ವಿಜಯಪುರ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ವಿಜಯಪುರದಲ್ಲಿ ಪ್ರತಿಭಟನೆ ನಡೆಸಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿನಿತ್ಯ ತಮಿಳುನಾಡಿಗೆ 5000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, ಕೂಡಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು. ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದವರು ಕಾವೇರಿ ಜಲಾಶಯದ ಈ ಸದ್ಯ ಇರುವ ನೀರಿನ ಮಟ್ಟವನ್ನು ಪಲಶೀಲನೆ ಮಾಡದೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಹೊನಕೇರಪ್ಪ ತೆಲಗಿ, ಬಸವನ ಬಾಗೇವಾಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಲ್ಹಾದ ನಾಗರಾಳ, ಸೋಮನಾಥ ಪಾಟೀಲ, ಸುಭಾಸಗೌಡ ಬಿಸಿರೊಟ್ಟಿ, ಬಾಲಚಂದ್ರ ಲಿಂಗದಳ್ಳಿ, ಚನಬಸಪ್ಪ ಸಿಂಧೂರ, ಸಂಗನಗೌಡ ಬಿರಾದಾರ, ಬಸವರಾಜ ಜಂಗಮಶೆಟ್ಟಿ, ಜಯಶ್ರೀ ಜಂಗಮಶೆಟ್ಟಿ, ಬಾಳಪ್ಪ ಬೂದಿಹಾಳ ಮುಂತಾದವರು ಉಪಸ್ಥಿತರಿದ್ದರು.