ವಿಜಯಪುರ: ನಗರದ ಗ್ರಾಮೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕೆ ಸಹಕಾರಿ ಸಂಘ ಈ ವರ್ಷ ರೂ. 18 ಲಕ್ಷ 83 ಸಾವಿರದ 336 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಗುರಲಿಂಗಪ್ಪ ಗಚ್ಚಿನಕಟ್ಟಿ ತಿಳಿಸಿದ್ದಾರೆ.
ಸಂಘ 74ನೇ ವಾರ್ಷಿಕ ವರದಿ ಮತ್ತು ಅಡಾವ ಪತ್ರಿಕೆಯ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಸಂಘದ ವತಿಯಿಂದ ರೂ.56789538 ವ್ಯವಹಾರ ನಡೆಸಲಾಗಿದ್ದು, ಇದರಲ್ಲಿ ಒಟ್ಟು ರೂ. 3279527 ಲಾಭವಾಗಿದೆ. ಅದರಲ್ಲಿ ಖರ್ಚು ವೆಚ್ಚಗಳನ್ನು ತೆಗೆಯಲಾಗಿ ರೂ. 1883336 ನಿವ್ವಳ ಲಾಭವಾಗಿದೆ. ಸಂಘದ ಈ ಬೆಳವಣಿಗೆಯಲ್ಲಿ ಎಲ್ಲ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರವೇ ಕಾರಣ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಸದಾಶಿವ ಇಜೇರಿ, ನಿರ್ದೇಶಕರಾದ ಸಿದ್ದಪ್ಪ ಸಜ್ಜನ್, ಈರಪ್ಪ ಹಿಪ್ಪರಗಿ, ನಜೀರಅಹ್ಮದ ನಾಡೇವಾಲೆ, ಮಲ್ಲಿಕಾರ್ಜುನ ನುಚ್ಚಿ, ರಾಜಶೇಖರ ಸಜ್ಜನ, ದಶರಥ ಬಿರಾದಾರ ಉಪಸ್ಥಿತರಿದ್ದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚನ್ನಗೌಡ ಎಸ್. ಪಾಟೀಲ ವರದಿ ವಾಚಿಸಿದರು.