ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ರವಿ ಕಿತ್ತೂರ ಅವಿರೋಧ ಆಯ್ಕೆ

ವಿಜಯಪುರ: ಜಿಲ್ಲಾಸ್ಪತ್ರೆಯ ಎ ಆರ್ ಟಿ ವಿಭಾಗದ ಹಿರಿಯ ಆಪ್ತ ಸಮಾಲೋಚಕಮುಖ್ಯಸ್ಥ ರವಿ ಕಿತ್ತೂರ ಅವರು ರಾಜ್ಯ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 35 ಜನ ಪದಾಧಿಕಾರಿಗಳು ಚುನಾವಣೆಯಲ್ಲಿ 34 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರಲ್ಲಿ ರವಿ ಕಿತ್ತೂರ ಅವರು ಸಂಘಟನಾ ಕಾರ್ಯದರ್ಶಿಯಾಗಿ

ಅವಿರೋಧ ಆಯ್ಕೆಯಾಗಿದ್ದಾರೆ.  ಕಳೆದ ಬಾರಿ ಅವರು ಸಹ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ ಮಾರ್ಗದರ್ಶನದಲ್ಲಿ ಸಚಿವರಾದ ಬೈರತಿ ಸುರೇಶ, ಮಾಜಿ ಸಚಿವರಾದ ಎಚ್. ಎಂ. ರೇವಣ್ಣ, ಎಚ್. ವಿಶ್ವನಾಥ, ಬಂಡೆಪ್ಪ ಕಾಶಂಪುರ. ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ವೆಂಕಟೇಶ್ ಮೂರ್ತಿ. ರಾಮಕೃಷ್ಣ ಅವರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

102 ವರ್ಷ ಇತಿಹಾಸ ಹೊಂದಿದ ಕುರುಬ ಸಮಾಜದ ಸಂಘಕ್ಕೆ ತಾವು ಕಳೆದ ಅವಧಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಮಾಜದ ಮುಖಂಡರು ತಮಗೆ ಈಗ ಬಡ್ತಿ ನೀಡಿ ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿರುವದು ಸಂತಸ ತಂದಿದೆ ಎಂದು ರವಿ ಕಿತ್ತೂರ ಬಸವ ನಾಡು ವೆಬ್ ಗೆ ಸಂತಸ ಹಂಚಿಕೊಂಡಿದ್ದಾರೆ.

ರವಿ ಕಿತ್ತೂರ ಅವರಿಗೆ ರಾಜ್ಯ ನಾಯಕರಿಗೆ ಹಾಗೂ ರಾಜ್ಯದ 118 ನಿರ್ದೇಶಕರಿಗೆ ಜಿಲ್ಲೆಯ ಹಾಲುಮತ ಸಮಾಜದ ಅಧ್ಯಕ್ಷರು. ಮುಖಂಡರು ನೌಕರರ ವರ್ಗದವರು  ಸಂಘಟನೆಗಳ ಮುಖಂಡರು ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌