ವಿಜಯಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ವ್ಹಾಲಿಬಾಲ್ ಸಂಸ್ಥೆಯ ಉಪಾಧ್ಯಕ್ಷ ಬಿ. ಎಂ. ಕೋಕರೆ ಆಗ್ರಹಿಸಿದ್ದಾರೆ.
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದ ಆಶ್ರಯದಲ್ಲಿ ಬುಧವಾರ ಪ್ರಾರಂಭವಾದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಲಬುರಗಿ ವಲಯ ಪುರುಷರ ಹಾಗೂ ಮಹಿಳೆಯರ ವಿಭಾಗದ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಜನ ವ್ಹಾಲಿಬಾಲ್ ಪ್ರೀಯರಾಗಿದ್ದಾರೆ. ಈ ಹಿಂದೆಯೂ ವಿಜಯಪುರದಲ್ಲಿ ಆರೇಳು ರಾಷ್ಟ್ರೀಯ ವ್ಹಾಲಿಬಾಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದೇವೆ. ಈಗ ಬಿ.ಎಲ್.ಡಿ.ಇ ಸಂಸ್ಥೆಯೂ ಕೂಡ ಅತ್ಯುತ್ತಮ ಪಂದ್ಯಾವಳಿ ಆಯೋಜಿಸಿದೆ. ಎಲ್ಲ ಕ್ರೀಡಾಪಟುಗಳು ಮತ್ತು ತರಬೇತುದಾರರು ದೇಶದ ಸಲುವಾಗಿ ಆಟವಾಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೇ ರೀತಿ ರಾಜ್ಯ ಸರಕಾರ ಕೂಡ ಪಂಜಾಬ ಮಾದರಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸರಕಾರಿ ನೇಮಕಾತಿಗಳಲ್ಲಿ ಉನ್ನತ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಂದ್ಯಾವಳಿಯ ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ, ಸಂಯೋಜಕ ಡಾ. ರುದ್ರಗೌಡ ಪಾಟೀಲ, ಡಾ. ಕೈಲಾಸ ಹಿರೇಮಠ, ಹಿರಿಯ ಕ್ರೀಡಾ ನಿರ್ದೇಶಕರಾದ ಆರ್. ಆರ್. ಕುಲಕರ್ಣಿ, ಡಾ. ನಜೀರ ಮಮದಾಪುರ, ಆರ್. ಜೆ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಶ್ರೀಧರಕುಮಾರ ಬಿರಾದಾರ ನಿರೂಪಿಸಿದರು. ಈ ಕ್ರೀಡಾಕೂಟದಲ್ಲಿ 18 ಪುರುಷ ಹಾಗೂ 8 ಮಹಿಳಾ ತಂಡಗಳು ಭಾಗವಹಿಸಿದ್ದರು.
ಪುರುಷರ ವಿಭಾಗದಲ್ಲಿ ಕಲಬುರಗಿ ಜಿಮ್ಸ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಬಾಗಲಕೋಟೆಯ ಎಸ್ಎನ್ಎಂಸಿ ತಂಡಗಳು ಜಯಗಳಿಸಿದವು.
ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ ಮತ್ತು ಕಲಬುರಗಿ ವಲಯದ ಸಂಯೋಜಕ ನೈತಲನ, ಪಂದ್ಯಾವಳಿ ಸಂಯೋಜಕ ಡಾ. ರುದ್ರಗೌಡ ಪಾಟೀಲ, ಡಾ ಶ್ರೀಧರಕುಮಾರ ಬಿರಾದಾರ, ಡಾ. ವಿನೋದ ರೆಡ್ಡಿ, ಎಸ್. ಎಸ್. ಕೋರಿ, ಕೈಲಾಸ ಹಿರೇಮಠ, ಆರ್. ಆರ್. ಕುಲಕರ್ಣಿ ಪ್ರಶಸ್ತಿ ಪ್ರಧಾನ ಮಾಡಿದರು.
ಅಂತರವಲಯ ವ್ಹಾಲಿಬಾಲ್ ಪಂದ್ಯಾವಳಿ
ಇದೇ ರೀತಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಂತರವಲಯ
ಪುರುಷರ ಹಾಗೂ ಮಹಿಳೆಯರ ವಿಭಾಗದ ವ್ಹಾಲಿಬಾಲ್ ಪಂದ್ಯಾವಳಿ ಮತ್ತು ಆಯ್ಕೆ ಟ್ರಯಲ್ಸ್ ಇಂದು ಶುಕ್ರವಾರ ನಡೆಯಿತು.
ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪಂದ್ಯಾವಳಿಯನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್. ಬಿ. ಕೊಟ್ನಾಳ, ಪ್ರತಿಯೊಬ್ಬರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕರ ಸಂಘದ ಅಧ್ಯಕ್ಷ ಜೋಸೆಫಕುಮಾರ, ಪ್ರಧಾನ ಕಾರ್ಯದರ್ಶಿ ಡಾ. ಎಸ್. ಎಂ. ಸುರೇಶ, ಎಸ್. ಎಸ್. ಕೋರಿ, ಕೈಲಾಸ ಹಿರೇಮಠ, ಕಾಲೇಜಿನ ಪ್ರಾಚಾರ್ಯ ಸಿ. ಸಿ. ಪಾಟೀಲ, ಪ್ರಾಧ್ಯಾಪಕ ಡಾ. ಆರ್. ಜಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಡಾ. ರುದ್ರಗೌಡ ಪಾಟೀಲ ಸ್ವಾಗತಿಸಿದರು. ಡಾ ಸುನಂದಾ ನಂದಿಕೋಲ ಮತ್ತು ರಿಯೋ ಹಸ್ತಿ ಕೇನಿಯಾ ನಿರೂಪಿಸಿದರು. ಸಂಜೀವ ಚೂರಿ ವಂದಿಸಿದರು.