ನ. 24, 25 ರಂದು ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನ ಉದ್ಘಾಟನೆ- ರಾಜೇಶ ದೇವಗಿರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

ವಿಜಯಪುರ: ನವೆಂಬರ್ 24 ಮತ್ತು 25 ರಂದು ನಗರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ನೂತನ ಸಾಂಸ್ಕೃತಿಕ ಭವನದ ಉದ್ಗಾಟನೆ ಸಮಾರಂಭ ನಡೆಯಲಿದೆ.

ನಗರದಲ್ಲಿ ನಡೆದ ಸಮಾಜದ ವಿಶೇಷ ಮಹಾಸಭೆ ಅಧ್ಯಕ್ಷ ರಾಜೇಶ ದೇವಗಿರಿ ಅವರ ನೇತೃತ್ವದಲ್ಲಿ ನಡೆಯಿತು.  ಈ ವಿಶೇಷ ಸಾಮಾನ್ಯ ಸಭೆಯಲ್ಲಿ ನೂತನ ಸಾಂಸ್ಕೃತಿಕ ಭವನದ ಉದ್ಘಾಟನೆ ಸಮಾರಂಭದ ಉದ್ಘಾಟನೆ ಕುರಿತು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು.

ನ. 24 ಮತ್ತು 25 ರಂದು ವಿಜಯಪುರ ನಗರದ ಎಲ್ಲಾ ಭಾವಸಾರ ಕ್ಷತ್ರೀಯ ಸಮುದಾಯದವರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬೇಕು.  ಸಮಾಜದ ನೌಕರ ವರ್ಗದವರು ಎರಡು ದಿನ ರಜೆ ತೆಗೆದುಕೊಂಡು ಈ ಭವ್ಯವಾದ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ವಿಜಯಪುರದಲ್ಲಿ ನಡೆದ ಭಾವಸಾರ ಕ್ಷತ್ರೀಯ ಸಮಾಜದ ಸಭೆಯಲ್ಲಿ ರಾಜೇಶ ದೇವಗಿರಿ ಮಾತನಾಡಿದರು

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ನಾನಾ ಸಮಿತಿ ರಚಿಸಿ ಆ ಸಮಿತಿಗಳಿಗೆ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.

ಸ್ವಾಗತ ಸಮಿತಿ ಮುಖ್ಯಸ್ಥ – ವಿಷ್ಣುಪಂತ್ ದೇವಗಿರಿ

ಸ್ಮರಣಾರ್ಥ ಕಡತ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ- ದೀಪಕ ಶಿಂತ್ರೆ

ಹಣಕಾಸು ಸಮಿತಿ ಮುಖ್ಯಸ್ಥ- ಸುರೇಶ ಮಹೀಂದ್ರಕರ

ಆಹಾರ ವ್ಯವಸ್ಥೆ ಸಮಿತಿಯ ಮುಖ್ಯಸ್ಥ- ಅತುಲ ಪುಕಾಳೆ ಮತ್ತು ವಿಜಯ್ ನವಲೆ

ಕುಂಭಮೇಳ ಸಮಿತಿ ಮುಖ್ಯಸ್ಥ- ಪದ್ಮಾ ಇಜಂತ್ಕರ ಮತ್ತು ಲತಾತಾಯಿ ಜಿಂಗಾಡೆ

ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಮುಖ್ಯಸ್ಥೆ- ರಾಜಶ್ರೀ ಹಿರಾಸ್ಕರ

ಗೌರವ ಸಮಿತಿಯ ಮುಖ್ಯಸ್ಥ- ಶ್ರೀನಿವಾಸ ಖಾಬಿಕರ್, ರಮೇಶ ಹಂಚಾಟೆ, ರಾಜು ಬಾಂಡ್ಗೆ

ಗೃಹ ಹವನ ಮತ್ತು ಪೂಜಾ ವಿಧಿ ಸಮಿತಿ ಮುಖ್ಯಸ್ಥ- ಉಮೇಶ ದೇವಗಿರಿ

ಮೆರವಣಿಗೆ ಸಮಿತಿ ಅಧ್ಯಕ್ಷ- ರಾಜೇಶ ದೇವಗಿರಿ, ವಿಶಾಲ ಪುಕಾಳೆ, ವಿನಾಯಕ ಕುಂಟೆ

ಬ್ಯಾನರ್ ಸಮಿತಿಯ ಮುಖ್ಯಸ್ಥ- ವಿಶಾಲ ಪುಕಾಳೆ

ವೈದ್ಯಕೀಯ ಸಮಿತಿ ಮುಖ್ಯಸ್ಥ- ಡಾ. ಪ್ರದೀಪ ಹಿಬಾರೆ

 

ಈ ಸಭೆಯಲ್ಲಿ . ವಕೀಲರು ಅಶೋಕ ಮಿರಜಕರ, ಮೋಹನ ಮಿರಜಕರ, ಅಶೋಕ ಜಿಂಗಾಡೆ, ರಮೇಶ ಮಿರಜಕರ, ಜರ್ನಾದನ ಪತಂಗೆ ಸೇರಿದಂತೆ ಪಂಚಮಂಡಲ, ಮಹಿಳಾ ಮಂಡಲ ಯುವ ಸಮಿತಿ ಹಾಗೂ ತರುಣ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌