ಬಾಗಲಕೋಟೆ: ಹೊಮಿಯೋಪಥಿ ಹೊಸ ಔಷಧಿಗಳ ಸಂಶೋಧನೆಗಳನ್ನು ವೈದ್ಯಕೀಯ ಕ್ಷೇತ್ರಕ್ಕೆ ಪರಿಚಯಿಸುವುದು ಸಂಶೋಧಕರ ಮುಖ್ಯ ಕರ್ತವ್ಯವಾಗಿದೆ ಎಂದು ದೆಹಲಿಯ ಹೋಮಿಯೋಪಥಿ ಸಂಶೋಧಕ ಡಾ. ರಂಜೀತ ಕಾಂತ ಹೇಳಿದ್ದಾರೆ.
ನಗರದ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೋಮಿಯೋಪಥಿ ಔಷಧಿಗಳ ಪ್ರಮಾಣಿಕರಣ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾಯಾ೯ಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ ಇಲಾಖೆಯ ಹೋಮಿಯೋಪಥಿ ಉಪನಿದೇ೯ಶಕ ಡಾ. ಅಶ್ವಥನಾರಾಯಣ ಮಾತನಾಡಿ, ಯುವ ವೈದ್ಯರು ದುಡ್ಡಿನ ಹಿಂದೆ ಬೀಳದೇ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಆಯುಷ್ ಇಲಾಖೆಯ ನಿಕಟಪೂವ೯ ನಿದೇ೯ಶಕ ಡಾ. ಎ. ಎಲ್. ಪಾಟೀಲ ಮಾತನಾಡಿ, ಇಂಥ ಕಾಯಾ೯ಗಾರಗಳಿಂದ ವೃತ್ತಿನಿರತ ವೈದ್ಯರ ಮತ್ತು ಉಪನ್ಯಾಸಕರ ವೃತ್ತಿಕೌಶಲ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ ಅರುಣ ಹೂಲಿ, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿದರು.
ರಾಜ್ಯದ ನಾನಾ ಜಿಲ್ಲೆಗಳು ಮತ್ತು ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾಥಿ೯ಗಳು, ಪಿ.ಎಚ್. ಡಿ ವೈದ್ಯ ವಿದ್ಯಾಥಿ೯ಗಳು – ಉಪನ್ಯಾಸಕರು ಹಾಗೂ ವೈದ್ಯರು ಸೇರಿದಂತೆ 150 ಕ್ಕೂ ಹೆಚ್ಚು ಜನ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಡಾ. ಮಿಲಿಂದ ಬೆಳಗಾಂವಕರ ಸ್ವಾಗತಿಸಿದರು. ಡಾ. ಹಾಜಿಮಲಂಗ ತಾಂಬೋಲಿ ವಂದಿಸಿದರು. ಡಾ. ನಿಧಿ ಬೆಳಗಾಂವಕರ
ನಿರೂಪಿಸಿದರು. ಕಾಯಾ೯ಗಾರ ಸಂಯೋಜಕಿ ಡಾ. ಫಾತೀಮಾ ಬಾಲಸಿಂಗ. ಡಾ. ನಿಂಗಾರೆಡ್ಡಿ ಪಾಟೀಲ. ಹಿರಿಯ ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ, ಡಾ. ಸುಧೀರ ಬೆಟಗೇರಿ, ಡಾ. ರುದ್ರೇಶ ಕೊಪ್ಪಳ, ಡಾ. ಅಮರೇಶ ಬಳಗಾನೂರ, ಡಾ. ವಿಜಯಲಕ್ಷ್ಮಿ ಪಾಟೀಲ. ಬೆಂಗಳೂರಿನ ಡಾ. ಶರಣಬಸಪ್ಪ ಹಕ್ಕಲದಡ್ಡಿ, ಮೂಡಬಿದ್ರೆಯ ಡಾ. ಯುಸೂಫ ಖಾದ್ರಿ, ಡಾ. ಬೀಬಿ ಆಸ್ಮಾ ದೇಸಾಯಿ, ಮಂಗಳೂರಿನ ಡಾ. ಜೋಸೆಫ್ ಥಾಮಸ್, ಬೆಳಗಾವಿಯ ಡಾ. ಜ್ಯೋತಿ ಕಾಮತ, ಧಾರವಾಡನ ಡಾ. ಪ್ರವೀಣ ಕುಲಕರ್ಣಿ ಮಂತಾದವರು ಉಪಸ್ಥಿತರಿದ್ದರು.