ಬಾಗಲಕೋಟೆ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಕಾಲೇಜು ವತಿಯಿಂದ ಸ್ವಚ್ಛತಾ ಅಭಿಯಾನ

ಬಾಗಲಕೋಟೆ: ನಗರದ ಬಸವೇಶ್ವರ ವೀರಶೈವ ವಿದ್ಯಾವಧ೯ಕ ಸಂಘದ ಬಿ.ವಿ.ವಿ.ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರ ಪಿತ ಮಹಾತ್ಮಾ ಗಾಂಧಿಜೀಯವರ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ ನಡೆಯಿತು.

ಈ ಕಾರ್ಯಕ್ರಮಕ್ಕೆ ಎನ್.ಎಸ್.ಎಸ್ ಅಧಿಕಾರಿ ಡಾ. ಸುನೀಲ ಭೋಸಲೆ ಚಾಲನೆ ನೀಡಿದರು.

ಬಾಗಲಕೋಟೆಯಲ್ಲಿ ಬಿವಿವಿಎಸ್ ಹೋಮಿಯೋಪಥಿಕ್ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು

ಬಳಿಕ ಮಾತನಾಡಿದ ಅವರು, ಸ್ವಚ್ಛತೆಗೊಳಿಸುವುದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿಯಲ್ಲ.  ಎಲ್ಲ ನಾಗರಿಕರ ಮತ್ತು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.  ಅಷ್ಟೇ ಅಲ್ಲ, ಸ್ವಚ್ಛತೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.  ಇದು ವ್ಯಕ್ತಿಯಲ್ಲಿ ಸಕಾರಾತ್ಮಕ ಮಾನಸಿಕ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಡಾ. ಪ್ರದೀಪ ರೆಡ್ಡಿ ಕೆ. ಎಸ್. ಮಾತನಾಡಿ ಶುಚಿತ್ವ ಮತ್ತು ನೈರ್ಮಲ್ಯದ ಕೊರತೆಯು ಅನೇಕ ರೀತಿಯ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಮತ್ತು ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ.  ಆದ್ದರಿಂದ ಪರಿಸರ ಸ್ವಚ್ಚತೆಯ ಹೊಣೆ ನಮ್ಮೆಲ್ಲರದಾಗಿದೆ ಎಂದು ಹೇಳಿದರು.

ವಿದ್ಯಾಥಿ೯ ಪ್ರತಿನಿಧಿಗಳಾದ ಆನಂದ ಒಡೆಯರ, ಪೈಜಾನ್, ಚೇತನ, ಶೃತಿ ಹಳ್ಳಿ, ಪ್ರೀತಿ ಒಡ್ಡೆ. ಸಾಹಿಲಿ, ಪಾವನಿ, ಹುಮೇರಾನಸ್ರೀನ, ಶಾಂತಾ ಪಾಟೀಲ. ಭಾಗ್ಯಾ ಮುಂತಾದವರು ಕಾಲೇಜಿನ ಆವರಣವನ್ನು ಸ್ವಚ್ಚಗೊಳಿಸಿದರು.

Leave a Reply

ಹೊಸ ಪೋಸ್ಟ್‌