ಬಸವ ನಾಡಿಗೆ ಬಂದ ಕಿತ್ತೂರು ಚನ್ನಮ್ಮ ವಿಜಯ ವೀರಜ್ಯೋತಿ ಯಾತ್ರೆ- ಅಧಿಕಾರಿಗಳು, ಗಣ್ಯರಿಂದ ಸ್ವಾಗತ

ವಿಜಯಪುರ: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ  ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಕಿತ್ತೂರು ಚನ್ನಮ್ಮ ಅವರು ಬ್ರಿಟಿಷ್ರ ವಿರುದ್ಧ ಹೋರಾಟ ನಡೆಸಿದರು.  ಅವರ ಹೋರಾಟ, ತ್ಯಾಗ, ಬಲಿದಾನ ಹಾಗೂ ಅವರ ದೇಶ ಭಕ್ತಿ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಿತ್ತೂರು ಚನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು. ಕಿತ್ತೂರ ಚನ್ನಮ್ಮ ಅವರ ಸ್ವಾತಂತ್ರ‍್ಯ ಹೋರಾಟದ ಕುರಿತಾಗಿ ಮಾತನಾಡಿದರು.

ಐತಿಹಾಸಿಕ ಕಿತ್ತೂರು ಉತ್ಸವವು ಇದೇ ಅಕ್ಟೋಬರ್ 23 ರಿಂದ 25 ವರೆಗೆ ಕಿತ್ತೂರಿನಲ್ಲಿ ನಡೆಯುವುದು. ಕಿತ್ತೂರು ಉತ್ಸವದ ಅಂಗವಾಗಿ ಅಕ್ಟೋಬರ್ 13 ರಂದು ಕಿತ್ತೂರು ಚನ್ನಮ್ಮಾಜಿಯವರ ವಿಜಯ ವೀರಜ್ಯೋತಿ ಯಾತ್ರೆಯು ಬೆಂಗಳೂರಿನಿAದ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಚನ್ನಮ್ಮಾಜೀಯವರ ವಿಜಯ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ವಿಜಯಪುರಕ್ಕೆ ಆಗಮಿಸಿದ ಕಿತ್ತೂರು ಚನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಅಧಿಕಾರಿಗಳು, ಗಣ್ಯರು ಸ್ವಾಗತ ಕೋರಿ ಪೂಜೆ ಸಲ್ಲಿಸಿದರು

ಈ ವಿಜಯ ಜ್ಯೋತಿ ಯಾತ್ರೆಯು  ಭಾನುವಾರ ಸಂಜೆ ಬಾಗಲಕೋಟೆಯಿಂದ ಜಿಲ್ಲೆಯ ಕೋಲ್ಹಾರಕ್ಕೆ ಆಗಮಿಸಿತು.  ಕೋಲ್ಹಾರ  ತಹ,ಸೀಲ್ದಾರ ಅವರು ಗೌರವದಿಂದ ಬರಮಾಡಿಕೊಂಡರು.

ನಗರಕ್ಕೆ ಆಗಮಿಸಿದ ವಿಜಯ ವೀರಜ್ಯೋತಿಯನ್ನು ಬರಮಾಡಿಕೊಂಡು ವೀರ ಜ್ಯೋತಿಯ ಪೂಜಾ ಕಾರ್ಯಕ್ರಮ ಕೈಗೊಂಡು, ಕಲಾತಂಡಗಳೊAದಿಗೆ ಮೆರವಣಿಗೆ ಮೂಲಕ ವೀರಜ್ಯೋತಿಯನ್ನು ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ವಿಜಯಪುರದ ಉಪವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ವಿಜಯಪುರ ತಹಸೀಲ್ದಾರ ಕವಿತಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸೇರಿದಂತೆ, ನಾನಾ ಇಲಾಖೆಗಳ ಅಧಿಕಾರಿಗಳಉ, ಸಿಬ್ಬಂದಿ, ಮುಖಂಡರಾದ ಶ್ರೀಶೈಲ ಬುಕ್ಕಣ್ಣಿ, ವಿಜಯ ಹಿರೊಳ್ಳಿ, ನಿಂಗನಗೌಡ ಸೋಲಾಪೂರ, ಸಿದ್ದು ಅವಟಿ, ಸಂದೀಪ ಇಂಡಿ, ಸದಾಶಿವ ಹಳ್ಳಿಗಿಡದ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌