ವಿಜಯಪುರ: ನಾವೆಲ್ಲ ಮೂಲ ಭಾರತೀಯ ಸನಾತನ ಸಂಸ್ಕೃತಿಯತ್ತ ಮತ್ತೆ ಬರುತ್ತಿದ್ದೇವೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ಜೋರಾಪುರ ಪೇಟೆಯ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಸಂಕಲ್ಪ ಸಿದ್ದಿ ಗಣಪತಿ ವಿಸರ್ಜನೆ ಮೆರವಣಿಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಇಡೀ ಜಗತ್ತಿಗೆ ಮಾದರಿ ಆಗಿದೆ. ಇಂಥ ಮಹತ್ವವಾದ ಸಂಸ್ಕೃತಿ ಬಿಟ್ಟು ಎಲ್ಲೆಲ್ಲೋ ಹೋಗಿ ಮತ್ತೆ ಇಲ್ಲಿಯೇ ಬರುತ್ತಿದ್ದೇವೆ. ಯಾರು ಏನೇ ಮಾಡಿದರೂ ನಮ್ಮ ಸನಾತನ ಹಿಂದು ಧರ್ಮಕ್ಕೆ ಏನು ಮಾಡಲಾಗದು. ನಮ್ಮ ಧರ್ಮ ಅಷ್ಟೊಂದು ಮಹತ್ವ ಪಡೆದಿದೆ. ಇದು ದೇವರಿಂದ ಬಂದಿದ್ದು ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಬಾಲಗಾಂವ ಆಶ್ರಮದ ಅಮೃತಾನಂದ ಸ್ವಾಮೀಜಿ ಮಾತನಾಡಿ, ಡಿಜೆ ಬಂದ ಆಗಬೇಕು. ವಾಕರ್, ಲೇಜಿಮ್ ಬರಬೇಕು. ಇದು ವಿಜಯಪುರದಿಂದ ಆರಂಭಗೊಂಡಿದ್ದು, ಮುಂದೆ ಇದು ಟ್ರೆಂಡ್ ಆಗುವುದು ನಿಶ್ಚಿತ ಎಂದು ಹೇಳಿದರು.
ಈ ಮೆರವಣಿಗೆಯಲ್ಲಿ ಮಂಡಳಿ ಸದಸ್ಯರಿಂದ ಲೆಜಿಮ್, ಮಹಿಳಾ ಸದಸ್ಯೆಯರಿಂದ ವಾರ್ಕರಿ ತಾಳದೊಂದಿಗೆ ಹೆಜ್ಜೆ ಕುಣಿತ ಪ್ರದರ್ಶನ ಗಮನ ಸೆಳೆಯಿತು. ನೆರೆದ ಸಾವಿರಾರು ಜನರ ಜಯಘೋಷಣೆಗಳು ಮೆರವಣಿಗೆಗೆ ಮೆರಗು ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಐತಿಹಾಸಿಕ ತಾಜಬಾವಡಿವರಗೆ ನಡೆಯಿತು. ಅಲ್ಲಿ ನಿರ್ಮಿಸಲಾಗಿದ್ದ ಕೃತಕ ಹೊಂಡದಲ್ಲಿ ಗಣೇಶನ ಮೂರ್ತಿಯನ್ನು ಗೌರವಪೂರ್ವಕವಾಗಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಕಿರಣ ಭಟ ಜೋಶಿ, ಎಲ್‌ಎಂವಿ ಚಂದ್ರಯಾನ 3ರ ಸಿನಿಯರ್ ಮ್ಯಾನೇಜರ್ ಅರವಿಂದ ಅಳಗುಂಡಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ರಾಜಕುಮಾರ ಪಾಟೀಲ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ಸಿದ್ದೇಶ, ಶಂಕರಲಿಂಗ ದೇವಸ್ಥಾನದ ಅಧ್ಯಕ್ಷ ವಿರುಪಾಕ್ಷಿ ಶಾಬಾದಿ, ಆಶೀಶ ಹುಣಶ್ಯಾಳ, ಮುಖಂಡರಾದ ಪ್ರಕಾಶ ಅಕ್ಕಲಕೋಟ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ರಾಹುಲ ಜಾದವ, ಕಿರಣ ಪಾಟೀಲ, ಪಾಂಡು ಸಾಹುಕಾರ ದೊಡ್ಡಮನಿ, ವಿಜಯ ಜೋಷಿ, ಮಹಾನಗರಪಾಲಿಕೆ ಸದಸ್ಯ ವಿಠ್ಠಲ ಹೊಸಪೇಟೆ, ಸಂಜು ಕೋಳಿ ಮುಂತಾದವರು ಉಪಸ್ಥಿತರಿದ್ದರು.