ವಿಜಯಪುರ: ಪಂ. ದೀನ ದಯಾಳ ಉಪಾಧ್ಯಾಯ ಅಂತ್ಯೋದಯ ಪರಿಕಲ್ಪನೆಯ ಹರಿಕಾರರಾಗಿದ್ದಾರೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ವಾರ್ಡ್ ನಂ. 35 ರಲ್ಲಿ ಪಂ. ದೀನದಯಾಳ ಉಪಾಧ್ಯಾಯ ಅವರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಅವರು ಮಾತನಾಡಿದರು.
ಅಂತ್ಯೋತದಯ ಪರಿಕಲ್ಪನೆ ಹರಿಕಾರರಾದ ಪಂ. ದೀನ ದಯಾಳರು ಒಬ್ಬ ಉದಾತ್ತ ಮತ್ತು ಆದರ್ಶವ್ಯಕ್ತಿಯಾಗಿದ್ದಾರೆ. ಪ್ರಚಂಡ ಸಂಘಟನಾ ಸಾಮರ್ಥ್ಯ ಹೊಂದಿದವರಾಗಿದ್ದ ಅವರು ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು. ಅವರು ಸಾಮಾಜಿಕ ಚಿಂತಕ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ, ರಾಜಕಾರಣಿ ಬರಹಗಾರ ಮುಂತಾದ ಗುಣಗಳು ಆಕಾರವಾಗಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿರುವ ಪಂ. ದೀನ ದಯಾಳ ಉಪಾಧ್ಯಾಯ ಅವರ ಅನೇಕ ವಿಚಾರ ಧಾರೆಗಳು ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಪ್ರಕಾಶ ಅಕ್ಕಲಕೋಟ ಹೇಳಿದರು.
ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ ಡಬ್ಬಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಕಶೇಖರ ಕುರಿಯವರ, ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ರಾಜೇಶ ತಾವಸೆ, ಸಂತೋಷ ಪಾಟೀಲ, ವಿಠ್ಠಲ ನಡುವಿನರಿ, ಶಂಕರ ಹೂಗಾರ, ವಿಜಯ ಹಿರೇಮಠ, ಸುಶ್ಮಿತ ವಾಂಡಕರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.