ಬಸವನಾಡಿನಲ್ಲಿ ಪ್ರಕೃತಿ ವಿಸ್ಮಯ- ರಾತ್ರಿ ವೇಳೆ ಆಗಸದಲ್ಲಿ ಮುಸ್ಸಂಜೆ, ನಸುಕಿನ ಜಾವದ ಬೆಳಕಿನ ವಾತಾವರಣ

ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ರಾತ್ರಿ ವೇಳೆ ಆಗಸದಲ್ಲಿ ಭೂಮಿಯಿಂದ ಮುಗಿಲಿಗೆ ಟಾರ್ಚ್ ಲೈಟ್ ಹಿಡಿದಂತೆ ಬೆಳಕು ಕಂಡು ಬಂದಿದೆ.

ರಾತ್ರಿ 9.50 ಸುಮಾರಿನಿಂದ ಆಗಸದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯೂ ಬರುತ್ತಿದೆ.  ಇದೆಲ್ಲದರ ಮಧ್ಯೆ, ಮುಗಿಲು ನೋಡಿದವರಿಗೆ ಅಚ್ಚರಿ ಕಾದಿತ್ತು.  ಆಗಸದ ತುಂಬೆಲ್ಲ ಮುಸ್ಸಂಜೆ ಮತ್ತು ನಸುಕಿನ ಜಾವ ಸೂರ್ಯೋದಯದ ಸಮಯದಲ್ಲಿ ಕಾಣಿಸುವಂತೆ ಆಗಸದಲ್ಲಿ ಬೆಳಕು ಕಂಡಿತು.  ಇದನ್ನು ಇದನ್ನು ನೋಡಿದ ಕೆಲವರು ಅಚ್ಚರಿ ಪಟ್ಟರೆ ಮತ್ತೆ ಕೆಲವರು ಆತಂಕ ಕೂಡ ವ್ಯಕ್ತಪಡಿಸಿದರು.

ಗುರುರಾಜ ಕೌಲಗಿ ಎಂಬವರು ಬಸವನಾಡು ವೆಬ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಆಗಸದಲ್ಲಿ ಈ ರೀತಿ ಬೆಳಕು ನೋಡುತ್ತಿದ್ದೇನೆ.  ಇದಕ್ಕೆ ಏನು ಕಾರಣ ಗೊತ್ತಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿ, ಪ್ರಕೃತಿಯ ಈ ವಿಸ್ಮಯಕ್ಕೆ ಏನು ಕಾರಣ ಎಂಬುದನ್ನು ಖಭೌತ ಶಾಸ್ತ್ರಜ್ಞರು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ವಿಜಯಪುರ ನಗರದಲ್ಲಿ ರಾತ್ರಿವೇಳೆ ಆಗಸದಲ್ಲಿ ಕಂಡು ಬಂದ ವಾತಾವರಣ

ಅರವಿಂದ ಬಣಗಾರ ಎಂಬವರೂ ಕೂಡ ಮುಗಿಲಿನಲ್ಲಿ ಈ ರೀತಿ ವಾತಾವರಣವನ್ನು ಈ ಹಿಂದೆ ಎಂದೂ ನಾನು ನೋಡಿಲ್ಲ.  ಇದು ಯಾಕೆ ಹೀಗಾಗುತ್ತಿದೆ ಗೊತ್ತಿಲ್ಲ.  ವಿಜ್ಞಾನಿಗಳು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಮುರುಗೇಶ ಪಟ್ಟಣಶೆಟ್ಟಿ ಎಂಬುವರೂ ಕೂಡ ನಾನು ಇದೇ ಮೊದಲ ಬಾರಿಗೆ ಆಗಸದಲ್ಲಿ ರಾತ್ರಿ ವೇಳೆ ಆಗಸದಲ್ಲಿ ಈ ರೀತಿ ವಾತಾವರಣ ನೋಡುತ್ತಿದ್ದೇನೆ.  ಇದೊಂದು ಅಚ್ಚರಿ ಮಾತ್ರವಲ್ಲ ವಿಶಿಷ್ಠವೂ ಆಗಿದೆ.  ಏನು ಕಾರಣ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಈ ಮಧ್ಯೆ, ವಿಜಯಪುರ ಜಿಲ್ಲಾಡಳಿತಕ್ಕೂ ಕೂಡ ಈ ಕುರಿತು ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Leave a Reply

ಹೊಸ ಪೋಸ್ಟ್‌