ರೈತರು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಶ್ರೇಯೋಭಿವೃದ್ಧಿಗೆ ಸಹಕರಿಸಿ- ಕುಮಾರ ದೇಸಾಯಿ

ವಿಜಯಪುರ: ಪ್ರಸಕ್ತ ಕಬ್ಬು ನುರಿಸುವ ಸಮಯದಲ್ಲಿ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಸಹಕರಿಸುವಂತೆ ಜಿಲ್ಲೆಯ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಮನವಿ ಮಾಡಿದ್ದಾರೆ.

ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ಕಾರ್ಖಾನೆಯ ಆವರಣದಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

2022-23 ನೇ ಆರ್ಥಿಕ ವರ್ಷದ ಸಾಧನೆಯನ್ನು ವಿವರಿಸಿದ ಕಾರ್ಖಾನೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಶಶಿಕಾಂತಗೌಡ ಭೀ. ಪಾಟೀಲ(ಶಿರಬೂರ), ಕಾರ್ಖಾನೆಯು ತನ್ನ 31ನೇ ವರ್ಷದ ಕಬ್ಬು ನುರಿಸುವ ಹಂಗಾಮಿನಲ್ಲಿ 22,10.2022 ರಿಂದ 14.03.2023ರ ವರೆಗೆ ಒಟ್ಟು 7 ಲಕ್ಷ 94 ಸಾವಿರ

158 ಮೆಟ್ರಿಕ್ ಟನ್ ಕಬ್ಬು ನುರಿಸಿ, 7 ಲಕ್ಷ 94 ಸಾವಿರದ 150 ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ ಎಂದು ಮಾಹಿತಿ ನೀಡಿದರು.

ಈ ಸಭೆಯಲ್ಲಿ ಮಾತನಾಡಿದ ಷೇರುದಾರ ಸದಸ್ಯರು, ಕಾರ್ಖಾನೆಯ ನಿಯೋಜಿತ ವಿಸ್ತರಣೆ ಯೋಜನೆ ಬಹಳ ವಿಳಂಭವಾಗಿದೆ.  ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕಾರ್ಖಾನೆಯನ್ನು ಪ್ರಾರಂಭಿಸಬೇಕು.  ನಾನಾ ಕಾರ್ಯಗಳಿಗೆ ಚಾಲನೆ ನೀಡಬೇಕು ಎಂದು ಅಧ್ಯಕ್ಷರ ಗಮನಕ್ಕೆ ತಂದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪಾಲ್ಗೋಂಡ ಷೇರು ಸದಸ್ಯರು

ಸದಸ್ಯರ ಈ ಪ್ರಶ್ನೆಗಳಿಗೆ ಮತ್ತು ಸಲಹೆಗಳಿಗೆ ವ್ಯವಸ್ಥಾಪಕ ನಿರ್ದೇಶಕ ಜಿ. ಎಂ. ಪಾಟೀಲ ಮತ್ತು ಅಧ್ಯಕ್ಷರು ಸೂಕ್ತ ಮಾಹಿತಿ ನೀಡಿದರು.

ಕಾರ್ಖಾನೆಯ ಪ್ರಭಾರ ಕಾರ್ಯದರ್ಶಿ ಎಂ. ಬಿ. ಶೆಟ್ಟಿ ವರದಿ ವಾಚನ ಮಾಡಿದರು.

ಈ ಸಭೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಾಂಡಪ್ಪ ಲೆಂಕೆಣ್ಣವರ, ನಿರ್ದೇಶಕರಾದ ಅದೃಷಪ್ಪ ವಾಸಣ್ಣ ದೇಸಾಯಿ, ಈರನಗೌಡ ಬಸನಗೌಡ ನ್ಯಾಮಗೌಡರ, ಗೌಡಪ್ಪ ಕೃಷ್ಣಪ್ಪ ಕೋಣಪ್ಪನವರ, ರಮೇಶ ಪಾಂಡಪ್ಪ ಜಕರಡ್ಡಿ, ಬಸನಗೌಡ ದುಂಡಪ್ಪಗೌಡ ಪಾಟೀಲ, ಮಲ್ಲಪ್ಪ ಭೀಮಪ್ಪ ಮಾದರ, ಸೋಮನಗೌಡ ರಾಮನಗೌಡ ಪಾಟೀಲ, ಹಣಮಂತ ಭೀಮಪ್ಪ ಕೊಣ್ಣೂರ, ಸಂಜಯಗೌಡ ಗೌಡಪ್ಪಗೌಡ ಪಾಟೀಲ, ಗುರಲಿಂಗಪ್ಪ ದುಂಡಪ್ಪ ಅಂಗಡಿ, ಶ್ರೀನಿವಾಸ ಕೋಣಪ್ಪ ಉರ್ಫ ಹನುಮಪ್ಪ ನಿಡೋಣಿ, ಹಾಗೂ ಮಾಜಿ ಉಪಾಧ್ಯಕ್ಷರಾದ ಎಚ್. ಆರ್. ಬಿರಾದಾರ, ಮಾಜಿ ನಿರ್ದೇಶಕರಾದ ಸಿದ್ದಣ್ಣ ಮಲ್ಲಪ್ಪ ದೇಸಾಯಿ, ತಿಮ್ಮಣ್ಣ ವಿ. ಅಮಲಝರಿ, ಹಣಮಂತ ಕೆಂಚಪ್ಪ ಕಡಪಟ್ಟಿ, ಆನಂದ ಗುರುಲಿಂಗಪ್ಪ ಮಂಗಳವೇಡೆ, ರಾಮಚಂದ್ರ ಪಾಂಡಪ್ಪ ಕೊಡಬಾಗಿ, ಜಗದೀಶ ಶಿವಪ್ಪ ಶಿರಾಳಶೆಟ್ಟಿ, ಚನ್ನಪ್ಪ ಹಣಮಂತ ಜಮಖಂಡಿ, ಸುತ್ತಮುತ್ತಲಿನ ಗಾಮಗಳ ರೈತರು ಷೇರು ಸದಸ್ಯರು, ಕಾರ್ಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾರ್ಮಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌