ಎಲ್ಲ ಜಾತಿ, ಜನಾಂಗವನ್ನು ಕಾಂಗ್ರೆಸ್ ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ- ಡಿಕೆಶಿ ಯಾಕೆ ಪತ್ರ ಬರೆದಿದ್ದಾರೆ ಗೊತ್ತಿಲ್ಲ- ಸಚಿವ ಸಂತೋಷ ಲಾಡ

ವಿಜಯಪುರ: ಕಾಂಗ್ರೆಸ್ ಎಲ್ಲ ಜಾತಿ ಮತ್ತು ಜನಾಗಂದವರನ್ನು ಸಮಾನವಾಗಿ ಒಟ್ಟಿಗೆ ಕರೆದುಕೊಂಡುವ ಹೋಗುವ ಧ್ಯೇಯ ಹೊಂದಿದೆ.  ಶಾಮನೂರು ಶಿವಶಂಕರಪ್ಪ ಯಾಕೆ ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿಯ ಜನಾಂಗವನ್ನು ಸರಿಯಾಗಿ ಕರೆದುಕೊಂಡು ಹೋಗುವುದು ನಮ್ಮ ಕಾಂಗ್ರೆಸ್ ಸರಕಾರದ ಧ್ಯೇಯವಾಗಿದೆ ಎಂದು ಹೇಳಿದರು.

ಲಿಂಗಾಯತರಿಗೆ ಸ್ಥಾನ‌ಮಾನ ಸಿಗದ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಾಮನೂರು ಶಿವಶಂಕರಪ್ಪನವರು ಮಾಡಿದ ಆರೋಪಕ್ಕೆ ನಾನು ಉತ್ತರ ಕೊಡಲು ಆಗುವುದಿಲ್ಲ.  ಅವರು ಯಾವ ಆಧಾರದ ಮೇಲೆ‌ ಹೇಳಿದ್ದಾರೋ ನನಗೆ ಗೊತ್ತಿಲ್ಲ.  ಶಾಮನೂರು ಶಿವಶಂಕರಪ್ಪ ಅವರು ಹಿರಿಯರಿದ್ದಾರೆ.  ಯಾವ ಆಧಾರದ ಮೇಲೆ ಹೇಳಿದ್ದಾರೋ ನನಗೆ ಗೊತ್ತಿಲ್ಲ.  ಕಾಂಗ್ರೆಸ್ ಪಕ್ಷ ಎಲ್ಲರನ್ನು ಸಮಬಾಳು, ಸಹಬಾಳ್ವೆ ಎಂಬಂತೆ ಕರೆದುಕೊಂಡು ಹೋಗುತ್ತದೆ.  ಇದರಲ್ಲಿ ಬಣ ಯಾವುದು ಇಲ್ಲ.  ಅವರು ಅವರ ಸಮಾಜದ ಬಗ್ಗೆ ಮಾತನಾಡಿದ್ದಾರೆ ಅಷ್ಟೆ ಎಂದು ಸಚಿವರು ಹೇಳಿದರು.

ಡಿಸಿಎಂ ಡಿ. ಕೆ. ಶಿವಕುಮಾರ ಪತ್ರ ಬರೆದ ವಿಚಾರ

ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವಂತೆ ಪೊಲೀಸ್ ಇಲಾಖೆಗೆ ಡಿಸಿಎಂ ಡಿ. ಕೆ. ಶಿವಕುಮಾರ ಪತ್ರ ಬರೆದಿರುವ ವಿಚಾರದ ಕುರಿತು ಪ್ರತ್ರಿಕ್ರಿಯೆ ನೀಡಿದ ಸಂತೋಷ ಲಾಡ, ಡಿಸಿಎಂ ಯಾವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ ನನಗೆ ಗೊತ್ತಿಲ್ಲ.  ರೈತರ ಗಲಾಟೆ ವೇಳೆ ಮಾಡಿದ ಕೇಸ್, ಹೋರಾಟದ ವೇಳೆ ದಾಖಲಾದ ಕೇಸ್‌ಗಳನ್ನು ಕೈ ಬಿಡಿ ಅಂತಾ ಪತ್ರ ಬರೆಯುವುದು ಕಾಮನ್. ಆದರೆ ಡಿಕೆಶಿಯವರು ಯಾವ ಹಿನ್ನೆಲೆಯಲ್ಲಿ ಪ್ರಕರಣ ಕೈ ಬಿಡಲು ಪತ್ರ ಬರೆದಿದ್ದಾರೋ ಗೊತ್ತಿಲ್ಲ ಎಂದು ಸಚಿವರು ಹೆಚ್ಚಿನ ಮಾಹಿತಿಗೆ ಡಿಕೆಶಿ ಅವರನ್ನೇ ಕೇಳಿ ಎಂದು ಹೇಳಿದರು.

ಬಿಜೆಪಿ ಆರೋಪಗಳಿಗೆ ಆಕ್ರೋಶ

ಇದೇ ವೇಳೆ, ರಾಜ್ಯದಲ್ಲಿ ನಡೆದ ಗಲಭೆಗಳಿಗೆ ಕಾಂಗ್ರೆಸ್ ಸರಕಾರ ಕಾರಣ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮಣಿಪುರ ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ರೈತರು ಸಾವನ್ನಪ್ಪಿದ್ದರು.  ಜನರ ಮೇಲೆ ಲಾಠಿ ಚಾರ್ಜ್ ಆಗಿದೆ.  ಅದರ ಕುರಿತು ಕೇಂದ್ರದವರು ಮಾತನಾಡಲ್ಲ.  ಆಗ ಕೋಮು ಸೌಹಾರ್ದತೆಗೆ ಧಕ್ಕೆ ಬರಲಿಲ್ವಾ? ಎಂದು ಪ್ರಶ್ನಿಸಿದರು.

ಏನೇ ಆದರೂ ಬರಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ.  ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ರಾಜಕೀಯ ಗಿಮಿಕ್ ಆಗಿದೆ ಎಂದು ಹೇಳಿದ ಅವರು, ಆರು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಜೆಡಿಎಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಇನ್ನು 6 ತಿಂಗಳು ಇದೆ ಗಿಮಿಕ್ ನಡೆಯುತ್ತದೆ ನೋಡುತ್ತೀರಿ.  ಎಲ್ಲಿಯೇ ಗಲಾಟೆ ಆದರೂ ಈ ದೇಶದಲ್ಲಿ ಕಾನೂನು ಇದೆ.  ಹಿಂದೂಗಳಿಗೂ ಒಂದೇ ಕಾನೂನು.  ಮುಸ್ಲಿಮರಿಗೂ ಒಂದೇ ಕಾನೂನು.  ಗಲಭೆ ಆಗಿದ್ದರೆ ಸರಕಾರ ಇದೆ.  ಇಲಾಖೆ ಇದೆ ನೋಡುತ್ತದೆ.  ಗಲಾಟೆಗಳನ್ನೇ ಇವರು ಕಾಯುತ್ತಿರುತ್ತಾರೆ.  24 ಗಂಟೆಗಳಲ್ಲಿ ಇವರು ಇದನ್ನೇ ಮಾತನಾಡುತ್ತಾರೆ ಎಂದು ಸಚಿವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

10 ವರ್ಷದಿಂದ ಕೇಂದ್ರದಲ್ಲಿ ಆಧಿಕಾರದಲ್ಲಿದ್ದಾರೆ.  ಬರೀ ಹಿಂದೂ-ಮುಸ್ಲಿಂ ಎನ್ನುತ್ತಿದ್ದಾರೆ.  ಯಾವ ಹಿಂದೂ, ಯಾವ ಮುಸ್ಲಿಂ ಬಡ ರೇಖೆಯಿಂದ ಮೇಲೆ ಬಂದಿದ್ದಾರೆ? ಹೇಳಿ ಎಂದು ಪ್ರಧಾನಿ ಮನ್ ಕಿ ಬಾತ್ ಕುರಿತು ಕುಟುಕಿದ ಸಚಿವರು, ಜಿಡಿಪಿ ದರ ಎಲ್ಲಾ ಪ್ರಚಾರಕ್ಕೆ ಆಗಿದೆ.  ಹಿಂದೆಯೂ ನಮ್ಮ ಜಿಡಿಪಿ ಚೆನ್ನಾಗಿತ್ತು.  5ನೇ ಸ್ಥಾನದಿಂಧ 3ನೇ ಸ್ಥಾನಕ್ಕೆ ಹೋಗಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ.  ಅಮೇರಿಕಾ ಚೀನಾದ ಜಿಡಿಪಿ ದರ ಎಷ್ಟಿದೆ? ಚೀನಾದಷ್ಟು ಜನಸಂಖ್ಯೆಯನ್ನು ಹೊಂದಿರೋ ನಾವು ಅವರಿಗಿಂತೆ ಎಷ್ಟು ಕೆಳಗಿದ್ದೇವೇ ಎಂದು ಹೇಳಲಿ ಎಂದು ಅವರು ಸವಾಲು ಹಾಕಿದರು.

ಲೋಸಕಸಭಾ ಚುನಾವಣೆಯ ಗಿಮಿಕ್ ಮಾಡುತ್ತಾರೆ.  ಕಳೆದ ಬಾರಿ ಪುಲ್ವಾಮಾದಲ್ಲಿ ಸೈನಿಕರ ಮೇಳಿನ ದಾಳಿ ಪ್ರಚಾರವನ್ನಾಗಿ ಮಾಡಿಕೊಂಡರು.  350 ಕೆಜಿಗೂ ಆಧಿಕ ಆರ್ ಡಿ ಎಕ್ಸ್ ಎಲ್ಲಿಂದ ಬಂತು ಎಂದು ಮಾಹಿತಿ ನೀಡಲು ಕೇಂದ್ರ ಮತ್ತು ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ.  ಪುಲ್ವಾಮಾ ದಾಳಿಯನ್ನು ಪ್ರಚಾರಕ್ಕೆ ಮಾತ್ರ ಬಳಿಸಿಕೊಂಡರು.  ಆರ್ ಡಿ ಎಕ್ಸ್ ಮೂಲವನ್ನು ಹೇಳಿಲ್ಲ.  ಭಯೋತ್ಪಾದಕರು ಎಲ್ಲಿಂದ ಬರುತ್ತಾರೆ? ಕೇಂದ್ರ ಸರಕಾರ ಏನು ಮಾಡುತ್ತಿದೆ? ಎಲ್ಲಾ ಮಾಧ್ಯಮಗಳಲ್ಲಿ ಮೋದಿ ಬಿಟ್ಟು ಯಾರೋ ಕಾಣಿಸಲ್ಲ.  ಸಚಿವರು, ರಾಷ್ಟ್ರಪತಿಗಳು ಹಿರಿಯ ಆಧಿಕಾರಿಗಳು ಯಾರೂ ಬರಲ್ಲ.  ಕೇವಲ ಮೋದಿ ಮೋದಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌