ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ

ವಿಜಯಪುರ: ರಾಷ್ಟೃಪಿತ ಮಹಾತ್ಮ ಗಾಂಧಿಜೀಯವರ 154ನೇ ಮತ್ತು ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರ 119ನೇ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಭಾರತ ಬಹುಬಾಷೆ, ಬಹುಸಂಸ್ಕೃತಿ, ಬಹುಜನಾಂಗ ಹಾಗೂ ಬಹುಜಾತಿ ವ್ಯವಸ್ಥೆ ಹೊಂದಿರುವ ದೇಶವಾಗಿದೆ.  ಹೀಗಾಗಿ ಇಲ್ಲಿ ಎಲ್ಲರೂ ಒಂದಾಗಿ ಬಾಳುವುದು ಮತ್ತು ಎಲ್ಲ ಜನಾಂಗವನ್ನು ಬೆಸೆಯಲು ಅಹಿಂಸೆ ಮಾರ್ಗವೊಂದೆ ಎಂದು ಅಹಿಂಸಾ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ರಾಷ್ಟ್ರಪಿತ ಮಹಾತ್ಮ ಗಾಂಧಿ.  ಅವರ ಮಾರ್ಗದಲ್ಲಿ ನಡೆದಾಗಲೆ 21ನೇ ಶತಮಾನದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ.  ಅದರಂತೆ ಉಕ್ಕಿನ ಮನುಷ್ಯ, ಮಾಜಿ ಪ್ರಧಾನಿ ಲಾಲ ಬಹದ್ದೂರ ಶಾಸ್ತ್ರಿ ಅವರು ರೈತರೇ ದೇಶದ ಬೆನ್ನೆಲುಬು ಎಂದು ಹೇಳಿ ಜೈ ಜವಾನ್, ಜೈ ಕಿಸಾನ್ ಎಂಬ ಘೋಷ ವಾಕ್ಯದಿಂದಲೇ ಹೆಸರುವಾಸಿಯಾದವರು.  ಇಂದು ಈ ಮಹಾತ್ಮರ ಸವಿ ನೆನಪುಗಳ ಅಂಗವಾಗಿ ಇವರುಗಳ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಅಫ್ಜಲ್ ಜಾನವೆಕರ, ಕಾಂಗ್ರೆಸ್ ಮುಖಂಡರಾದ ಡಿ. ಎಚ್. ಕಲಾಲ, ಕೆ. ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಪೀರಪ್ಪ ನಡುವಿನಮನಿ, ಡಿ. ಎಸ್. ಮುಲ್ಲಾ, ಮಲ್ಲೇಶಿ ನಾವಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಸೋಮನಾಥ ಕಳ್ಳಿಮನಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಅಂಗಘಟಕಗಳ ಅಧ್ಯಕ್ಷರಾದ ಆನಂದ ಜಾಧವ, ಎಂ. ಬಿ. ಮೆಂಡೆಗಾರ, ರಾಜೇಶ್ವರಿ ಚೋಳಕೆ, ಭಾರತಿ ಹೊಸಮನಿ, ಶಂಕರಸಿಂಗ ಹಜೇರಿ, ಲಾಲಸಾಬ ಕೊರಬು, ನಿಂಗಪ್ಪ ಸಂಗಾಪೂರ, ಫಿರೋಜ ಶೇಖ, ಇಲಿಯಾಸಅಹ್ಮದ ಸಿದ್ದಿಕಿ, ತಾಜುದ್ದೀನ ಖಲೀಫಾ, ಬಾಬು ಯಾಳವಾರ, ಮಹಾದೇವ ಜಾಧವ, ಸೈಫನ್ ಡಾಂಗೆ, ಹಾಸಿಂಪೀರ ಜಮಖಂಡಿ, ಪರಶುರಾಮ ಹೊಸಮನಿ, ಅಂಬಣ್ಣಾ ಕಲಮನಿ, ಕೃಷ್ಣಾ ಲಮಾಣಿ, ಎಂ. ಎ. ಬಕ್ಷಿ, ಬೀರಪ್ಪ ಜುಮನಾಳ, ಆಸೀಫ್ ಜುನೇದಿ, ಸಮೀಮಾ ಅಕ್ಕಲಕೋಟ, ಆಸ್ಮಾ ಕಾಲೆಬಾಗ, ವರ್ಷಾ ಭೋವಿ, ಹಮಿದಾ ಪಟೇಲ, ಲಕ್ಷ್ಮಿ ಕ್ಷೀರಸಾಗರ, ನೀಲಮ್ಮ ಕೊಟ್ರಶೆಟ್ಟಿ, ವೀರೇಶ ಕಲಾಲ, ಜಿ. ಆರ್. ತೊರಗಲ್, ಮೊಹಸೀನ್ ಇನಾಮದಾರ, ಮಹ್ಮದ ಮುಲ್ಲಾ, ರಮೇಶ ಜಿ. ಕೋರಿ, ಎ. ಆರ್. ಕಂಬಾಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌