ಬಸವನಾಡಿನಲ್ಲಿ ಪ್ರಕೃತಿ ವಿಸ್ಮಯ- ರಾತ್ರಿ ವೇಳೆ ಆಗಸದಲ್ಲಿ ಮುಸ್ಸಂಜೆ, ನಸುಕಿನ ಜಾವದ ಬೆಳಕಿನ ವಾತಾವರಣ

ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ರಾತ್ರಿ ವೇಳೆ ಆಗಸದಲ್ಲಿ ಭೂಮಿಯಿಂದ ಮುಗಿಲಿಗೆ ಟಾರ್ಚ್ ಲೈಟ್ ಹಿಡಿದಂತೆ ಬೆಳಕು ಕಂಡು ಬಂದಿದೆ. ರಾತ್ರಿ 9.50 ಸುಮಾರಿನಿಂದ ಆಗಸದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯೂ ಬರುತ್ತಿದೆ.  ಇದೆಲ್ಲದರ ಮಧ್ಯೆ, ಮುಗಿಲು ನೋಡಿದವರಿಗೆ ಅಚ್ಚರಿ ಕಾದಿತ್ತು.  ಆಗಸದ ತುಂಬೆಲ್ಲ ಮುಸ್ಸಂಜೆ ಮತ್ತು ನಸುಕಿನ ಜಾವ ಸೂರ್ಯೋದಯದ ಸಮಯದಲ್ಲಿ ಕಾಣಿಸುವಂತೆ ಆಗಸದಲ್ಲಿ ಬೆಳಕು ಕಂಡಿತು.  ಇದನ್ನು ಇದನ್ನು ನೋಡಿದ ಕೆಲವರು ಅಚ್ಚರಿ ಪಟ್ಟರೆ ಮತ್ತೆ ಕೆಲವರು ಆತಂಕ ಕೂಡ ವ್ಯಕ್ತಪಡಿಸಿದರು. ಗುರುರಾಜ […]

ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜಯಪುರ ಕೆಕೆಆರ್ಟಿಸಿಗೆ ತೃತೀಯ ಸ್ಥಾನ

ವಿಜಯಪುರ: ಗುಜರಾತಿನ ಅಹಮದಾಬಾದಿನಲ್ಲಿ ಮೂರು ದಿನಗಳ ಕಾಲ ನಡೆದ ಅಂತರ ನಿಗಮದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತೃತೀಯ ಸ್ಥಾನ ಪಡೆದುಕೊಂಡಿದೆ.  ಅಸೋಸಿಯೇಶನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ ಟೆಕ್ಕಿಂಗ್ ಈ ಪಂದ್ಯಾವಳಿ ಆಯೋಜಿಸಿತ್ತು.  ಈ ಪಂದ್ಯಾವಳಿಯಲ್ಲಿ ಪಾಲ್ಗೋಂಡಿದ್ದ ತಾಳಿಕೋಟೆ ಘಟಕದ ಅಮರೇಶ ಎಸ್. ಮೇಟಿ, ಬಸವನ ಬಾಗೇವಾಡಿ ಘಟಕದ ಎಸ್. ಆರ್. ಶೇಖ, ಐ. ಐ. ಐರೊಡಗಿ ಅವರ ಸಾಧನೆಯನ್ನು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಮೊಹ್ಮದ ಫೈಜ್, ಅಧಿಕಾರಿಗಳು ಮತ್ತು […]

ಬಾಗಲಕೋಟೆ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಕಾಲೇಜು ವತಿಯಿಂದ ಸ್ವಚ್ಛತಾ ಅಭಿಯಾನ

ಬಾಗಲಕೋಟೆ: ನಗರದ ಬಸವೇಶ್ವರ ವೀರಶೈವ ವಿದ್ಯಾವಧ೯ಕ ಸಂಘದ ಬಿ.ವಿ.ವಿ.ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರ ಪಿತ ಮಹಾತ್ಮಾ ಗಾಂಧಿಜೀಯವರ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ ನಡೆಯಿತು. ಈ ಕಾರ್ಯಕ್ರಮಕ್ಕೆ ಎನ್.ಎಸ್.ಎಸ್ ಅಧಿಕಾರಿ ಡಾ. ಸುನೀಲ ಭೋಸಲೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛತೆಗೊಳಿಸುವುದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿಯಲ್ಲ.  ಎಲ್ಲ ನಾಗರಿಕರ ಮತ್ತು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.  ಅಷ್ಟೇ ಅಲ್ಲ, ಸ್ವಚ್ಛತೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.  ಇದು ವ್ಯಕ್ತಿಯಲ್ಲಿ ಸಕಾರಾತ್ಮಕ ಮಾನಸಿಕ ಮನೋಭಾವವನ್ನು […]