ಪ್ರಾಣಿಗಳು ಕಚ್ಚಿದ ತಕ್ಷಣ ರೇಬೀಸ್ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು- ಡಾ. ಮಂಜುನಾಥ ಕೋಟೆಣ್ಣವರ

ವಿಜಯಪುರ: ಪ್ರಾಣಿಗಳು ಕಚ್ಚಿದ ತಕ್ಷಣ ರೇಬೀಸ್ ಚುಚ್ಚುಮದ್ದು ಹಾಕಿಸಿಕೊಳ್ಳುವುದರಿಂದ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದ್ದಾರೆ.

ತಿಕೊಟಾ ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ರೇಬೀಸ್ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಣಿಗಳು ಕಚ್ಚಿದಾಗ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳು, ಪಡೆಯಬೇಕಾದ ಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದ ಅವರು, ನಾವು ಸಾಕುವ ಪ್ರಾಣಿಗಳಿಗೆ ರೇಬೀಸ್ ನಿರೋಧಕ ಚುಚ್ಚುಮದ್ದು ಹಾಕಿಸಬೇಕು ಅಲ್ಲದೇ, ಈ ಪ್ರಾಣಿಗಳ ಕಚ್ಚುವಿಕೆಗೆ ಒಳಗಾಗುವ ಜನರು ಕೂಡಲೇ ಚುಚ್ಚುಮದ್ದನ್ನು ಪಡೆಯಬೇಕು. ಈ ಹಿಂದೆ ಇದ್ದ ಚಿಕಿತ್ಸಾ ವಿಧಾನಕ್ಕೂ ಮತ್ತು ಈಗಿನ ಆಧುನಿಕ ಚಿಕಿತ್ಸಾ ಪದ್ದತಿಗಳಿಗೆ ವ್ಯತ್ಯಾಸವಿದೆ.  ಹೀಗಾಗಿ ಆತಂಕಗೊಳ್ಳುವ ಅವಶ್ಯಕ ಇಲ್ಲ ಎಂದು ಮಂಜುನಾಥ ಕೋಟೆಣ್ಣವರ ಹೇಳಿದರು.

ತಿಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿದರು

ಸಹಾಯಕ ಪ್ರಾಧ್ಯಪಾಕ ಮಂಜುನಾಥ ಸಾವಂತ ಮಾತನಾಡಿ, ರೋಗ ಪರೀಕ್ಷೆ ವಿಧಾನ, ನಿರ್ವಹಣೆ, ಲಸಿಕೆ ಹಾಗೂ ಮುಂಜಾಗೃತ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಈರಣ್ಣ ನಿಪ್ಪಾಣಿ, ಎಂ. ಬಿ. ತಡಲಗಿ, ಸಿದ್ದಮ್ಮ ನಾವದಗಿ, ಪ್ರಶಾಂತ ಈಶ್ವರ, ಗೀತಾಂಜಲಿ ಕೊಣ್ಣೂರ, ಕಾಲೇಜಿನ ಬೋದಕ ಮತ್ತು ಬೋದಕೇತರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

ಸಾಕ್ಷಿ ಕುಲಕರ್ಣಿ ಪ್ರಾರ್ಥಿಸಿದರು. ತಿಕೋಟಾ ಬಿ.ಎಲ್.ಡಿ.ಇ ನರ್ಸಿಂಗ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪೂರ ಸ್ವಾಗತಿಸಿದರು. ಬಸಲಿಂಗಮ್ಮ ಹಯ್ಯಾಳ ವಂದಿಸಿದರು.

Leave a Reply

ಹೊಸ ಪೋಸ್ಟ್‌