ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ 2023-24ನೇ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಮತ್ತು ಬಾಯ್ಲರ್ ಪ್ರದೀಪನಾ ಸಮಾರಂಭ ನಡೆಯಿತು.
ಕಾರ್ಖಾನೆಯ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೀಳೂರಿನ ಶ್ರೀ ಮುರುಗೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಮೂರು ದಶಕಗಳ ಹಿಂದೆ ಈ ಭಾಗದ ಒಡನಾಟ ಹಾಗೂ ರೈತರ ಜೀವನ ಶೈಲಿಯನ್ನು ನಾನು ನೋಡಿದ್ದೇನೆ. ಕೃಷ್ಣಾನದಿ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಈ ಭಾಗದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಾಗಿವೆ. ಯಾವುದಕ್ಕೂ ಕಮ್ಮಿ ಇಲ್ಲದಂತೆ ನಮ್ಮ ರೈತರು ಜೀವನ ನಡೆಸುತ್ತಿದ್ದಾರೆ. ಸೈಕಲ್ ಮೇಲೆ ಅಡ್ಡಾಡುವವರು ಲಕ್ಷಾಂತರ ಮೌಲ್ಯದ ಕಾರುಗಳನ್ನು ಖರೀದಿಸಿದ್ದಾರೆ. ಈ ಭಾಗದ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯನ್ನು ಬೆಳೆಯಲಿ. ರೈತರು ತಮ್ಮ ಅಭಿವೃದ್ದಿಯ ಜೊತೆಗೆ ಕಾರ್ಖಾನೆಯ ಒಳ್ಳೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಖಾನೆಯ ನಿರ್ದೇಶಕ ಅದೃಷಪ್ಪ ದೇಸಾಯಿ ಮಾತನಾಡಿ, ಈ ಭಾಗದ ರೈತರು ಹಲವು ವರ್ಷಗಳಿಂದ ಕಾರ್ಖಾನೆಗೆ ಕಬ್ಬು ಕಳಿಸುವುದರ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. 2023-24 ನೇ ಕಬ್ಬು ನುರಿಸುವ ಹಂಗಾಮಿನಲ್ಲಿ ನಮ್ಮ ಭಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಸಕ್ಕರೆ ಕಾರ್ಖಾನೆಗಳು ಕೆಲವೇ ದಿನ ನಡೆಯುತ್ತಿರುತ್ತವೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಕಬ್ಬು ಪೂರೈಸಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಮಾರಂಭದಲ್ಲಿ ಮರೇಗುದ್ದಿ ಶ್ರೀ ತೋಂಟದಾರ್ಯ ಸ್ವಾಮೀಜಿ, ಬೂದಿಹಾಳ ಶ್ರೀ ಫಕೀರೇಶ್ವರ ಸ್ವಾಮೀಜಿ, ಮಮದಾಪೂರ ಶ್ರೀ ಅಭಿನವ ಮುರುಗೇಂದರ ಸ್ವಾಮೀಜಿ, ಕೊಣ್ಣೂರ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು, ಗುಣದಾಳದ ಶ್ರೀ ವಿವೇಕಾನಂದ ದೇವರು, ಬಬಲಾದಿಯ ಶ್ರೀ ಸದಾಶಿವ ಹೊಳೆಮಠ, ಬಿದರಿಯ ಬಸಯ್ಯಾ ಹಿರೇಮಠ, ಬರಡೋಲದ ಮುತ್ತು ಹಿರೇಮಠ, ಕಣಬೂರದ ರಾಚಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಗಲಗಲಿಯ ಕಟ್ಟಿ ರಾಮಾಚಾರ್ಯರರು ಪೂಜಾ ವಿಧಿ- ವಿಧಾನ ನೆರವೇರಿಸಿದರು. ನಿರ್ದೇಶಕರಾದ ಸಂಜಯಗೌಡ ಗೌಡಪ್ಪಗೌಡ ಪಾಟೀಲ ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಅಶೋಕ ಲೆಂಕೆಣ್ಣವರ, ನಿರ್ದೇಶಕರಾದ ಎಚ್. ಎಸ್. ಕೋರಡ್ಡಿ, ಈರನಗೌಡ ಬಸನಗೌಡ ನ್ಯಾಮಗೌಡರ, ರಮೇಶ ಜಕರಡ್ಡಿ, ಬಸನಗೌಡ ದುಂಡಪ್ಪಗೌಡ ಪಾಟೀಲ, ಜಿ. ಕೆ. ಕೋಣಪ್ಪನ್ನವರ, ಹಣಮಂತ ಕೊಣ್ಣೂರ, ಮಲ್ಲಪ್ಪ ಭೀಮಪ್ಪ ಮಾದರ, ಸೋಮನಗೌಡ ರಾಮನಗೌಡ ಪಾಟೀಲ, ರತ್ನವ್ವ ಪಾಂಡಪ್ಪ ಬಿರಾದಾರ, ಲಕ್ಷ್ಮಿಬಾಯಿ ಪಾಂಡುಸಾಹುಕಾರ ದೊಡಮನಿ, ಶರಶ್ಚಂದ್ರ(ಕುಮಾರ) ತಿಮ್ಮನಗೌಡ ಪಾಟೀಲ, ಗುರಲಿಂಗಪ್ಪ ದುಂಡಪ್ಪ ಅಂಗಡಿ, ಸತ್ಯಜೀತ ಶಿವಾನಂದ ಪಾಟೀಲ, ಶ್ರೀನಿವಾಸ ನಿಡೋಣಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ಎx. ಪಾಟೀಲ ಮತ್ತು ಸುತ್ತ- ಮುತ್ತಲಿನ ರೈತರು, ಷೇರು ಸದಸ್ಯರು, ಗಣ್ಯರು, ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು ಉಪಸ್ಥಿತರಿದ್ದರು.
ವಿ. ಜಿ. ಬಿರಾದಾರ ಪಾಟೀಲ ನಿರೂಪಿಲಿಗಪು, ಕಬ್ಬು ಅಭಿವೃದ್ದಿ ಅಧಿಕಾರಿ ಎx. ಎಲ್. ಪಚ್ಚನ್ನವರ ವಂದಿಸಿದರು.