಹಿರೇಮಠ, ವಿನೋದಾ ಗಚ್ಚಿನಮಠ, ಸಲಹಾ ಸಮಿತಿ ಸದಸ್ಯರಾದ ಮಲ್ಲಯ್ಯ ಹಿರೇಮಠ, ರಾಚಯ್ಯ ಚೌಕಿಮಠ, ಎನ್. ಜಿ. ಮಠಪತಿ, ವ್ಯವಸ್ಥಾಪಕ ಈರಯ್ಯ ಚಿನಕಾಳಿಮಠ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ನಿರ್ದೇಶಕ ಬಸಯ್ಯ ಸಂ. ಹಿರೇಮಠ ವಂದಿಸಿದರು.