ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿಗಳು ಜಿ. ಪಂ. ಮತ್ತು ಶಾಲಾ ಶಿಕ್ಷಣ ಇಲಾಖೆ ನಗರ ಬಿಇಓ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ದೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. 

ಹಿಂದಿ ಕಂಠದಾನ ಸ್ಪರ್ಧೆಯಲ್ಲಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಶ್ರೇಯಸ ಮೋಟಗಿ ಪ್ರಥಮ ಸ್ಥಾನ ಪಡೆದಿದ್ದಾನೆ.  ಇಂಗ್ಲೀಷ ಕಂಠಪಾಠ ಮತ್ತು ಪದ್ಮವೇಷ ಸ್ಪರ್ಧೇಯಲ್ಲಿ ಮಹೇಶ ಹಾದಿಮನಿ, ಸಂಸ್ಕೃತ ಧಾರ್ಮಿಕ ಪಟಣ ಸ್ಪರ್ಧೇ ಅನಿತಾ ಬಾಗೇವಾಡಿ, ಆಶುಭಾಷಣ ಸ್ಪರ್ಧೇಯಲ್ಲಿ ಅಭಿ ವಡವಡ, ಪದ್ಮವೇಷ ಸ್ಪರ್ಧೇ ಸೃಷ್ಠಿ ಬಡಿಗೇರ ಪ್ರಥಮ ಸ್ಥಾನ ಗಳಿಸಿದ್ದಾರೆ.

ಅದೇ ರೀತಿ ಅಭಿನಯ ಗೀತೆ ಸ್ಪರ್ಧೆಯಲ್ಲಿ ಆರಾಧ್ಯ ಕನ್ನೂರ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಅರೇಬಿಕ್ ಆಶಿಯಾ ಮದಭಾವಿ, ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ರಾಹುಲ ಹಿರೇಮಠ, ಕ್ಲೇಮಾಲಿಂಗ ಮಧುಮತಿ ಚಿನ್ನಗುಂಡಿ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಅರಮಾನ್ ನದಾಫ್, ಪದ್ಮವೇಶ ಸ್ಪರ್ಧೇಯಲ್ಲಿ ವಿತ್ರಿ ಹಣಮಂತನೂರ, ಹಿಂದಿ ಕಂಠಪಾಠದಲ್ಲಿ ಸಾದಿಯಾ ಮದಭಾವಿ, ಇಂಗ್ಲೀಷ ಕಂಠಪಾಠದಲ್ಲಿ ಪೂಜಾ ಹೊಸಮನಿ, ಭಾವಗೀತೆಯಲ್ಲಿ ಕೀರ್ತಿ ಓನಮಶೆಟ್ಟಿ ಮತ್ತು ಅಭಿನಯ ಗೀತೆಯಲ್ಲಿ ನಿಕಿತಾ ಸಾಳುಂಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಉದ್ದ ಜಿಗಿತದಲ್ಲಿಓಂ ಪ್ರಕಾಶ ಬಿರಾದಾರ ಪ್ರಥಮ ಸ್ಥಾನ ಪಡೆದಿದ್ದರೆ, ಡಿಸ್ಕಸ್ ಥ್ರೋನಲ್ಲಿ ಮಲ್ಲಿಕಾರ್ಜುನ ಕರಂಡೆ, ಶಾಟಪುಟ್ ನಲ್ಲಿ ಪ್ರವೀಣ ರಜಪೂತ, 600 ಮೀ. ಓಟದಲ್ಲಿ ಸೃಷ್ಠಿ ಬಡಿಗೇರ, ಡಿಸ್ಕಸ್ ಥ್ರೋನಲ್ಲಿ ಕಾವೇರಿ ಆಲಕುಂಟೆ, 100 ಮೀ. ಓಟದ ಸ್ಪರ್ಧೆಯಲ್ಲಿ ನಾಗಲಕ್ಷ್ಮಿ ಗುನ್ನಾಪೂರ, 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರತಿಕ್ಷಾ ಬಿರಾದಾರ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಡಿಸ್ಕಸ್ ಥ್ರೋ ನಲ್ಲಿ ಖುಷಿ ಶಿವಣಗಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.  ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಉಪಾಧ್ಯಕ್ಷ ಎಸ್. ಜಿ. ಸಜ್ಜನ, ಚೇರಮನ್‌ ಬಸಯ್ಯ ಎಸ್. ಹಿರೇಮಠ, ಕಾರ್ಯದರ್ಶಿ ಸದಾನಂದ ಎಚ್. ದೇಸಾಯಿ, ಜಂಟಿ ಕಾರ್ಯದರ್ಶಿ ಎಂ. ಎಂ. ಸಜ್ಜನ, ಕೋಶಾಧ್ಯಕ್ಷ ಬಿ. ಎಸ್. ಸುಗೂರ, ನೀಲಕಂಠೇಶ್ವರ ವಿದ್ಯಾಮಂದಿರದ ಚೇರಮನ್‌ ಎನ್. ಎಂ. ಗೋಲಾಯಿ, ಶಾಲೆಯ ಮುಖ್ಯ ಶಿಕ್ಷಕಿ ಎ. ಬಿ. ತೆನಿಹಳ್ಳಿ, ದೈಹಿಕ ಶಿಕ್ಷಕ ಚನ್ನು ಯಳಮೇಲಿ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌