ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಜಿಲ್ಲೆಯ ಪ್ರತಿ ತಾಲೂಕಿಗೊಂದು ಪಬ್ಲಿಕ್ ಶಾಲೆ- ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಶತಮಾನದ ಇತಿಹಾಸವಿರುವ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆ ವತಿಯಿಂದ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಪಬ್ಲಿಕ್ ಶಾಲೆ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಡಾ. ಫ. ಗು. ಹಳಕಟ್ಟಿ ಸಭಾ ಭವನದಲ್ಲಿ ನಡೆದ ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಸಿದ್ಧೇಶ್ವರ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದು, ಧಾರ್ಮಿಕ, ಸಾಮಾಜಿಕ […]
ಸನಾತನ ಹಿಂದೂ ಧರ್ಮಕ್ಕೆ ಯಾರೂ ಏನೂ ಮಾಡಲಾಗದು- ಶಾಸಕ ಯತ್ನಾಳ
ವಿಜಯಪುರ: ನಾವೆಲ್ಲ ಮೂಲ ಭಾರತೀಯ ಸನಾತನ ಸಂಸ್ಕೃತಿಯತ್ತ ಮತ್ತೆ ಬರುತ್ತಿದ್ದೇವೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಜೋರಾಪುರ ಪೇಟೆಯ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಸಂಕಲ್ಪ ಸಿದ್ದಿ ಗಣಪತಿ ವಿಸರ್ಜನೆ ಮೆರವಣಿಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಇಡೀ ಜಗತ್ತಿಗೆ ಮಾದರಿ ಆಗಿದೆ. ಇಂಥ ಮಹತ್ವವಾದ ಸಂಸ್ಕೃತಿ ಬಿಟ್ಟು ಎಲ್ಲೆಲ್ಲೋ ಹೋಗಿ ಮತ್ತೆ ಇಲ್ಲಿಯೇ ಬರುತ್ತಿದ್ದೇವೆ. ಯಾರು ಏನೇ ಮಾಡಿದರೂ ನಮ್ಮ ಸನಾತನ ಹಿಂದು ಧರ್ಮಕ್ಕೆ […]
ಗ್ರಾಮೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕೆ ಸಹಕಾರಿ ಸಂಘಕ್ಕೆ ಈ ವರ್ಷ ರೂ. 18.83 ರೂ. ನಿವ್ವಳ ಲಾಭ- ಸುರೇಶ ಜಿ. ಗಚ್ಚಿನಕಟ್ಟಿ ಲಾಭ
ವಿಜಯಪುರ: ನಗರದ ಗ್ರಾಮೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕೆ ಸಹಕಾರಿ ಸಂಘ ಈ ವರ್ಷ ರೂ. 18 ಲಕ್ಷ 83 ಸಾವಿರದ 336 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಗುರಲಿಂಗಪ್ಪ ಗಚ್ಚಿನಕಟ್ಟಿ ತಿಳಿಸಿದ್ದಾರೆ. ಸಂಘ 74ನೇ ವಾರ್ಷಿಕ ವರದಿ ಮತ್ತು ಅಡಾವ ಪತ್ರಿಕೆಯ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಸಂಘದ ವತಿಯಿಂದ ರೂ.56789538 ವ್ಯವಹಾರ ನಡೆಸಲಾಗಿದ್ದು, ಇದರಲ್ಲಿ ಒಟ್ಟು ರೂ. 3279527 ಲಾಭವಾಗಿದೆ. ಅದರಲ್ಲಿ ಖರ್ಚು ವೆಚ್ಚಗಳನ್ನು ತೆಗೆಯಲಾಗಿ ರೂ. 1883336 ನಿವ್ವಳ ಲಾಭವಾಗಿದೆ. […]
ರೈತರು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಶ್ರೇಯೋಭಿವೃದ್ಧಿಗೆ ಸಹಕರಿಸಿ- ಕುಮಾರ ದೇಸಾಯಿ
ವಿಜಯಪುರ: ಪ್ರಸಕ್ತ ಕಬ್ಬು ನುರಿಸುವ ಸಮಯದಲ್ಲಿ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಸಹಕರಿಸುವಂತೆ ಜಿಲ್ಲೆಯ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಮನವಿ ಮಾಡಿದ್ದಾರೆ. ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ಕಾರ್ಖಾನೆಯ ಆವರಣದಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. 2022-23 ನೇ ಆರ್ಥಿಕ ವರ್ಷದ ಸಾಧನೆಯನ್ನು ವಿವರಿಸಿದ ಕಾರ್ಖಾನೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಶಶಿಕಾಂತಗೌಡ ಭೀ. ಪಾಟೀಲ(ಶಿರಬೂರ), […]
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ
ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿಗಳು ಜಿ. ಪಂ. ಮತ್ತು ಶಾಲಾ ಶಿಕ್ಷಣ ಇಲಾಖೆ ನಗರ ಬಿಇಓ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ದೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿ ಕಂಠದಾನ ಸ್ಪರ್ಧೆಯಲ್ಲಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಶ್ರೇಯಸ ಮೋಟಗಿ ಪ್ರಥಮ ಸ್ಥಾನ ಪಡೆದಿದ್ದಾನೆ. ಇಂಗ್ಲೀಷ ಕಂಠಪಾಠ ಮತ್ತು ಪದ್ಮವೇಷ ಸ್ಪರ್ಧೇಯಲ್ಲಿ ಮಹೇಶ ಹಾದಿಮನಿ, ಸಂಸ್ಕೃತ ಧಾರ್ಮಿಕ ಪಟಣ ಸ್ಪರ್ಧೇ […]
ಪಂ. ದೀನ ದಯಾಳ ಉಪಾಧ್ಯಾಯ ಅಂತ್ಯೋದಯ ಪರಿಕಲ್ಪನೆಯ ಹರಿಕಾರ: ಪ್ರಕಾಶ ಅಕ್ಕಲಕೋಟ
ವಿಜಯಪುರ: ಪಂ. ದೀನ ದಯಾಳ ಉಪಾಧ್ಯಾಯ ಅಂತ್ಯೋದಯ ಪರಿಕಲ್ಪನೆಯ ಹರಿಕಾರರಾಗಿದ್ದಾರೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ವಾರ್ಡ್ ನಂ. 35 ರಲ್ಲಿ ಪಂ. ದೀನದಯಾಳ ಉಪಾಧ್ಯಾಯ ಅವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಅವರು ಮಾತನಾಡಿದರು. ಅಂತ್ಯೋತದಯ ಪರಿಕಲ್ಪನೆ ಹರಿಕಾರರಾದ ಪಂ. ದೀನ ದಯಾಳರು ಒಬ್ಬ ಉದಾತ್ತ ಮತ್ತು ಆದರ್ಶವ್ಯಕ್ತಿಯಾಗಿದ್ದಾರೆ. ಪ್ರಚಂಡ ಸಂಘಟನಾ ಸಾಮರ್ಥ್ಯ ಹೊಂದಿದವರಾಗಿದ್ದ ಅವರು […]